470 ಕಿ.ಮೀ ಮೈಲೇಜ್; ಭಾರತದಲ್ಲಿ ಜಾಗ್ವಾರ್ I-PACE ಎಲೆಕ್ಟ್ರಿಕ್ ಕಾರು ಬಿಡುಗಡೆ!
470 ಕಿ.ಮೀ ಮೈಲೇಜ್ ರೇಂಜ್, ಐಷಾರಾಮಿ, ಆರಾಮದಾಯಕ ಜಾಗ್ವಾರ್ ಐ ಪೇಸ್ ಎಲೆಕ್ಟ್ರಿಕ್ ಕಾರು ಭಾರತದಲ್ಲಿ ಬಿಡುಗಡೆಯಾಗಿದೆ. ಆಲ್-ವೀಲ್ ಡ್ರೈವ್ , 4 ಸೆಕೆಂಡ್‌ಗಳಲ್ಲಿ 100 ಕಿ.ಮೀ ವೇಗದ ಸಾಮರ್ಥ್ಯ, ಸುಲಭ ಚಾರ್ಜಿಂಗ್, ಅತ್ಯಾಧುನಿಕ ತಂತ್ರಜ್ಞಾನ ಸೇರಿದಂತೆ ಹಲವು ವಿಶೇಷತೆಗಳ ಐ ಪೇಸ್ ಬಿಡುಗಡೆಯಾಗಿದೆ. ಕಾರಿನ ಬೆಲೆ ಹಾಗೂ ಇತರ ಮಾಹಿತಿ ಇಲ್ಲಿದೆ.
ಜಾಗ್ವಾರ್ ಲ್ಯಾಂಡ್ ರೋವರ್ ಇಂಡಿಯಾ ಇಂದು 1.05 ಲಕ್ಷ ರೂಪಾಯಿ (ಎಕ್ಸ್ ಶೋರೂಮ್ ಇಂಡಿಯಾ) ಆರಂಭಿಕ ಬೆಲೆಯೊಂದಿಗೆ ಭಾರತದಲ್ಲಿ ಸಂಪೂರ್ಣ-ವಿದ್ಯುಚ್ಚಾಲಿತ ಜಾಗ್ವಾರ್ ಐ-ಪೇಸ್ ಬಿಡುಗಡೆ ಮಾಡಿದೆ. ಜಾಗ್ವಾರ್ ಐ-ಪೇಸ್ 294KW ಶಕ್ತಿ ಮತ್ತು 696 NM ಟಾರ್ಕ್ ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ. ಕೇವಲ 4.8 ಸೆಕೆಂಡುಗಳಲ್ಲಿ 0-100 ಕಿ.ಮೀ ವೇಗ ತಲುಪಲಿದೆ. ಒಂದು ಬಾರಿ ಚಾರ್ಜ್ ಮಾಡಿದರೆ 470 ಕಿ.ಮೀ ಮೈಲೇಜ್ ರೇಂಜ್ ನೀಡಲಿದೆ.
ಜಾಗ್ವಾರ್ ಐ-ಪೇಸ್ ನಾವು ಭಾರತದಲ್ಲಿ ಬಿಡುಗಡೆ ಮಾಡಿದ ಮೊದಲ ಸಂಪೂರ್ಣ-ವಿದ್ಯುಚ್ಚಾಲಿತ ಎಸ್‍ಯುವಿ ಆಗಿದ್ದು, ಇದು ನಮ್ಮ ವಿದ್ಯುದ್ದೀಕರಣದ ಪ್ರಯಾಣದ ಆರಂಭವನ್ನು ಸೂಚಿಸುತ್ತದೆ. ನಮ್ಮ ವಿದ್ಯುದ್ದೀಕೃತ ಉತ್ಪನ್ನಗಳೊಂದಿಗೆ ನಾವು ಭವಿಷ್ಯದಲ್ಲಿ ಭಾರತದ ವಿದ್ಯುದೀಕರಣ ಚಾಲನೆಯಲ್ಲಿ ಮಹತ್ವದ ಪಾತ್ರ ವಹಿಸಲು ಎದುರು ನೋಡುತ್ತೇವೆ. ಅವರ ವ್ಯಕ್ತಿತ್ವಗಳನ್ನು ತೋರ್ಪಡಿಸಲು ಮತ್ತು ಎಲ್ಲರಿಗಿಂತ ಮುಂಚೂಣಿಯಲ್ಲಿ ಇರಲು ತಂತ್ರಜ್ಞಾನ ಮತ್ತು ವಿನ್ಯಾಸದಲ್ಲಿ ನಾವೀನ್ಯವನ್ನು ಬಯಸುವ ಮತ್ತು ಖರೀದಿಸುವ ಜನರನ್ನು ಜಾಗ್ವಾರ್ ಐ-ಪೇಸ್ ಖಂಡಿತವಾಗಿಯೂ ಆಕರ್ಷಿಸುತ್ತದೆ. ಅಂತಹ ಗ್ರಾಹಕರ ಬೇಡಿಕೆಗಳನ್ನು ಪೂರೈಸಲು ನಾವು ಮತ್ತು ನಮ್ಮ ಚಿಲ್ಲರೆ ವ್ಯಾಪಾರಿ ಮಳಿಗೆಗಳ ನೆಟ್‍ವರ್ಕ್ ಸಂಪೂರ್ಣವಾಗಿ ಸಿದ್ಧವಾಗಿದೆ ಎಂದು ಜಾಗ್ವಾರ್ ಲ್ಯಾಂಡ್ ರೋವರ್ ಇಂಡಿಯಾ ಲಿಮಿಟೆಡ್ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ರೋಹಿತ್ ಸೂರಿ ಹೇಳಿದರು.

ಬಿಡುಗಡೆಯಾದಾಗಿನಿಂದ, ಜಾಗ್ವಾರ್ ಐ-ಪೇಸ್ ವರ್ಲ್ಡ್ ಕಾರ್ ಆಫ್ ದಿ ಇಯರ್, ವರ್ಲ್ಡ್ ಕಾರ್ ಡಿಸೈನ್ ಆಫ್ ದಿ ಇಯರ್ ಮತ್ತು 2019 ರಲ್ಲಿ ವರ್ಲ್ಡ್ ಗ್ರೀನ್ ಕಾರ್ ಸೇರಿದಂತೆ 80 ಕ್ಕೂ ಹೆಚ್ಚು ಜಾಗತಿಕ ಪ್ರಶಸ್ತಿಗಳನ್ನು ಗೆದ್ದುಕೊಂಡಿದ್ದು, ಅಲ್ಪಾವಧಿಯಲ್ಲಿಯೇ ಇದು ಉತ್ತಮ ಎಲೆಕ್ಟ್ರಿಕ್ ವಾಹನ ಎಂದು ಗುರುತಿಸಿಕೊಂಡಿದೆ.
ಜಾಗ್ವಾರ್ ಐ-ಪೇಸ್ ನಾವು ಭಾರತದಲ್ಲಿ ಬಿಡುಗಡೆ ಮಾಡಿದ ಮೊದಲ ಸಂಪೂರ್ಣ-ವಿದ್ಯುಚ್ಚಾಲಿತ ಎಸ್‍ಯುವಿ ಆಗಿದ್ದು, ಇದು ನಮ್ಮ ವಿದ್ಯುದ್ದೀಕರಣದ ಪ್ರಯಾಣದ ಆರಂಭವನ್ನು ಸೂಚಿಸುತ್ತದೆ. ನಮ್ಮ ವಿದ್ಯುದ್ದೀಕೃತ ಉತ್ಪನ್ನಗಳೊಂದಿಗೆ ನಾವು ಭವಿಷ್ಯದಲ್ಲಿ ಭಾರತದ ವಿದ್ಯುದೀಕರಣ ಚಾಲನೆಯಲ್ಲಿ ಮಹತ್ವದ ಪಾತ್ರ ವಹಿಸಲು ಎದುರು ನೋಡುತ್ತೇವೆ. ಅವರ ವ್ಯಕ್ತಿತ್ವಗಳನ್ನು ತೋರ್ಪಡಿಸಲು ಮತ್ತು ಎಲ್ಲರಿಗಿಂತ ಮುಂಚೂಣಿಯಲ್ಲಿ ಇರಲು ತಂತ್ರಜ್ಞಾನ ಮತ್ತು ವಿನ್ಯಾಸದಲ್ಲಿ ನಾವೀನ್ಯವನ್ನು ಬಯಸುವ ಮತ್ತು ಖರೀದಿಸುವ ಜನರನ್ನು ಜಾಗ್ವಾರ್ ಐ-ಪೇಸ್ ಖಂಡಿತವಾಗಿಯೂ ಆಕರ್ಷಿಸುತ್ತದೆ. ಅಂತಹ ಗ್ರಾಹಕರ ಬೇಡಿಕೆಗಳನ್ನು ಪೂರೈಸಲು ನಾವು ಮತ್ತು ನಮ್ಮ ಚಿಲ್ಲರೆ ವ್ಯಾಪಾರಿ ಮಳಿಗೆಗಳ ನೆಟ್‍ವರ್ಕ್ ಸಂಪೂರ್ಣವಾಗಿ ಸಿದ್ಧವಾಗಿದೆ ಎಂದು ಜಾಗ್ವಾರ್ ಲ್ಯಾಂಡ್ ರೋವರ್ ಇಂಡಿಯಾ ಲಿಮಿಟೆಡ್ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ರೋಹಿತ್ ಸೂರಿ ಹೇಳಿದರು.
Source:Suvarna news