HD Devegowda: ಮಾಜಿ ಪ್ರಧಾನಿ ದೇವೇಗೌಡರ ಬಗ್ಗೆ ಪಿಹೆಚ್. ಡಿ ಸಂಶೋಧನೆಯಲ್ಲಿ ತೊಡಗಿರುವ ಬಿಜೆಪಿ ನಾಯಕ ಸಿಟಿ ರವಿ

Aug 11, 2021

 

ಬೆಂಗಳೂರು: ಜೆಡಿಎಸ್ ಹಿರಿಯ ನಾಯಕ,​ ಮಾಜಿ ಪ್ರಧಾನಿ ಹೆಚ್​ ಡಿ ದೇವೇಗೌಡ ಅವರು ಕನ್ನಡ ನಾಡು ಕಂಡ ಅಪ್ರತಿಮ ರಾಜಕಾರಣಿ. ರಾಜಕೀಯ ಗಣಿ ದೇವೇಗೌಡರ ಬಗ್ಗೆ ಹೇಳುವುದಕ್ಕೆ ಕೇಳುವುದಕ್ಕೆ ಅಸಂಖ್ಯಾತ ವಿಷಯಗಳು, ಮಾಹಿತಿಯಿದೆ. ಅಂತಹ ವ್ಯಕ್ತಿಯ ಬಗ್ಗೆ ಪಿಹೆಚ್. ಡಿ ಸಂಶೋಧನೆ, ಅಧ್ಯಯನ ಮಾಡುವುದು (Ph.D Thesis) ಹೆಮ್ಮೆಯ ವಿಷಯ. ಅಂತಹ ಕಾರ್ಯಕ್ಕೆ ಕರ್ನಾಟಕದ ಬಿಜೆಪಿ ನಾಯಕ, ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿ ಅವರು ಕೈಹಾಕಿದ್ದಾರೆ.

ಕರ್ನಾಟಕ ಮುಕ್ತ ವಿಶ್ವವಿದ್ಯಾಲಯದಲ್ಲಿ (ಕರಾಮುವಿ) ರಾಜ್ಯಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಸಿಟಿ ರವಿ ಅವರು ಇದೇ ವಿವಿಯಲ್ಲಿ ದೇವೇಗೌಡರ (HD Devegowda) ಬಗ್ಗೆ ಪಿಹೆಚ್. ಡಿ ಸಂಶೋಧನೆ ಮಾಡಲು ನೋಂದಣಿ ಮಾಡಿಕೊಂಡಿದ್ದಾರೆ.

88 ರ ಹರೆಯದಲ್ಲೂ ದೊಡ್ಡಗೌಡರ ಉತ್ಸಾಹ, ಲವಲವಿಕೆಯನ್ನು ಪ್ರಶಂಸಿಸಿರುವ ಚಿಕ್ಕಮಗಳೂರು ಮೂಲದ 55 ವರ್ಷದ ಸಿ ಟಿ ರವಿ (CT Ravi) ಭಾರತದ ರಾಜಕೀಯ ವಿಚಾರವಾಗಿ ಅವರ ಜ್ಞಾನ ಮತ್ತು ಅನುಭವ ಅಪಾರವಾದದ್ದು ಎಂದು ಟ್ವೀಟ್​ನಲ್ಲಿ​ ಅಭಿಪ್ರಾಯಪಟ್ಟಿದ್ದಾರೆ. ಹೆಚ್​ಡಿ ದೇವೇಗೌಡರನ್ನು ಇತ್ತೀಚೆಗೆ ನವದೆಹಲಿಯಲ್ಲಿ ಅವರ ನಿವಾಸದಲ್ಲಿ ಸಿ ಟಿ ರವಿ ಭೇಟಿಯಾಗಿದ್ದರು. ಆ ವೇಳೆ ವಿಧೇಯ ವಿದ್ಯಾರ್ಥಿಯಂತೆ ದೇವೇಗೌಡ ಜೀವನದ ಬಗ್ಗೆ ಸಂಶೋಧನಾ ಮಾಹಿತಿ ಹಂಚಿಕೊಂಡರು.

ಸಿ ಟಿ ರವಿ ಟ್ವೀಟ್ ಸಾರಾಂಶ ಹೀಗಿದೆ:
As part of my Ph.D Thesis, I had an enlightening session with former PM Sri @H_D_Devegowda at New Delhi.
I must appreciate zeal & passion Gowdaru displays at the age of 88. His knowledge & experience on Indian politics is phenomenal. Thank You Gowdare for sharing Your wisdom Folded hands

Source: tv9 kannada