ಸರ್ಕಾರ ಕಾಲಾವಕಾಶ ಕೇಳಿದೆ.. ದಯವಿಟ್ಟು ನೌಕರರು ಕೆಲಸಕ್ಕೆ ಹಾಜರಾಗಿ; ಬಿಎಂಟಿಸಿ ನಿರ್ವಾಹಕ ಮನವಿ

Apr 9, 2021

ನನಗೂ ಸಂಬಳ ಸಾಕಾಗುತ್ತಿಲ್ಲ. ನಾನೂ ಪ್ರತಿಭಟನೆ ಮಾಡಬಹುದಿತ್ತು. 30 ವರ್ಷದಿಂದ ಬಿಎಂಟಿಸಿಯಲ್ಲಿ ಕೆಲಸ ಮಾಡುತ್ತಿದ್ದೇನೆ. ಇನ್ನೂ 8 ವರ್ಷಗಳ ಕಾಲ ಕೆಲಸ ಮಾಡುವ ಅವಧಿ ಇದೆ. ಅಧಿಕಾರಿಗಳ ಬೆದರಿಕೆಗೆ ನಾನು ಕೆಲಸಕ್ಕೆ ಹಾಜರಾಗಿಲ್ಲ. ಕೆಲಸ ಮಾಡುವುದು ನಮ್ಮ ಕರ್ತವ್ಯ.

ಬೆಂಗಳೂರು: ಕೊಡೀಹಳ್ಳಿ ಚಂದ್ರಶೇಖರ್​ ಮುಷ್ಕರದ ಹೆಸರಲ್ಲಿ ಸಾರಿಗೆ ನೌಕರರ ದಿಕ್ಕು ತಪ್ಪಿಸುತ್ತಿದ್ದಾರೆ. ಅವರ ಪ್ರತಿಷ್ಠೆಗೆ ನೌಕರರು ಬಲಿಪಶುಗಳಾಗುತ್ತಿದ್ದಾರೆ. ಯಾರ ಮಾತನ್ನೋ ಕೇಳಿ ಮುಷ್ಕರ ನಡೆಸುವುದು ತಪ್ಪು ಎಂದು ಸಾರಿಗೆ ನೌಕರರ ಸಂಘದ ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ವಿರುದ್ಧ ಬಿಎಂಟಿಸಿ ನಿರ್ವಾಹಕ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕೊಡೀಹಳ್ಳಿ ಅವರು ಸಾರಿಗೆ ನೌಕರರನ್ನು ದಿಕ್ಕು ತಪ್ಪಿಸುವ ಕೆಲಸವನ್ನು ಮಾಡುತ್ತಿದ್ದಾರೆ. ಸರ್ಕಾರ ಸಮಯಾವಕಾಶ ಕೇಳಿದೆ. ಮೇ 4 ರವರೆಗೆ ಕಾಯಬೇಕಿತ್ತು. ಯಾರದ್ದೋ ಮಾತನ್ನು ಕೇಳಿಕೊಂಡು ಸಾರಿಗೆ ನೌಕರರು ಮುಷ್ಕರ ಮಾಡುತ್ತಿರುವುದು ತಪ್ಪು ಎಂದು ಅಭಿಪ್ರಾಯ ಹಂಚಿಕೊಂಡಿದ್ದಾರೆ.

ನನಗೂ ಸಂಬಳ ಸಾಕಾಗುತ್ತಿಲ್ಲ. ನಾನೂ ಪ್ರತಿಭಟನೆ ಮಾಡಬಹುದಿತ್ತು. 30 ವರ್ಷದಿಂದ ಬಿಎಂಟಿಸಿಯಲ್ಲಿ ಕೆಲಸ ಮಾಡುತ್ತಿದ್ದೇನೆ. ಇನ್ನೂ 8 ವರ್ಷಗಳ ಕಾಲ ಕೆಲಸ ಮಾಡುವ ಅವಧಿ ಇದೆ. ಅಧಿಕಾರಿಗಳ ಬೆದರಿಕೆಗೆ ನಾನು ಕೆಲಸಕ್ಕೆ ಹಾಜರಾಗಿಲ್ಲ. ಕೆಲಸ ಮಾಡುವುದು ನಮ್ಮ ಕರ್ತವ್ಯ. ಸರ್ಕಾರ ಏನು ಮಾಡಬೇಕೋ ಅದನ್ನು ಮಾಡುತ್ತದೆ. ದಯವಿಟ್ಟು ನೌಕರರು ಕೆಲಸಕ್ಕೆ ಹಾಜರಾಗಿ. ಯಾರದ್ದೋ ಒತ್ತಡಕ್ಕೆ ಒಳಗಾಗಬೇಡಿ ಎಂದು ಮನವಿ ಮಾಡಿದ್ದಾರೆ.

ಸರ್ಕಾರ ಮತ್ತು ಸಾರಿಗೆ ನೌಕರರ ಮುಷ್ಕರದಲ್ಲಿ ಸಾರ್ವಜನಿಕರಿಗೆ ಕಷ್ಟವಾಗುತ್ತಿದೆ. ಮೂರು ದಿನಗಳ ಕಾಲ ಬಸ್​ ಸಂಚಾರವಿಲ್ಲದೆ ಇನ್ನಿತರ ವಾಹನಗಳನ್ನು ಪ್ರಯಾಣಿಕರು ಅವಲಂಬಿಸುವಂತಾಗಿದೆ. ಆಟೋ ಚಾಲಕರಂತೂ ಇದೇ ಸುಸಮಯ ಅಂದುಕೊಂಡು ಡಬಲ್​ ಚಾರ್ಜ್​ ಮಾಡಿ ಹಣ ವಸೂಲಿ ಮಾಡುತ್ತಿದ್ದಾರೆ.

Source:TV9Kannada