BMTC Bus Pass: ವಿದ್ಯಾರ್ಥಿಗಳೇ ಗಮನಿಸಿ, ಬಿಎಂಟಿಸಿ ಬಸ್ ಪಾಸ್ ಅವಧಿ ವಿಸ್ತರಣೆ

Aug 31, 2021

ಬೆಂಗಳೂರು: ವಿದ್ಯಾರ್ಥಿಗಳಿಗೆ 2020-2021ನೇ ಬಿಎಂಟಿಸಿ ಸಾಲಿನ ಬಸ್​ಪಾಸ್ ಅವಧಿ ವಿಸ್ತರಣೆ ಮಾಡಿ ಆದೇಶಿಸಲಾಗಿದೆ. 2021ರ ಸೆಪ್ಟೆಂಬರ್ 30ರವರೆಗೆ ಬಸ್ ಪಾಸ್ ಅವಧಿ ವಿಸ್ತರಣೆ ಮಾಡಲಾಗಿದೆ. ಬಿಎಂಟಿಸಿ ಪಾಸ್ ಅವಧಿ ವಿಸ್ತರಣೇ ಆದೇಶ ಐಟಿಐ, ಡಿಪ್ಲೊಮಾ, ಪದವಿ, ಪಿಜಿ, ಸಂಶೋಧಕರು, ತಾಂತ್ರಿಕ, ವೈದ್ಯಕೀಯ ಮತ್ತು ಸಂಜೆ ಕಾಲೇಜು ವಿದ್ಯಾರ್ಥಿಗಳಿಗೆ ಅನ್ವಯವಾಗಲಿದೆ. ದಿನಾಂಕ 30-09-2021ರವರೆಗೆ ಬಸ್​ಪಾಸ್ ಅವಧಿಯನ್ನು ವಿಸ್ತರಿಸಿಲಾಗಿದೆ. ಕೊವಿಡ್ ಲಾಕ್​ಡೌನ್ ಹಿನ್ನೆಲೆಯಲ್ಲಿ ಭೌತಿಕ ತರಗತಿಗಳು ನಡೆದಿರಲಿಲ್ಲ. ಹೀಗಾಗಿ ಬಸ್​ಪಾಸ್ ಬಳಕೆಯಾಗಿರಲಿಲ್ಲ. ಈ ಕಾರಣಗಳಿಂದ ಬಸ್​ಪಾಸ್ ಅವಧಿಯನ್ನು ವಿಸ್ತರಿಸಿ ಬಿಎಂಟಿಸಿ ಆದೇಶ ಪ್ರಕಟಿಸಲಾಗಿದೆ.

ಟಿಕೆಟ್ ಪಡೆಯದೆ ಪ್ರಯಾಣ; ಬಿಎಂಟಿಸಿಯಿಂದ ಜುಲೈನಲ್ಲಿ 2,67,950 ರೂ. ದಂಡ ವಸೂಲು
ಟಿಕೆಟ್ ಪಡೆಯದೆ ಬಸ್​ನಲ್ಲಿ ಪ್ರಯಾಣ ಮಾಡುತ್ತಿದ್ದವರಿಂದ ಬಿಎಂಟಿಸಿ ದಂಡ ವಸೂಲಿ ಮಾಡಿದೆ. ಜೊತೆಗೆ ಟಿಕೆಟ್ ನೀಡದ ನಿರ್ವಾಹಕರ ವಿರುದ್ಧ, ಮಹಿಳೆಯರಿಗೆ ಮೀಸಲಿರಿಸಿದ ಸೀಟ್​ನಲ್ಲಿ ಪ್ರಯಾಣಿಸುತ್ತಿದ್ದ ಹಿನ್ನೆಲೆಯಲ್ಲಿ ಹೀಗೆ ಬಿಎಂಟಿಸಿ ದಂಡ ವಸೂಲಿ ಮಾಡಿಕೊಂಡಿದೆ. ಆ ಮೂಲಕ, ಜುಲೈ ತಿಂಗಳಲ್ಲಿ ಬಿಎಂಟಿಸಿಯಿಂದ 2,67,950 ರೂಪಾಯಿ ದಂಡ ವಸೂಲಿ ಮಾಡಲಾಗಿದೆ.

ಒಟ್ಟು 17,799 ಟ್ರಿಪ್ ತಪಾಸಣೆ ನಡೆಸಿದ ಬಿಎಂಟಿಸಿ ತನಿಖಾ ತಂಡ ಇಷ್ಟು ಮೊತ್ತದ ದಂಡ ವಸೂಲಿ ಮಾಡಿಕೊಂಡಿದೆ. ಟಿಕೆಟ್ ಇಲ್ಲದೆ ಪ್ರಯಾಣಿಸುತ್ತಿದ್ದವರಿಂದ 2,67,950 ರೂಪಾಯಿ ದಂಡ ಪಡೆದುಕೊಂಡಿದೆ. ಟಿಕೆಟ್ ನೀಡದ ನಿರ್ವಾಹಕರ ವಿರುದ್ಧ 1188 ಕೇಸ್ ದಾಖಲು ಮಾಡಲಾಗಿದೆ. ಮಹಿಳೆಯರಿಗೆ ಮೀಸಲಿರಿಸಿದ ಸೀಟ್​ನಲ್ಲಿ ಪ್ರಯಾಣ ಹಿನ್ನೆಲೆ, ನಾಲ್ವರು ಪುರುಷ ಪ್ರಯಾಣಿಕರಿಂದ 400 ರೂಪಾಯಿ ದಂಡ ವಸೂಲಿ ಮಾಡಲಾಗಿದೆ. ಈ ಬಗ್ಗೆ, ಬಿಎಂಟಿಸಿಯಿಂದ ಮಾಧ್ಯಮ ಪ್ರಕಟಣೆ ಹೊರಡಿಸಲಾಗಿದೆ.

Source:Tv9kannada