Abdul Samad: ನೋ ಬಾಲ್ ಡ್ರಾಮ: ಅಬ್ದುಲ್ ಸಮದ್ ಕೊನೆಯ ಎಸೆತದಲ್ಲಿ ಸಿಕ್ಸ್ ಸಿಡಿಸಿ ಪಂದ್ಯ ಗೆಲ್ಲಿಸಿದ ವಿಡಿಯೋ ನೋಡಿ
IPL 2023 Orange-Purple Cap: ಇಂದು ಮುಂಬೈ ಇಂಡಿಯನ್ಸ್ ಮತ್ತು ಆರ್ಸಿಬಿ ಸೆಣೆಸಾಟ ನಡೆಸಲಿದೆ. ಸದ್ಯ ಐಪಿಎಲ್ 2023 ಪಾಯಿಂಟ್ಸ್ ಟೇಬಲ್ ಹೇಗಿದೆ?, ಆರೆಂಜ್, ಪರ್ಪಲ್ ಕ್ಯಾಪ್ ಯಾರ ಬಳಿಯಿದೆ ಎಂಬುದನ್ನು ನೋಡೋಣ.

16ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ (IPL 2023) ಟೂರ್ನಿಯಲ್ಲಿ 53 ಪಂದ್ಯಗಳು ಮುಕ್ತಾಯಗೊಂಡಿದೆ. ಕೆಲ ತಂಡಗಳಿಂದ ಊಹಿಸಲಾಗದ ಪ್ರದರ್ಶನ ಬರುತ್ತಿದೆ. ಎದುರಾಳಿಗೆ 200+ ಟಾರ್ಗೆಟ್ ನೀಡಿದರೂ ಸುಲಭವಾಗಿ ಚೇಸ್ ಮಾಡಿ ಗೆಲುವು ಸಾಧಿಸುವುದು ಈ ಬಾರಿಯ ಟೂರ್ನಿಯಲ್ಲಿ ಹೆಚ್ಚಾಗುತ್ತಿವೆ. ಅಲ್ಲದೆ 20ನೇ ಓವರ್ನ ಕೊನೆಯ ಎಸೆತದಲ್ಲಿ ಗೆಲುವು ಸಾಧಿಸುತ್ತಿರುವುದು ಕಂಡು ಬರುತ್ತಿದೆ. ಹೀಗೆ ಅನೇಕ ರೋಚಕ ಕಾದಾಟಕ್ಕೆಎ ಈ ಬಾರಿಯ ಐಪಿಎಲ್ ಸಾಕ್ಷಿಯಾಗುತ್ತಿದೆ. ಸೋಮವಾರ ನಡೆದ ಕೆಕೆಆರ್ ಮತ್ತು ಪಂಜಾಬ್ ಕಿಂಗ್ಸ್ ನಡುವಣ ಮುಖಾಮುಖಿಯಲ್ಲಿ ಕೂಡ ಕೋಲ್ಕತ್ತಾ ಕೊನೆಯ ಎಸೆತದಲ್ಲಿ ಫೋರ್ ಬಾರಿಸಿ ರೋಚಕ ಜಯ ಕಂಡಿತು. ಇಂದು ಮುಂಬೈ ಇಂಡಿಯನ್ಸ್ ಮತ್ತು ಆರ್ಸಿಬಿ (MI vs RCB) ಸೆಣೆಸಾಟ ನಡೆಸಲಿದೆ. ಸದ್ಯ ಐಪಿಎಲ್ 2023 ಪಾಯಿಂಟ್ಸ್ ಟೇಬಲ್ ಹೇಗಿದೆ?, ಆರೆಂಜ್ (Orange Cap), ಪರ್ಪಲ್ ಕ್ಯಾಪ್ ಯಾರ ಬಳಿಯಿದೆ ಎಂಬುದನ್ನು ನೋಡೋಣ.
- ಗುಜರಾತ್ ಟೈಟಾನ್ಸ್ ತಂಡ ಭರ್ಜರಿ ಪ್ರದರ್ಶನ ತೋರಿ ಅಗ್ರಸ್ಥಾನದಲ್ಲಿ ಭದ್ರವಾಗಿದ್ದು ಪ್ಲೇ ಆಫ್ಗೆ ಬಹುತೇಕ ಕಾಲಿಟ್ಟಿದೆ. ಆಡಿದ 11 ಪಂದ್ಯಗಳಲ್ಲಿ ಎಂಟು ಗೆಲುವು, ಮೂರು ಸೋಲುಂಡು +0.951 ರನ್ರೇಟ್ನೊಂದಿಗೆ 16 ಅಂಕ ಸಂಪಾದಿಸಿದೆ.
- ಎಂಎಸ್ ಧೋನಿ ನಾಯಕತ್ವದ ಚೆನ್ನೈ ಸೂಪರ್ ಕಿಂಗ್ಸ್ ತಂಡ ಎರಡನೇ ಸ್ಥಾನದಲ್ಲಿದೆ. ಆಡಿದ 11 ಪಂದ್ಯಗಳ ಪೈಕಿ ಆರರಲ್ಲಿ ಗೆಲುವು ನಾಲ್ಕರಲ್ಲಿ ಸೋಲು ಕಂಡು ಒಟ್ಟು 13 ಅಂಕ ಸಂಪಾದಿಸಿದೆ. +0.409 ರನ್ರೇಟ್ ಹೊಂದಿದೆ.
- ಲಖನೌ ಸೂಪರ್ ಜೇಂಟ್ಸ್ ತಂಡ ತೃತೀಯ ಸ್ಥಾನದಲ್ಲಿದೆ. ಆಡಿದ ಹನ್ನೊಂದು ಪಂದ್ಯಗಳಲ್ಲಿ ಐದು ಗೆಲುವು, ಐದು ಸೋಲು ಕಂಡು 11 ಅಂಕ ಸಂಪಾದಿಸಿ +0.294 ರನ್ರೇಟ್ ಹೊಂದಿದೆ.
- ರಾಜಸ್ಥಾನ್ ರಾಯಲ್ಸ್ ತಂಡ ಪಾಯಿಂಟ್ ಟೇಬಲ್ನಲ್ಲಿ ನಾಲ್ಕನೇ ಸ್ಥಾನದಲ್ಲಿದೆ. ಆಡಿದ 11 ಪಂದ್ಯಗಳಲ್ಲಿ ಐದು ಗೆಲುವು, ಆರು ಸೋಲುಂಡು +0.388ರನ್ರೇಟ್ನೊಂದಿಗೆ 10 ಅಂಕ ಸಂಪಾದಿಸಿದೆ.
- ಎಂಟನೇ ಸ್ಥಾನದಲ್ಲಿದ್ದ ಕೋಲ್ಕತ್ತಾ ನೈಟ್ ರೈಡರ್ಸ್ ತಂಡ ಐದನೇ ಸ್ಥಾನಕ್ಕೆ ಜಿಗಿದಿದೆ. ಆಡಿದ 11 ಪಂದ್ಯಗಳಲ್ಲಿ ಐದು ಗೆಲುವು, ಆರರಲ್ಲಿ ಸೋಲುಂಡು -0.079 ರನ್ರೇಟ್ನೊಂದಿಗೆ 10 ಅಂಕ ಸಂಪಾದಿಸಿದೆ.
- ಕೆಕೆಆರ್ ಗೆದ್ದ ಪರಿಣಾಮ ರಾಯಲ್ ಚಾಲೆಂಜರ್ಸ್ ಬೆಂಗಳೂರು ಒಂದು ಸ್ಥಾನ ದಿಢೀರ್ ಕುಸಿತ ಕಂಡು ಆರನೇ ಸ್ಥಾನದಲ್ಲಿದೆ. ಆಡಿದ ಹತ್ತು ಪಂದ್ಯಗಳ ಪೈಕಿ ಐದರಲ್ಲಿ ಗೆಲುವು ಐದರಲ್ಲಿ ಸೋಲು ಕಂಡು 10 ಅಂಕ ಸಂಪಾದಿಸಿ -0.209 ರನ್ರೇಟ್ ಹೊಂದಿದೆ.
- ಪಂಜಾಬ್ ಕಿಂಗ್ಸ್ ಆಡಿದ 11 ಪಂದ್ಯಗಳಲ್ಲಿ ಆರು ಸೋಲು- ಐದು ಜಯ ಕಂಡು 10 ಅಂಕ ಹೊಂದಿ -0.441ರನ್ರೇಟ್ನೊಂದಿಗೆ ಏಳನೇ ಸ್ಥಾನಲ್ಲಿದೆ.
- ಮುಂಬೈ ಇಂಡಿಯನ್ಸ್ ಎಂಟನೇ ಸ್ಥಾನದಲ್ಲಿದೆ. ಇವರು ಆಡಿದ 10 ಪಂದ್ಯದಲ್ಲಿ 5 ಸೋಲು, ಐದು ಗೆಲುವು ಕಂಡು 10 ಅಂಕ ಸಂಪಾದಿಸಿ -0.454 ರನ್ರೇಟ್ ಹೊಂದಿದೆ.
- ಸನ್ರೈಸರ್ಸ್ ಹೈದರಾಬಾದ್ ತಂಡ ಒಂಬತ್ತನೇ ಸ್ಥಾನದಲ್ಲಿದೆ. ಆಡಿದ 10 ಪಂದ್ಯದಲ್ಲಿ ಆರರಲ್ಲಿ ಸೋಲು ನಾಲ್ಕರಲ್ಲಿ ಜಯ ಕಂಡು 8 ಅಂಕ ಸಂಪಾದಿಸಿ -0.472 ರನ್ರೇಟ್ ಹೊಂದಿದೆ.
- ಡೆಲ್ಲಿ ಕ್ಯಾಪಿಟಲ್ಸ್ ಕೊನೆಯ ಸ್ಥಾನದಲ್ಲಿದೆ. ಆಡಿದ 10 ಪಂದ್ಯಗಳ ಪೈಕಿ ನಾಲ್ಕರಲ್ಲಿ ಜಯ ಸಾಧಿಸಿ, ಆರು ಪಂದ್ಯಗಳಲ್ಲಿ ಸೋಲುಂಡು 8 ಅಂಕ ಸಂಪಾದಿಸಿ -0.529 ರನ್ರೇಟ್ ಹೊಂದಿದೆ.