ಸಲಗ ಏ.15, ಕೋಟಿಗೊಬ್ಬ 3 ಏ.29, ಭಜರಂಗಿ 2 ಮೇ 14

Jan 21, 2021

ಅಲ್ಲಿಗೆ ಎಲ್ಲಾ ಸ್ಟಾರ್‌ ಸಿನಿಮಾಗಳು ಸರತಿ ಸಾಲಲ್ಲಿ ಬಿಡುಗಡೆಗೆ ನಿಂತಂತೆ ಆಗಿದೆ. ಈಗಾಗಲೇ ‘ಪೊಗರು’ ಚಿತ್ರ ಫೆ.19ಕ್ಕೆ, ಮಾಚ್‌ರ್‍ 11ಕ್ಕೆ ‘ರಾಬರ್ಟ್‌’ ಹಾಗೂ ಏಪ್ರಿಲ್‌ 1ಕ್ಕೆ ‘ಯುವರತ್ನ’ ಚಿತ್ರಗಳು ಬಿಡುಗಡೆಯ ದಿನವನ್ನು ಅಧಿಕೃತವಾಗಿ ಘೋಷಣೆ ಮಾಡಿಕೊಂಡಿವೆ.

ವಿಶೇಷ ಎಂದರೆ ಏಪ್ರಿಲ್‌ ತಿಂಗಳಲ್ಲೇ ಮೂವರು ಸ್ಟಾರ್‌ಗಳು ತೆರೆ ಮೇಲೆ ಬರುತ್ತಿದ್ದಾರೆ. ‘ಯುವರತ್ನ’ ಮೂಲಕ ಪುನೀತ್‌ರಾಜ್‌ಕುಮಾರ್‌, ‘ಸಲಗ’ ಚಿತ್ರದಿಂದ ದುನಿಯಾ ವಿಜಯ್‌, ‘ಕೋಟಿಗೊಬ್ಬ 3’ ಚಿತ್ರದ ಮೂಲಕ ಸುದೀಪ್‌ ಪ್ರೇಕ್ಷಕರ ಮುಂದೆ ಬರುತ್ತಿದ್ದಾರೆ. ಎರಡ್ಮೂರು ವಾರಗಳ ಅಂತರದಲ್ಲಿ ಸ್ಟಾರ್‌ಗಳು ಹೀಗೆ ಒಂದೇ ತಿಂಗಳಲ್ಲಿ ಚಿತ್ರಮಂದಿರಗಳಿಗೆ ಬರುತ್ತಿರುತ್ತಿರುವ ಯೋಜನೆ ನೋಡಿ ಆಯಾ ನಟರ ಅಭಿಮಾನಿಗಳಲ್ಲಿ ಕ್ರೇಜ್‌ ಮತ್ತಷ್ಟುಹೆಚ್ಚಾಗಿದೆ.

2021ರ ಹೊಸ ವರ್ಷದ ಆರಂಭದ ನಾಲ್ಕು ತಿಂಗಳನ್ನು ಆರು ಮಂದಿಯ ಸ್ಟಾರ್‌ ನಟರ ಚಿತ್ರಗಳು ಕಬ್ಜ ಮಾಡಿವೆ.

ನಮ್ಮ ಸಕ್ರಿಯ ನಿರ್ಮಾಪಕರ ತಂಡದಿಂದ ಈ ವರ್ಷ ಮೊದಲು ಬಿಡುಗಡೆಯಾಗುತ್ತಿರುವ ಸಿನಿಮಾ ‘ಪೊಗರು’. ಈ ಚಿತ್ರದ ನಿರ್ಮಾಪಕ ಗಂಗಾಧರ್‌, ನಾಯಕ ಧ್ರುವ ಸರ್ಜಾ ಹಾಗೂ ನಿರ್ದೇಶಕ ನಂದಕಿಶೋರ್‌ ಅವರಿಗೆ ದೊಡ್ಡ ಮಟ್ಟದಲ್ಲಿ ಯಶಸ್ಸು ಸಿಗಬೇಕು. ಆ ಮೂಲಕ ಮತ್ತಷ್ಟುದೊಡ್ಡ ಸಿನಿಮಾಗಳ ಬಿಡುಗಡೆಗೆ ಧೈರ್ಯ ತುಂಬಲಿ ಎಂದು ಆಶಿಸುತ್ತೇನೆ.- ಕೆ ಪಿ ಶ್ರೀಕಾಂತ್‌, ನಿರ್ಮಾಪಕ

Source:Suvarna News