PM Jan Dhan Yojana: ಪ್ರಧಾನಮಂತ್ರಿ ಜನ-ಧನ ಯೋಜನೆಗೆ 7 ವರ್ಷ ಪೂರ್ಣ; ಕೃತಜ್ಞತೆ ಸಲ್ಲಿಸಿದ ಪ್ರಧಾನಿ ಮೋದಿ

Aug 28, 2021

ಪ್ರಧಾನಮಂತ್ರಿ ಜನ ​ಧನ​ ಯೋಜನೆ (PMJDY)ಗೆ ಏಳುವರ್ಷ ಪೂರ್ಣಗೊಂಡ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಟ್ವೀಟ್ ಮಾಡಿ, ಯೋಜನೆ ಪ್ರಾರಂಭಿಸಿ, ಯಶಸ್ವಿಗೊಳಿಸಲು ಶ್ರಮಿಸಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದ್ದಾರೆ. ಜನ-ಧನ ಯೋಜನೆಯಿಂದಾಗಿ ಭಾರತದ ಅನೇಕ ಜನರು ಉತ್ತಮ ಜೀವನ ನಡೆಸಲು ಸಾಧ್ಯವಾಗಿದೆ ಎಂದೂ ಹೇಳಿದ್ದಾರೆ.

ಎರಡು ಟ್ವೀಟ್ ಮಾಡಿರುವ ಪ್ರಧಾನಿ ನರೇಂದ್ರ ಮೋದಿ, ಭಾರತದ ಅಭಿವೃದ್ಧಿ ಪಥವನ್ನು ಪರಿವರ್ತಿಸಿದ ಪಿಎಂ ಜನ -ಧನ ಯೋಜನೆ ಶುರುವಾಗಿ ಏಳುವರ್ಷವಾಯಿತು. ಇದು ದೇಶದ ಅಸಂಖ್ಯಾತ ಜನರ ಆರ್ಥಿಕ ಸಬಲೀಕರಣಕ್ಕೆ ಕಾರಣವಾಗಿದೆ ಮತ್ತು ಪಾರದರ್ಶಕತೆಯಿಂದ ಕೂಡಿದೆ ಎಂದು ನರೇಂದ್ರ ಮೋದಿ ಹೇಳಿದ್ದಾರೆ. ಹಾಗೇ, ಇನ್ನೊಂದು ಟ್ವೀಟ್​ನಲ್ಲಿ ಯೋಜನೆ ಅನುಷ್ಠಾನ, ಯಶಸ್ವಿಗೆ ಸಹಾಯ ಮಾಡಿದವರಿಗೆ ಕೃತಜ್ಞತೆ ಸಲ್ಲಿಸಿದ್ದಾರೆ.

ಏನಿದು ಜನ-ಧನ ಯೋಜನೆ?
ಪ್ರಧಾನಮಂತ್ರಿ ಜನ-ಧನ ಯೋಜನೆ ಜನರಿಗೆ ಆರ್ಥಿಕ ಸಬಲತೆಯನ್ನು ಸೃಷ್ಟಿಸಿಕೊಟ್ಟ ಯೋಜನೆ. ಅಂದರೆ ನಮ್ಮ ದೇಶದಲ್ಲಿ ಅದೆಷ್ಟೋ ಹಿಂದುಳಿದ ಜನರಿಗೆ ಬ್ಯಾಂಕಿಂಗ್​ ವ್ಯವಸ್ಥೆಯ ಪರಿಚಯವೇ ಇರಲಿಲ್ಲ. ಈ ಪಿಎಂ ಜನ-ಧನ ಯೋಜನೆ ಮೂಲಕ ಅವರಲ್ಲೂ, ಬ್ಯಾಂಕಿಂಗ್​/ ಉಳಿತಾಯ, ಠೇವಣಿ, ಸಾಲ, ವಿಮೆ, ಪೆನ್ಶನ್​ ಬಗ್ಗೆ ಪ್ರ್ಯಾಕ್ಟಿಕಲ್​ ಆಗಿ ಅರಿವು ಮೂಡಿಸಲಾಗಿದೆ. ಪಿಎಂ ಯೋಜನೆಯಡಿ ಬ್ಯಾಂಕ್​​ನಲ್ಲಿ ಶೂನ್ಯ ಬ್ಯಾಲೆನ್ಸ್​​ನಲ್ಲಿ ಖಾತೆ ತೆರೆಯಬಹುದಾಗಿದೆ. ಈ ಖಾತೆದಾರರು ಅಪಘಾತವಾದ ಸಂದರ್ಭದಲ್ಲಿ 1 ಲಕ್ಷ ರೂ.ದೊಂದಿಗೆ 30 ಸಾವಿರ ರೂ. ಸಾಮಾನ್ಯ ವಿಮೆ ಸೌಲಭ್ಯ ಪಡೆಯುತ್ತಾರೆ. ಪಿಎಂ ಜನ-ಧನ ಯೋಜನೆ ಶುರುವಾದಾಗಿನಿಂದ ಇಲ್ಲಿಯವರೆಗೆ 43.04 ಕೋಟಿ ಮಂದಿ ಬ್ಯಾಂಕ್​ ಖಾತೆ ತೆರೆದು, ಬ್ಯಾಂಕಿಂಗ್​ ವಹಿವಾಟು ಶುರುಮಾಡಿದ್ದಾರೆ.

Source:Tv9kannada