ಸಕ್ರಿಯ ಕೇಸ್‌: ದೇಶದಲ್ಲೇ 7ನೇ ಸ್ಥಾನ ಬೆಂಗಳೂರಿಗೆ!

Mar 25, 2021

ಸಕ್ರಿಯ ಕೇಸ್‌: ದೇಶದಲ್ಲೇ 7ನೇ ಸ್ಥಾನ ಬೆಂಗಳೂರಿಗೆ| ಟಾಪ್‌ 10ನಲ್ಲಿ ಇನ್ನೆಲ್ಲಾ ಜಿಲ್ಲೆಗಳು ಮಹಾರಾಷ್ಟ್ರದವು.

ನವದೆಹಲಿ(ಮಾ.25): ದೇಶದಲ್ಲಿ ಅತಿ ಹೆಚ್ಚು ಸಕ್ರಿಯ ಸೋಂಕಿತರನ್ನು ಹೊಂದಿರುವ ಜಿಲ್ಲೆಗಳ ಪೈಕಿ ಬೆಂಗಳೂರು ನಗರ ಜಿಲ್ಲೆ ದೇಶದಲ್ಲೇ 7ನೇ ಸ್ಥಾನದಲ್ಲಿದೆ ಎಂಬ ಆತಂಕಕಾರಿ ಮಾಹಿತಿಯನ್ನು ಕೇಂದ್ರ ಆರೋಗ್ಯ ಸಚಿವಾಲಯ ಬುಧವಾರ ಮಾಹಿತಿ ನೀಡಿದೆ.

ಪ್ರಸಕ್ತ ಕೋವಿಡ್‌ ಸ್ಥಿತಿಗತಿ ಕುರಿತು ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕೇಂದ್ರ ಆರೋಗ್ಯ ಸಚಿವಾಲಯದ ಕಾರ್ಯದರ್ಶಿ ಅಜಯ್‌ ಭೂಷಣ್‌, ದೇಶದಲ್ಲಿ ಅತಿ ಹೆಚ್ಚು ಸಕ್ರಿಯ ಕೇಸು ಹೊಂದಿರುವ ಟಾಪ್‌ 10 ಜಿಲ್ಲೆಗಳ ಪೈಕಿ 9 ಜಿಲ್ಲೆಗಳು ಕೇವಲ ಮಹಾರಾಷ್ಟ್ರ ಒಂದಕ್ಕೇ ಸೇರಿವೆ. ಇನ್ನೊಂದು ಜಿಲ್ಲೆಯೆಂದರೆ ಕರ್ನಾಟಕದ ಬೆಂಗಳೂರು ನಗರ ಜಿಲ್ಲೆ. ಅದು 7ನೇ ಸ್ಥಾನದಲ್ಲಿದೆ ಎಂದು ಹೇಳಿದ್ದಾರೆ.

ಬೆಂಗಳೂರು ನಗರ ಜಿಲ್ಲೆ ವ್ಯಾಪ್ತಿಯಲ್ಲಿ ಬುಧವಾರ ಬೆಳಗ್ಗೆ 8 ಗಂಟೆಗೆ ಮುಗಿದ ಅವಧಿಯವರೆಗೆ 4.19 ಲಕ್ಷ ಜನರಿಗೆ ಸೋಂಕು ತಗುಲಿದ್ದು, 4.04 ಲಕ್ಷ ಜನರು ಸೋಂಕಿನಿಂದ ಚೇತರಿಸಿಕೊಂಡಿದ್ದಾರೆ. 10766 ಜನರು ಇನ್ನೂ ಸಕ್ರಿಯ ಸೋಂಕಿತರಾಗಿದ್ದು ಆಸ್ಪತ್ರೆಯಲ್ಲಿದ್ದಾರೆ. ಜೊತೆಗೆ ಈವರೆಗೆ 4556 ಜನರು ಸೋಂಕಿಗೆ ಬಲಿಯಾಗಿದ್ದಾರೆ.

ಸಂಖ್ಯೆ ಜಿಲ್ಲೆ ಸಕ್ರಿಯ ಕೇಸು

1 ಪುಣೆ 43590

2 ನಾಗಪುರ 33150

3 ಮುಂಬೈ 26599

4 ಠಾಣೆ 22513

5 ನಾಸಿಕ್‌ 15710

6 ಔರಂಗಾಬಾದ್‌ 15380

7 ಬೆಂಗಳೂರು ನಗರ 10766

8 ನಾಂದೇಡ್‌ 10106

9 ಜಲಗಾಂವ್‌ 6087

10 ಅಕೋಲಾ 5704

 

Source:Suvarna News