Coronavirus cases in India: ದೇಶದಲ್ಲಿ 40,120 ಹೊಸ ಕೊವಿಡ್ ಪ್ರಕರಣ ಪತ್ತೆ, 585 ಮಂದಿ ಸಾವು
ದೆಹಲಿ: ಕಳೆದ 24 ಗಂಟೆಗಳಲ್ಲಿ ಭಾರತದಲ್ಲಿ 40,120 ಹೊಸ ಕೊವಿಡ್ -19 ಪ್ರಕರಣಗಳು ದಾಖಲಾಗಿದ್ದು ಒಟ್ಟು ಪ್ರಕರಣಗಳ ಸ ಸಂಖ್ಯೆಯನ್ನು 3.21 ಕೋಟಿಗೆ ತಲುಪಿದೆ. ಹೊಸ ಪ್ರಕರಣಗಳಲ್ಲಿ, ಸಕ್ರಿಯ ಪ್ರಕರಣಗಳು 3.85 ಲಕ್ಷಕ್ಕೆ ಇಳಿದಿದ್ದು, ಚೇತರಿಕೆ ಸಂಖ್ಯೆ 3.13 ಕೋಟಿಗೆ ಏರಿಕೆಯಾಗಿದೆ. 21,445 ಸೋಂಕುಗಳೊಂದಿಗೆ ಕೇರಳವು ಅಗ್ರಸ್ಥಾನದಲ್ಲಿದೆ. ದೇಶವು 585 ಸಾವುಗಳನ್ನು ದಾಖಲಿಸಿದ್ದು ಒಟ್ಟು ಸಂಖ್ಯೆ ಈಗ 4.3 ಲಕ್ಷವನ್ನು ಮೀರಿದೆ.
ಏತನ್ಮಧ್ಯೆ, ದೆಹಲಿಯಲ್ಲಿ ಗುರುವಾರ ಕೊವಿಡ್ -19 ನಿಂದ ಯಾವುದೇ ಸಾವು ದಾಖಲಾಗಿಲ್ಲ, ದೈನಂದಿನ ಸಾವಿನ ಸಂಖ್ಯೆ ಶೂನ್ಯವಾಗಿರುವ ಸತತ ಎರಡನೇ ದಿನ, 49 ಹೊಸ ಪ್ರಕರಣಗಳು ಶೇಕಡಾ 0.07 ರಷ್ಟು ಸಕಾರಾತ್ಮಕತೆಯೊಂದಿಗೆ ವರದಿಯಾಗಿವೆ ಎಂದು ದೆಹಲಿ ಆರೋಗ್ಯ ಇಲಾಖೆ ಹೇಳಿದೆ . ರಾಷ್ಟ್ರೀಯ ರಾಜಧಾನಿಯಲ್ಲಿ ಸಾಂಕ್ರಾಮಿಕ ರೋಗದ ಎರಡನೇ ಅಲೆ ಆರಂಭವಾದಾಗಿನಿಂದ ಇದು ಎಂಟು ಬಾರಿ, ಒಂದು ದಿನದಲ್ಲಿ ಶೂನ್ಯ ಸಾವು ದಾಖಲಾಗಿದೆ.
ಮತ್ತೊಂದು ಬೆಳವಣಿಗೆಯಲ್ಲಿ ಮುಂಬೈಯಲ್ಲಿ ,ಡೆಲ್ಟಾ ಪ್ಲಸ್ ರೂಪಾಂತರಿಯಿಂದಾಗಿ 63 ವರ್ಷದ ಮಹಿಳೆ ಘಾಟ್ಕೋಪರ್ನಲ್ಲಿ ಜುಲೈನಲ್ಲಿ ಬಲಿಯಾಗಿದ್ದಾರೆ. ಇದು ಡೆಲ್ಟಾ ಪ್ಲಸ್ ರೂಪಾಂತರದಿಂದಾಗಿ ಮಹಾರಾಷ್ಟ್ರದಲ್ಲಿ ವರದಿಯಾದ ಎರಡನೇ ಸಾವು. ಮೊದಲನೆಯದು ರತ್ನಗಿರಿಯ 80 ವರ್ಷದ ಮಹಿಳೆ, ಅವರು ಜೂನ್ 13 ರಂದು ಸಾವಿಗೀಡಾಗಿದ್ದರು. ಡೆಲ್ಟಾ ಪ್ಲಸ್ ಎನ್ನುವುದು ಸಾರ್ಸ್- CoV-2 (B.1.617.2) ನ ಹೆಚ್ಚು ಹರಡುವ ಡೆಲ್ಟಾ ರೂಪಾಂತರದ ರೂಪಾಂತರವಾಗಿದೆ.
ಶುಕ್ರವಾರ ಬೆಳಗ್ಗೆ 8 ಗಂಟೆಗೆ ಆರೋಗ್ಯ ಸಚಿವಾಲಯ ಬಿಡುಗಡೆ ಮಾಡಿದ ಮಾಹಿತಿಯ ಪ್ರಕಾರ ಕೊವಿಡ್ -19 ರ ಸಕ್ರಿಯ ಪ್ರಕರಣಗಳು ಅದೇ ಅವಧಿಯಲ್ಲಿ 38,5227 ಕ್ಕೆ ಇಳಿದಿದೆ. ಕೊರೊನಾವೈರಸ್ ಕಾಯಿಲೆಯಿಂದ ಚೇತರಿಸಿಕೊಂಡವರ ಸಂಖ್ಯೆ 31,30,2345 ಕ್ಕೆ ಏರಿಕೆಯಾಗಿದೆ. ಆದರೆ ಪ್ರಕರಣದ ಸಾವಿನ ಪ್ರಮಾಣವು 1.34 ಶೇಕಡಾ ಇದೆ. ರಾಷ್ಟ್ರೀಯ ಕೋವಿಡ್ -19 ಚೇತರಿಕೆಯ ಪ್ರಮಾಣವು ಶೇಕಡಾ 97.45 ಕ್ಕೆ ತಲುಪಿದೆ.
Source: tv9 kannada