ಸಾರ್​.. ಅಣ್ಣನ ‘ಪೊಗರು’ ಸಿನಿಮಾ ನೋಡ್ಬೇಕಿತ್ತು.. 2 ಡೇಸ್​ ರಜೆ ಕೊಡಿ -ಪ್ರಿನ್ಸಿಪಾಲ್​ಗೆ ಪತ್ರ ಬರೆದ ವಿದ್ಯಾರ್ಥಿಗಳು!

Jan 21, 2021

ಸಾರ್​.. ನಮ್ಮ ಧ್ರುವ ಅಣ್ಣನ ಪೊಗರು ಸಿನಿಮಾ ರಿಲೀಸ್ ಆಗ್ತಿದೆ. ನಾವು ಸಿನಿಮಾ ನೋಡಬೇಕು ಅಂತಾ ತುಂಬಾ ಆಸೆಯಿದೆ. ದಯವಿಟ್ಟು ಸಿನಿಮಾ ನೋಡೋಕೆ 2 ದಿನ ರಜೆ ಕೊಡಿ ಅಂತಾ ಧ್ರುವಾ ಸರ್ಜಾ ಅವರ ಯುವ ಅಭಿಮಾನಿಗಳು ತಮ್ಮ ಕಾಲೇಜು ಪ್ರಿನ್ಸಿಪಾಲ್​ರನ್ನು ಕೇಳಿಕೊಂಡಿದ್ದಾರಂತೆ!

ಬಳ್ಳಾರಿ: ಸಾರ್​.. ನಮ್ಮ ಧ್ರುವ ಅಣ್ಣನ ಪೊಗರು ಸಿನಿಮಾ ರಿಲೀಸ್ ಆಗ್ತಿದೆ. ನಾವು ಸಿನಿಮಾ ನೋಡಬೇಕು ಅಂತಾ ತುಂಬಾ ಆಸೆಯಿದೆ. ದಯವಿಟ್ಟು ಸಿನಿಮಾ ನೋಡೋಕೆ 2 ದಿನ ರಜೆ ಕೊಡಿ ಅಂತಾ ಧ್ರುವಾ ಸರ್ಜಾ ಅವರ ಯುವ ಅಭಿಮಾನಿಗಳು ತಮ್ಮ ಕಾಲೇಜಿನ ಪ್ರಿನ್ಸಿಪಾಲ್​ರನ್ನು ಕೇಳಿಕೊಂಡಿದ್ದಾರಂತೆ!

ಬೈ ದಿ ಬೈ, ಇದು ಯಾವ ಕಾಲೇಜಿನ ಹುಡುಗರು ಎಂದು ನಾವು ಹೇಳೋಕೆ ಹೋಗಲ್ಲ. ಆದರೆ, ವಿದ್ಯಾರ್ಥಿಗಳು ಬಳ್ಳಾರಿಯ ಸಿರುಗುಪ್ಪದ ಕಾಲೇಜಿನವರು ಎಂದು ಮಾತ್ರ ತಿಳಿದುಬಂದಿದೆ.

ವಿದ್ಯಾರ್ಥಿಗಳು ಭರ್ಜರಿ ಸಮಾಜ ಅಂತಾ ತಮ್ಮ ಮನವಿ ಪತ್ರದಲ್ಲಿ ಉಲ್ಲೇಖಿಸಿ ಮೂರು ವರ್ಷಗಳ ನಂತರ ನಮ್ಮ ಅಣ್ಣನ ಸಿನಿಮಾ ರಿಲೀಸ್​ ಆಗ್ತಿದೆ. ನಮಗೆ ಧ್ರುವ ಅವರ ಸಿನಿಮಾ ನೋಡೋಕೆ ಬಹಳ ಆಸೆಯಿದೆ. ಹಾಗಾಗಿ, 2 ದಿನಗಳ ಕಾಲ ರಜೆ ಕೊಡಿ ಅಂತಾ ಮನವಿ ಮಾಡಿದ್ದಾರೆ.

Source:TV9 Kannada