ಗಜಪಡೆಗೆ ಇಂದಿನಿಂದ ಭಾರ ಹೊರಿಸುವ ತಾಲೀಮು ಆರಂಭ

Sep 20, 2021

ಬೆಳಗ್ಗೆ ೧೧.೩೦ಕ್ಕೆ ಪೂಜೆ, ಮಧ್ಯಾಹ್ನ ೧೨.೧೦ಕ್ಕೆ ಭಾರ ಹೊರಿಸಲಾಗುತ್ತದೆ
ದಿನಕ್ಕೆ ಎರಡು ಬಾರಿಯಂತೆ `೭ ಕಿ.ಮೀ ನಡೆಸಲು ತೀರ್ಮಾನ
ಮೈಸೂರು,ಸೆ.೧೯(ಎಂಟಿವೈ)- ದಸರಾ ಮಹೋತ್ಸವ ದಲ್ಲಿ ಪಾಲ್ಗೊಳ್ಳಲು ಕರೆತರಲಾಗಿರುವ ಅಭಿಮನ್ಯು ನೇತೃತ್ವದ ಗಜಪಡೆಗೆ ಸೋಮವಾರ (ಸೆ.೨೦)ದಿಂದ ಭಾರ ಹೊರಿಸುವ ತಾಲೀಮು ಆರಂಭಿಸಲಾಗುತ್ತಿದ್ದು, ಬೆಳಗ್ಗೆ ೧೧.೩೦ಕ್ಕೆ ಆನೆಗಳ ಮೇಲಿಡುವ ಗಾದಿ ಮತ್ತು ನಮ್ದಾಗೆ ಪೂಜೆ ಸಲ್ಲಿಸಿ ತಾಲೀಮಿಗೆ ಚಾಲನೆ ನೀಡಲಾಗುತ್ತದೆ.
ಸೆ.೧೬ರಿಂದ ಮೈಸೂರು ಅರಮನೆ ಆವರಣದಲ್ಲಿ ಬೀಡು ಬಿಟ್ಟಿರುವ ದಸರಾ ಗಜಪಡೆ ೨ ದಿನದಿಂದ ಬೆಳಗ್ಗೆ ಮತ್ತು ಸಂಜೆ ಅರಮನೆ ಆವರಣ ದಲ್ಲಿ ೩ ಸುತ್ತು ನಡಿಗೆ ಮಾಡಿಸಲಾಗುತ್ತಿತ್ತು. ಬೆಳಗ್ಗೆ ೩.೫ ಕಿಮೀ ಹಾಗೂ ಸಂಜೆ ೩.೫ ಕಿಮೀ ಸೇರಿದಂತೆ ದಿನಕ್ಕೆ ೭ ಕಿಮೀನಷ್ಟು ದೂರದ ನಡಿಗೆ ನಡೆಸಲಾಗುತ್ತಿತ್ತು. ಜಂಬೂಸವಾರಿಗೆ ೨೮ ದಿನ

ಮಾತ್ರವಿರುವುದರಿಂದ ಇದೀಗ ಗಜಪಡೆಗೆ ಭಾರ ಹೊರಿ ಸುವ ತಾಲೀಮು ನಡೆಸಲು ನಿರ್ಧರಿಸಲಾಗಿದೆ.
ಸಾಂಪ್ರದಾಯಿಕ ಪೂಜೆ: ಗಜಪಡೆಗೆ ಭಾರ ಹೊರಿ ಸುವ ಮುನ್ನ ಸಂಪ್ರದಾಯದAತೆ ನಾಳೆ ಬೆಳಗ್ಗೆ ೧೧.೩೦ಕ್ಕೆ ಆನೆಗಳ ಬೆನ್ನಿನ ಮೇಲೆ ಇಡುವ ಗಾದಿ, ನಮ್ದಾ ಹಾಗೂ ಆನೆಗಳಿಗೆ ಅರಮನೆ ಆವರಣದಲ್ಲಿರುವ ಶ್ರೀ ಕೋಡಿ ಸೋಮೇಶ್ವರ ದೇವಾಲಯದ ಮುಂಭಾಗ ಪೂಜೆ ಸಲ್ಲಿಸ ಲಾಗುತ್ತದೆ. ನಂತರ ಮಧ್ಯಾಹ್ನ ೧೨.೧೦ಕ್ಕೆ ಆನೆಗಳ ಮೇಲೆ ಗಾದಿ, ನಮ್ದಾ ಇಟ್ಟು ತಾಲೀಮು ಆರಂಭಿಸಲಾಗುತ್ತದೆ.

ಜಂಬೂಸವಾರಿಯAತೆ ಮೆರವಣಗೆ: ನಾಳೆಯಿಂದ ಆರಂವಾಭಗಲಿರುವ ತಾಲೀಮು ಜಂಬೂಸವಾರಿ ನಡೆ ಯುವ ಮಾರ್ಗದಲ್ಲಿ ತಾಲೀಮು ನಡೆಸಲಾಗುತ್ತದೆ. ನಾಳೆ ಕೋಡಿ ಸೋಮೇಶ್ವರ ದೇವಾಲಯದಿಂದ ಆನೆಗಳನ್ನು ಅಂಬಾರಿ ಕಟ್ಟುವ ಕ್ರೇನ್ ಇರುವ ಸ್ಥಳಕ್ಕೆ ಕರೆದೊಯ್ದ ಬಳಿಕ ಅರಮನೆ ಮುಂಭಾಗಕ್ಕೆ ಆನೆಗಳನ್ನು ಸಾಲಾಗಿ ಕರೆತರಲಾಗುತ್ತದೆ. ಅಲ್ಲದೆ ಕುಮ್ಕಿ ಆನೆಗಳಾದ ಚೈತ್ರ ಹಾಗೂ ಕಾವೇರಿಯೊಂದಿಗೆ ಬಾರ ಹೊತ್ತ ಅಭಿಮನ್ಯು ಜಂಬೂಸವಾರಿ ದಿನ ಪುಷ್ಪಾರ್ಚನೆ ಮಾಡುವ ಸ್ಥಳ ದಲ್ಲಿ ಜನರಲ್ ಸೆಲ್ಯೂಟ್ ನೀಡಿ ಅರಮನೆ ಆವರಣ ದಲ್ಲಿ ೩ ಸುತ್ತು ಸಂಚರಿಸಲಿದೆ. ನಾಳೆಯಿಂದಲೇ ಬಾರ ಹೊರುವ ತಾಲೀಮು ಆರಂಭವಾಗುತ್ತಿರುವುದರಿAದ ಸಣ್ಣ ಪ್ರಮಾಣದ ತೂಕ ವನ್ನಷ್ಟೇ ಹೊರಿಸಲಾಗು ತ್ತದೆ. ನಂತರ ದಿನದಿಂದ ದಿನಕ್ಕೆ ಬಾರದ ಪ್ರಮಾಣ ಹೆಚ್ಚಿಸಲಾಗುತ್ತದೆ.

ತಾಲೀಮು: ಡಿಸಿಎಫ್ ಡಾ.ವಿ.ಕರಿಕಾಳನ್ `ಮೈಸೂರು ಮಿತ್ರ’ನೊಂದಿಗೆ ಮಾತ ನಾಡಿ, ಸೋಮವಾರ (ಸೆ.೨೦)ದಿಂದ ತಾಲೀಮು ನಡೆಸಲಾಗುತ್ತಿದೆ. ಹಂತಹAತವಾಗಿ ಭಾರ ಹೆಚ್ಚಿಸುವ ನಂತರ ಮರದ ಅಂಬಾರಿ ಕಟ್ಟಿ ತಾಲೀಮು ನಡೆಸುವ ತಾಲೀಮು ನಡೆಸಲಾಗುತ್ತದೆ. ಅಭಿಮನ್ಯುವಿನೊಂದಿಗೆ ಗೋಪಾಲಸ್ವಾಮಿ, ಧನಂಜಯ ಹಾಗೂ ಇದೇ ಮೊದಲ ಬಾರಿಗೆ ಬಂದಿರುವ ಅಶ್ವತ್ಥಾಮನಿಗೂ ಭಾರ ಹೊರಿಸುವ ತಾಲೀಮು ನಡೆಸಲಾಗುತ್ತದೆ ಎಂದರು.

Source:mysurumithra