ನವದೆಹಲಿ: ಮುಂಬೈನ ಅರೇಬಿಯನ್‌ ಸಮುದ್ರದಲ್ಲಿ ಚೀನಾ ಪ್ರಜೆಯನ್ನು (Chines Citizen) ಭಾರತೀಯ ಕೋಸ್ಟ್‌ ಗಾರ್ಡ್‌ (Indian Coast Guard) ಸಿಬ್ಬಂದಿ ರಕ್ಷಿಸಿದ್ದಾರೆ. ಭಾರತೀಯ ಕೋಸ್ಟ್‌ ಗಾರ್ಡ್‌ ಸಿಬ್ಬಂದಿ ಕಾರ್ಯಕ್ಕೆ ಚೀನಾ ಧನ್ಯವಾದ ತಿಳಿಸಿದೆ.

ಮುಂಬೈನ ಮಾರಿಟೈಮ್ ಪಾರುಗಾಣಿಕಾ ಸಮನ್ವಯ ಕೇಂದ್ರಕ್ಕೆ ಸದಸ್ಯ ಯಿನ್ ವೈಗ್ಯಾಂಗ್ ಅವರಿಗೆ ಹೃದಯಾಘಾತವಾಗಿದೆ ಮತ್ತು ತುರ್ತು ವೈದ್ಯಕೀಯ ಆರೈಕೆಯ ಅಗತ್ಯವಿದೆ ಎಂದು ಮಾಹಿತಿ ಲಭಿಸಿತ್ತು. ಚೀನಾದಿಂದ ಯುಎಇಗೆ ತೆರಳುತ್ತಿದ್ದ ಹಡಗಿನೊಂದಿಗೆ ತ್ವರಿತವಾಗಿ ಸಂವಹನ ನಡೆಸಲಾಯಿತು.

ತ್ವರಿತ ಸ್ಥಳಾಂತರಿಸುವಿಕೆ ಮತ್ತು ವೈದ್ಯಕೀಯ ನಿರ್ವಹಣೆಗಾಗಿ ಕ್ರಮಕೈಗೊಳ್ಳಲಾಯಿತು. ನಂತರ ತುರ್ತು ಚಿಕಿತ್ಸೆಯನ್ನು ನೀಡಲಾಯಿತು. ರೋಗಿಯನ್ನು ಹೆಚ್ಚಿನ ವೈದ್ಯಕೀಯ ಚಿಕಿತ್ಸೆಗಾಗಿ ಹಡಗಿನ ಏಜೆಂಟ್‌ಗೆ ಸ್ಥಳಾಂತರಿಸಲಾಯಿತು.

ತುರ್ತು ವೈದ್ಯಕೀಯ ನೆರವಿನ ಅಗತ್ಯವಿದ್ದ ಚೀನಾದ ಪ್ರಜೆಯನ್ನು ರಕ್ಷಿಸಿದ ಭಾರತೀಯ ಕೋಸ್ಟ್‌ ಗಾರ್ಡ್‌ ಕಾರ್ಯಕ್ಕೆ ಚೀನಾ ರಾಯಭಾರ ಕಚೇರಿ ಮೆಚ್ಚುಗೆ ವ್ಯಕ್ತಪಡಿಸಿದೆ.

 

Source: TV9 KANNADA