ವೃದ್ಧಾಪ್ಯದಲ್ಲಿ ಆರೋಗ್ಯ ಸುರಕ್ಷತೆಗಾಗಿ ನೆನಪಿನಲ್ಲಿರಲೇಬೇಕಾದ ಒಂದಿಷ್ಟು ವಿಷಯಗಳು

Jun 23, 2021

Old Age Healthy habits: ಧೂಮಪಾನವು ಕ್ಯಾನ್ಸರ್​, ಹೃದ್ರೋಗ, ಪಾರ್ಶ್ವವಾಯು, ಶ್ವಾಸಕೋಶದ ಕಾಯಿಲೆ, ಮಧುಮೇಹದಂತಹ ಕಾಯಿಲೆಗೆ ಕಾರಣವಾಗುತ್ತದೆ. ಇದು ಕ್ಷಯ ಮತ್ತು ಕಣ್ಣಿನ ದೃಷ್ಟಿ ಸಮಸ್ಯೆಗೆ ಕಾರಣವಾಗುತ್ತದೆ. ಜತೆಗೆ ದೇಹದ ಪ್ರತಿ ರಕ್ಷಣಾ ವ್ಯವಸ್ಥೆಯನ್ನು ದುರ್ಬಲಗೊಳಿಸುತ್ತದೆ.

ವೃದ್ಧಾಪ್ಯ ಅಂದಾಕ್ಷಣ ಇನ್ನು ಕೆಲಸ ಮಾಡಲು ಸಾಧ್ಯವಾಗುವುದಿಲ್ಲ ಎಂಬುದೇ ಕೆಲವರ ಕೊರಗು. ವಯಸ್ಸು ಮೀರುತ್ತಿದ್ದಂತೆಯೇ ಚಿಂತೆ ಜಾಸ್ತಿ. ಅದರಲ್ಲಿಯೂ ಹೆಚ್ಚಾಗಿ ವಯಸ್ಸಾಗುತ್ತಿದೆ ಎಂಬುದೇ ದೊಡ್ಡ ಚಿಂತೆಯಾಗಿ ಕಾಡುತ್ತದೆ. ಹೀಗಿರುವಾಗ ವೃದ್ಧಾಪ್ಯದಲ್ಲಿ ನಿಮ್ಮ ಆರೋಗ್ಯವನ್ನು ಸುಧಾರಿಸಿಕೊಂಡು ಗಟ್ಟಿಮುಟ್ಟಾಗಿರುವ ಕೆಲವು ಸಲಹೆಗಳ ಕುರಿತಾಗಿ ತಿಳಿಯೋಣ. ವೃದ್ಧಾಪ್ಯದಲ್ಲಿ ರೋಗಗಳನ್ನು ತಡೆಗಟ್ಟಲು ಮತ್ತು ಆಯಸ್ಸು ಹೆಚ್ಚಿಸಿಕೊಳ್ಳಲು ಹಾರ್ಡ್​ವೇರ್​ ವೈದ್ಯಕೀಯ ಶಾಲೆಯ ವಿಜ್ಞಾನಿಗಳು ಕೆಲವು ಸಲಹೆಗಳನ್ನು ಸೂಚಿಸಿದ್ದಾರೆ. ಡಯಾಬಿಟಿಸ್​, ಕ್ಯಾನ್ಸರ್​ ಹಾಗೂ ಹೃದ್ರೋಗ ಸಮಸ್ಯೆಯಿಂದ ದೂರವಿರಲು ಸಹಾಯವಾಗಿದೆ.

ಹಾರ್ಡ್​ವೇರ್​ ಮೆಡಿಕಲ್​ ಸ್ಕೂಲ್​ ಮತ್ತು ಹಾರ್ಡ್​ವೇರ್ ​ಪಬ್ಲಿಕ್​ ಸ್ಕೂಲಿಂಗ್​ ಸಂಶೋಧಕರು ಒಟ್ಟು 73,196 ಮಹಿಳೆಯರ ಬಗ್ಗೆ ಸಂಶೋಧನೆ ನಡೆಸಿದ್ದಾರೆ. ಜತೆಗೆ 36,366 ಪುರುಷರ ಆರೋಗ್ಯ ದತ್ತಾಂಶವನ್ನು ಸಂಗ್ರಹಿಸಿದ್ದಾರೆ. ಈ ಕೆಳಗಿನ ಅಭ್ಯಾಸಗಳನ್ನು ಅನುಸರಿಸುವ ಪುರುಷರು 50 ವರ್ಷ ವಯಸ್ಸಾದ ಮೇಲೂ ಮಧುಮೇಹ ಸಮಸ್ಯೆಯಿಂದ ಮುಕ್ತರಾಗಿದ್ದಾರೆ ಎಂಬುದು ಸಂಶೋಧನೆಯಿಂದ ತಿಳಿದು ಬಂದಿದೆ.

ನೆನಪಿನಲ್ಲಿರಬೇಕಾದ ವಿಷಯಗಳು
ಆರೋಗ್ಯಕರ ಆಹಾರ ಸೇವನೆ
ವಯಸ್ಸಾದ ಮೇಲೆ ವಯಸ್ಕರ ಆಹಾರ ಕ್ರಮದ ಕುರಿತಾಗಿ ಹೆಚ್ಚಿನ ಗಮನಹರಿಸಬೇಕು. ವಯಸ್ಕರು ಹೆಚ್ಚು ಹೃದಯರೋಗದಿಂದ ಸಾವಿಗೀಡಾಗುತ್ತಾರೆ. ಅದಲ್ಲದೇ ಹೆಚ್ಚು ಬೊಜ್ಜು, ಕೊಲೆಸ್ಟ್ರಾಲ್​, ಅಧಿಕ ರಕ್ತದೊತ್ತಡ ಮತ್ತು ಅಪೌಷ್ಠಿಕತೆ ರೋಗಗಳಿಗೆ ಕಾರಣವಾಗುತ್ತದೆ. ಈ ಅಪಾಯಗಳನ್ನು ತಪ್ಪಿಸಲು ಆಹಾರದಲ್ಲಿ ತರಕಾರಿಗಳು ಮತ್ತು ಹಣ್ಣಿನ ಪ್ರಮಾಣ ಹೆಚ್ಚಿಸುವುದು ಅವಶ್ಯಕ ಎಂದು ತಜ್ಞರು ಹೇಳಿದ್ದಾರೆ.

ವ್ಯಾಯಾಮ
ಪ್ರತಿದಿನ 30 ನಿಮಿಷ ವ್ಯಾಯಾಮ ಮಾಡುವುದು ಅತ್ಯಗತ್ಯ. ವ್ಯಾಯಾಮವನ್ನು ನಿಯಮಿತವಾಗಿ ಮಾಡಬೇಕು. ಇದು ತೂಕವನ್ನು ಕಡಿಮೆ ಮಾಡುತ್ತದೆ. ಅನೇಕ ರೋಗಗಳ ಅಪಾಯವನ್ನೂ ಕಡಿಮೆ ಮಾಡುತ್ತದೆ. ಇದು ದೇಹವನ್ನು ಆರೋಗ್ಯವಾಗಿಡುತ್ತದೆ ಮತ್ತು ವಯಸ್ಸಾಗುವ ಪರಿಣಾಮವನ್ನು ಕಡಿಮೆ ಮಾಡುತ್ತದೆ.

ಮದ್ಯಪಾನದಿಂದ ದೂರವಿರಿ
ಆಲ್ಕೋಹಾಲ್​ ಅಥವಾ ಮದ್ಯಸೇವನೆ ದೇಹಕ್ಕೆ ಹಾನಿಯುಂಟು ಮಾಡುತ್ತದೆ. ಇದು ಮೆದುಳು, ಹೃದಯ, ಯಕೃತ್ತು ಮತ್ತು ಮೇದೋಜ್ಜೀರಕ ಗ್ರಂಥಿಯ ಮೇಲೆ ಪ್ರತಿಕೂಲ ಪರಿಣಾಮವನ್ನು ಬೀರುತ್ತದೆ. ಆಲ್ಕೋಹಾಲ್​ ಸೇವನೆಯು ಕ್ಯಾನ್ಸರ್​, ಹೃದಯರೋಗದಂತಹ ಅನೇಕ ಗಂಭೀರ ಕಾಯಿಲೆಗಳಿಗೆ ಕಾರಣವಾಗುತ್ತದೆ. ಆದ್ದರಿಂದ ಮದ್ಯ ಸೇವನೆಯಿಂದ ದೂರವಿರಿ.

ಧೂಮಪಾನ ತ್ಯಜಿಸುವುದು
ಧೂಮಪಾನವು ಕ್ಯಾನ್ಸರ್​, ಹೃದ್ರೋಗ, ಪಾರ್ಶ್ವವಾಯು, ಶ್ವಾಸಕೋಶದ ಕಾಯಿಲೆ, ಮಧುಮೇಹದಂತಹ ಕಾಯಿಲೆಗೆ ಕಾರಣವಾಗುತ್ತದೆ. ಇದು ಕ್ಷಯ ಮತ್ತು ಕಣ್ಣಿನ ದೃಷ್ಟಿ ಸಮಸ್ಯೆಗೆ ಕಾರಣವಾಗುತ್ತದೆ. ಜತೆಗೆ ದೇಹದ ಪ್ರತಿ ರಕ್ಷಣಾ ವ್ಯವಸ್ಥೆಯನ್ನು ದುರ್ಬಲಗೊಳಿಸುತ್ತದೆ.

Source: Tv9Kannada