18ಸಾವಿರ ಅಡಿ ಎತ್ತರದ ಗ್ಯಾಲ್ವನ್ ಪ್ರದೇಶದಲ್ಲಿ ಯೋಗಾಭ್ಯಾಸ ಮಾಡಿದ ಐಟಿಬಿಪಿ ಯೋಧರು

Jun 21, 2021

ಲಡಾಖ್‌ನ ಗಾಲ್ವಾನ್ ಬಳಿ ಐಟಿಬಿಪಿ ಸಿಬ್ಬಂದಿ 18ಸಾವಿರ ಅಡಿ ಎತ್ತರದ ಗ್ಯಾಲ್ವನ್ ಪ್ರದೇಶದಲ್ಲಿ ಯೋಗಾಭ್ಯಾಸ ಮಾಡಿದ ಐಟಿಬಿಪಿ ಯೋಧರು.

Image

ಇಂದು ಅಂತಾರಾಷ್ಟ್ರೀಯ ಯೋಗ ದಿನ. ಬೆಳಗ್ಗೆಯೇ ಪ್ರಧಾನಿ ಮೋದಿಯವರು ದೇಶವನ್ನು ಉದ್ದೇಶಿಸಿ ಮಾತನಾಡಿದ್ದಾರೆ. ಹಾಗೇ ಭಾರತ-ಚೀನಾ ಗಡಿಯಲ್ಲಿ ನಿಯೋಜಿಸಲ್ಪಟ್ಟಿರುವ ಇಂಡೋ-ಟಿಬೇಟಿಯನ್​ ಬಾರ್ಡರ್​ ಪೊಲೀಸ್​​​ (ಐಟಿಬಿಪಿ)ಸಿಬ್ಬಂದಿ 18000 ಅಡಿ ಎತ್ತರದ ಹಿಮಾಚ್ಛಾದಿತ ಪ್ರದೇಶದಲ್ಲಿ ಯೋಗಾಭ್ಯಾಸ ಮಾಡಿದ್ದಾರೆ. ಹಿಮ ಬೀಳುತ್ತಿದ್ದರೂ ಅದರ ಮಧ್ಯೆಯೇ ಐಟಿಬಿಪಿ ಸಿಬ್ಬಂದಿ ಯೋಗಾಭ್ಯಾಸ ಮಾಡಿದ ಫೋಟೋಗಳು ವೈರಲ್​ ಆಗುತ್ತಿವೆ. ಕಳೆದ ವರ್ಷವೂ ಸಹ ಐಟಿಬಿಪಿ ಸಿಬ್ಬಂದಿ ಲಡಾಖ್​ ಔಟ್​ಪೋಸ್ಟ್​​​ ರೇಂಜಿಂಗ್​​ನಲ್ಲಿರುವ 13,000 ಅಡಿ ಎತ್ತರದ ಪ್ರದೇಶದಲ್ಲಿ ಯೋಗ ಮಾಡಿದ್ದರು.

ಅಷ್ಟೇ ಅಲ್ಲ, ಇಂದು ಐಟಿಬಿಪಿಯ ಕೆಲವು ಸಿಬ್ಬಂದಿ ಹಿಮಾಚಲ ಪ್ರದೇಶದ 16000 ಅಡಿ ಎತ್ತರದ ಪ್ರದೇಶದಲ್ಲಿ, ಲಡಾಖ್​ನ ಪ್ಯಾಂಗೋಂಗ್​ ತ್ಸೋ ಸರೋವರ ದಡದ 14,000 ಅಡಿ ಎತ್ತರದಲ್ಲಿ, ಕಳೆದ ವರ್ಷ ಚೀನಾ ಸೈನಿಕರೊಂದಿಗೆ ಸಂಘರ್ಷ ನಡೆದ ಗಾಲ್ವಾನ್​ ಕಣಿವೆಯ ಬಳಿಯೂ ಯೋಗಾಭ್ಯಾಸ ನಡೆಸಿದ್ದಾರೆ.

ಲಡಾಖ್​​ನಲ್ಲಂತೂ ವಿಪರೀತ ಚಳಿ. 30 ಡಿಗ್ರಿ ಸೆಲ್ಸಿಯಸ್​ ಕೊರೆವ ಚಳಿಯಲ್ಲೂ ಯೋಗಾಭ್ಯಾಸ ಮಾಡಿದ ಐಟಿಬಿಪಿ ಸಿಬ್ಬಂದಿಯ ಬದ್ಧತೆಗೆ ಇಡೀ ದೇಶ ಭೇಷ್​ ಎನ್ನುತ್ತಿದೆ. ಗಾಲ್ವಾನ್ ಸೇರಿ ಹಲವು ಪ್ರದೇಶಗಳಿಗೆ ಸಂಚರಿಸುವುದೇ ಕಷ್ಟವಾಗಿರುವಾಗ ಈ ಯೋಧರು ಶಸ್ತ್ರಾಸ್ತ್ರಗಳನ್ನು ಹೊತ್ತು ಸಾಗುತ್ತಾರೆ. ಅಂಥ ಚಳಿಯಲ್ಲೂ ಮುಂಜಾನೆ ಹಿಮದಲ್ಲೇ ಕುಳಿತು ಯೋಗಾಭ್ಯಾಸ ಮಾಡುವುದು ನಿಜಕ್ಕೂ ಹೆಮ್ಮೆ ತರುತ್ತಿದೆ ಎಂದು ನೆಟ್ಟಿಗರೂ ಅಭಿಪ್ರಾಯ ಪಟ್ಟಿದ್ದಾರೆ.

Source: Tv9Kannada