ಕ್ಯಾಲಿಫೋರ್ನಿಯಾ: ತೀವ್ರ ಸ್ವರೂಪದ ಭೂಕಂಪವಾದರೆ ಬಹುಮಹಡಿ ಕಟ್ಟಡಗಳು ನೆಲಸಮ ಆಗೋದು, ಅಪಾರ ಸಂಖ್ಯೆಯಲ್ಲಿ ಜೀವಹಾನಿ ಆಗೋದರ ಬಗ್ಗೆ ನಾವು ಕೇಳಿದ್ದೇವೆ. ಆದರೆ ಇಲ್ಲೊಂದು 10 ಅಂತಸ್ತಿನ ಮರದ ಕಟ್ಟಡ (Wood Building) 100 ಭೂಕಂಪಗಳಾದರೂ ಜಗ್ಗದೇ ಹಾಗೇ ಉಳಿದು ಅಚ್ಚರಿ ಮೂಡಿಸಿದೆ.
ಈ ಕಟ್ಟಡವನ್ನು ನಿರ್ಮಿಸಿದ ಬಳಿಕ ಎಂಜಿನಿಯರ್‌ಗಳು ಹಲವಾರು ಪರೀಕ್ಷೆಗಳನ್ನು ನಡೆಸಿದ್ದಾರೆ. ಕೃತಕ ಭೂಕಂಪ ಸೃಷ್ಟಿಸಿ ಪ್ರಯೋಗ ನಡೆಸಿದ್ದಾರೆ. ಕಂಪನದ ವೇಳೆ ಮರದ ಕಟ್ಟಡ ವಾಲಾಡುತ್ತದೆಯೇ ಹೊರತು ಬೀಳುವುದಿಲ್ಲ. ಹೀಗಾಗಿ ಎಷ್ಟೇ ತೀವ್ರತೆಯ ಭೂಕಂಪವಾದರೂ ಕಟ್ಟಡ ಮಾತ್ರ ಬೀಳದೆ ಭದ್ರವಾಗಿ ನಿಂತಿದೆ. ಹಾಗಾದರೆ ಏನಿದು ಕಟ್ಟಡ? ಇದು ಎಲ್ಲಿದೆ? ಇದರ ವಿಶೇಷತೆ ಏನು ಎಂಬ ಬಗ್ಗೆ ಇಲ್ಲಿದೆ ಮಾಹಿತಿ. ಇದನ್ನೂ ಓದಿ: ಭವಿಷ್ಯದ ಬಗ್ಗೆ ಮೋದಿ ಮಾತನಾಡಲ್ಲ, ವೈಫಲ್ಯಗಳಿಗೆ ಬೇರೆಯವರನ್ನು ದೂರುತ್ತಾರೆ: ರಾಹುಲ್ ಕಿಡಿ
ಕಳೆದ ತಿಂಗಳು ಮುಂಜಾನೆ ವೇಳೆ ಈಶಾನ್ಯ ಸ್ಯಾನ್ ಡಿಯಾಗೋದಲ್ಲಿ ಭೂಕಂಪ ಉಂಟಾಯಿತು. ಕೆಲವು ನಿಮಿಷಗಳ ನಂತರ ಮತ್ತೊಂದು ಕಂಪನ ಉಂಟಾಯಿತು. ಆದರೆ ಈ 10 ಅಂತಸ್ತಿನ ಮರದ ಕಟ್ಟಡ ತೂಗಾಡಿತು, ಬೀಳಲಿಲ್ಲ.
‘ಶೇಕ್ ಟೇಬಲ್’ (ಅಲುಗಾಡುವ ಟೇಬಲ್) ಮಾದರಿಯ ರಚನೆಯಲ್ಲಿ ಈ ಕಟ್ಟಡ ನಿರ್ಮಿಸಲಾಗಿದೆ. ಕ್ಯಾಲಿಫೋರ್ನಿಯಾ ವಿಶ್ವವಿದ್ಯಾನಿಲಯದಲ್ಲಿ ಶೇಕ್ ಟೇಬಲ್ ಕಟ್ಟಡದ ಬಗ್ಗೆ ಪ್ರಯೋಗ ನಡೆಸಲಾಗಿತ್ತು. ಆ ಪ್ರಾಜೆಕ್ಟ್‌ನ ಭಾಗವಾಗಿಯೇ ಈ ಕಟ್ಟಡ ನಿರ್ಮಿಸಲಾಗಿದೆ. ಬಹು ಅಂತಸ್ತಿನ ಕಟ್ಟಡವನ್ನು ಮರದಿಂದ ನಿರ್ಮಿಸಲಾಗಿದೆ. ಇದನ್ನೂ ಓದಿ: ಭಾರತದಲ್ಲಿ ಭೀಕರ ರೈಲು ದುರಂತ ಕಂಡು ತುಂಬಾ ದುಃಖವಾಗಿದೆ – ಪಾಕಿಸ್ತಾನ, ತಾಲಿಬಾನ್ ಸಂತಾಪ
Source: PUBLICTV Kannada