50 ಸಾವಿರ ಗಡಿ ದಾಟಿಯೇ ಬಿಟ್ಟಿತು ಭಾರತೀಯ ಷೇರು ಮಾರುಕಟ್ಟೆ ಸೂಚ್ಯಂಕ..!

Jan 21, 2021

ಮಹಾಮಾರಿ ಕೊರೊನಾ ನಡುವೆಯೂ ಷೇರುಪೇಟೆ ಸೂಚ್ಯಂಕ 50 ಸಾವಿರದ ಗಡಿ ದಾಟುವ ಮೂಲಕ ದಾಖಲೆ ಬರೆದಿದೆ. ಷೇರುಪೇಟೆ ಸೂಚ್ಯಂಕ 50,096ಕ್ಕೆ ಏರಿಕೆಯಾಗಿದ್ದು ಭಾರತೀಯ ಷೇರು ಮಾರುಕಟ್ಟೆಯಲ್ಲಿ ಹೊಸ ದಾಖಲೆ ಸೃಷ್ಟಿಸಿದೆ.

ಬೆಂಗಳೂರು: ಭಾರತೀಯ ಷೇರು ಮಾರುಕಟ್ಟೆಯಲ್ಲಿ ಭಾರಿ ದಾಖಲೆ ಕಂಡು ಬಂದಿದೆ. ಷೇರುಪೇಟೆ ಸೂಚ್ಯಂಕ 50 ಸಾವಿರದ ಗಡಿ ದಾಟಿದೆ. ಕೊವಿಡ್ ಹೊಡೆತದ ನಡುವೆಯೂ ಷೇರುಪೇಟೆ ದಾಖಲೆ ಬರೆದಿದೆ.

ಮಹಾಮಾರಿ ಕೊರೊನಾ ನಡುವೆಯೂ ಷೇರುಪೇಟೆ ಸೂಚ್ಯಂಕ 50 ಸಾವಿರದ ಗಡಿ ದಾಟುವ ಮೂಲಕ ದಾಖಲೆ ಬರೆದಿದೆ. ಷೇರುಪೇಟೆ ಸೂಚ್ಯಂಕ 50,096ಕ್ಕೆ ಏರಿಕೆಯಾಗಿದ್ದು ಭಾರತೀಯ ಷೇರು ಮಾರುಕಟ್ಟೆಯಲ್ಲಿ ಹೊಸ ದಾಖಲೆ ಸೃಷ್ಟಿಸಿದೆ. ನರೇಂದ್ರ ಮೋದಿ 2019ರಲ್ಲಿ ಅಧಿಕಾರಕ್ಕೇರಿದಾಗ 38,000 ಸೂಚ್ಯಂಕ ಇತ್ತು. ಈಗ ಕೊವಿಡ್ ಸಂಕಟದ ಮಧ್ಯೆಯೂ ಷೇರುಪೇಟೆ ಚಿಗುರಿದೆ.

Source:TV9 Kannada