ಸೆ.27ರ ಭಾರತ್ ಬಂದ್ ಪೋಸ್ಟರ್ ಬಿಡುಗಡೆ
ಮೈಸೂರು,ಸೆ.23(ಎಂಟಿವೈ)- ಸಂಯುಕ್ತÀ ಕಿಸಾನ್ ಮೋರ್ಚಾ ಸೆ.27ರಂದು ಕರೆ ನೀಡಿರುವ ಭಾರತ್ ಬಂದ್‍ಗೆ ಮೈಸೂರು ನಗರ ಹಾಗೂ ಜಿಲ್ಲೆಯ ಜನತೆ ಬೆಂಬಲ ನೀಡಬೇಕು ಎಂದು ಹಿರಿಯ ಸಮಾಜ ವಾದಿ ಪ.ಮಲ್ಲೇಶ್ ಮನವಿ ಮಾಡಿದರು.
ಜಿಲ್ಲಾ ಪತ್ರಕರ್ತರ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ `ಭಾರತ್ ಬಂದ್’ನ ಪೆÇೀಸ್ಟರ್ ಬಿಡುಗಡೆಗೊಳಿಸಿ ಮಾತ ನಾಡಿದ ಅವರು, ದೇಶದಲ್ಲಿ ದುರಾಡಳಿತದ ಫಲವಾಗಿ ಜನ ಜೀವನ ತತ್ತರಿಸುವಂತಾ ಗಿದೆ. ಅಗತ್ಯ ವಸ್ತುಗಳ ಬೆಲೆ ಗಗನಕ್ಕೇರಿದೆ. ಇಂಧನ ಬೆಲೆಯೂ ಮಿತಿಮೀರಿದ ಪ್ರಮಾಣ ದಲ್ಲಿ ಹೆಚ್ಚಿಸಲಾಗಿದೆ. ಇದರಿಂದ ಬಡ ಹಾಗೂ ಮಧ್ಯಮ ವರ್ಗದ ಜನರ ಜೀವನ ದುಸ್ತರ ವಾಗಿದೆ. ಈ ಹಿನ್ನೆಲೆಯಲ್ಲಿ `ಭಾರತ್ ಬಂದ್’ ಕರ್ನಾಟಕದಲ್ಲಿ ಯಶಸ್ವಿಗೊಳಿಸಲು ಕರ್ನಾ ಟಕ ರೈತ ಸಂಘಟನೆಗಳು, ಎಡಪಕ್ಷಗಳು, ಪ್ರಗತಿಪರ ಸಂಘಟನೆಗಳು, ದಲಿತ, ಕಾರ್ಮಿಕ ಸಂಘಟನೆಗಳು ಬೆಂಬಲ ಸೂಚಿಸಿವೆ. ಇದರಿಂದ ಮೈಸೂರು ನಗರ, ತಾಲೂಕು, ಹೋಬಳಿ ಮಟ್ಟದಲ್ಲಿಯೂ ಪ್ರತಿಭಟನೆ ನಡೆಯಲಿದೆ. ಹೀಗಾಗಿ ಸಾರ್ವಜನಿಕರು ಅಂಗಡಿ ಮುಂಗಟ್ಟುಗಳನ್ನು ಮುಚ್ಚಿ ಬಂದ್ ಬೆಂಬಲಿಸಬೇಕು ಎಂದು ಕೋರಲಾಗಿದೆ. ವಾಣಿಜ್ಯ ಮಳಿಗೆಗಳ ಬಂದ್ ಮಾಡದಿದ್ದರೆ, ಬಾಗಿಲು ಮುಚ್ಚಿಸುವುದಾಗಿ ತಿಳಿಸಿದರು.
ವಿವಾದ ಕೃಷಿ ಕಾಯ್ದೆಗಳನ್ನು ಹಿಂಪಡೆ ಯುಬೇಕೆಂದು ಆಗ್ರಹಿಸಿ 10 ತಿಂಗಳಿಂದ ಹೊಸದಿಲ್ಲಿ ಗಡಿಗಳಲ್ಲಿ ರೈತರು ಪ್ರತಿಭಟನೆ ನಡೆಸುತ್ತಿದ್ದಾರೆ. ಹೋರಾಟದಲ್ಲಿ 700 ಮಂದಿ ರೈತರು ಹುತಾತ್ಮರಾಗಿದ್ದಾರೆ. ಆದರೆ, ಇತ್ತ ಪ್ರಧಾನಿ ನರೇಂದ್ರ ಮೋದಿ ಭಾರತ ವಿಶ್ವಗುರು ಎಂದು ವಿಶ್ವದಾದ್ಯಂತ ಡಂಗೂರ ಬಾರಿಸುತ್ತಿದ್ದಾರೆ. ದೇಶದಲ್ಲಿ ಸಾಕಷ್ಟು ಸಮಸ್ಯೆಯಿದ್ದರೂ ಹೇಗೆ ವಿಶ್ವಗುರು ಆಗಲು ಸಾಧ್ಯ. ರೈತ ಹೋರಾಟದಿಂದ ಆಳುವ ಸರ್ಕಾರದ ಬಣ್ಣ ಬಯಲಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸ್ವರಾಜ್ ಇಂಡಿಯಾದ ಮುಜಾಫ್ತರ್ ಅಸ್ಸಾದಿ ಮಾತನಾಡಿ, ಈ ಹೋರಾಟ ಕೇವಲ ರೈತರಿಗೆ ಸೀಮಿತವಾದುದ್ದಲ್ಲ. ಎಲ್ಲರೂ ಇದಕ್ಕೆ ಬೆಂಬಲ ಸೂಚಿಸಬೇಕು. ಹೀಗಾಗಿ ಬಂದ್ ದಿನದಂದು ಜಿಲ್ಲೆಯ ಜನತೆ ಮನೆಯಲ್ಲಿಯೇ ಇದ್ದು ಪ್ರತಿಭಟನೆಗೆ ಬೆಂಬಲ ಸೂಚಿಸುವಂತೆ ಕೋರಿದರು.
ಸ್ವರಾಜ್ ಇಂಡಿಯಾದ ಉಗ್ರನರಸಿಂಹೇ ಗೌಡ ಮಾತನಾಡಿ, ಭಾರತ್ ಬಂದ್ ಕುರಿತು ಸಾರ್ವಜನಿಕರಿಗೆ ಅರಿವು ಮೂಡಿ ಸಲು ಹಾಗೂ ಅಂಗಡಿ ಮುಂಗಟ್ಟುಗಳಿಗೆ ಮನವಿ ಮಾಡುವ ಸಲುವಾಗಿ ಸೆ.25ರಂದು ಬೃಹತ್ ಬೈಕ್ ಜಾಥಾ ನಡೆಸಲಾಗುತ್ತಿದೆ. ನಗರದ ಜೆ.ಕೆ.ಮೈದಾನದಿಂದ ಜಾಥಾ ಆರಂಭವಾಗಿ ನಗರದ ಪ್ರಮುಖ ರಸ್ತೆಗಳು, ಬಡಾವಣೆಗಳು ಸೇರಿ ಸುಮಾರು 40 ಕಿ.ಮೀ. ಚಲಿಸಲಿದೆ ಎಂದು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಕರ್ನಾಟಕ ರಾಜ್ಯ ರೈತ ಸಂಘದ ತಾಲೂಕು ಅಧ್ಯಕ್ಷ ಪಿ. ಮರಂಕಯ್ಯ, ಸಿಪಿಐನ ಲಾ.ಜಗನ್ನಾಥ್, ಎಸ್‍ಯುಸಿಐನ ಯಶೋಧರ, ಬಲರಾಂ, ದಲಿತ ಸಂಘರ್ಷ ಸಮಿತಿಯ ಚೋರನ ಹಳ್ಳಿ ಶಿವಣ್ಣ ಉಪಸ್ಥಿತರಿದ್ದರು
Source:mysoremithra