ವಿಶ್ವದ ದೊಡ್ಡಣ್ಣ ಎನಿಸಿಕೊಂಡ ಅಮೆರಿಕಾವೇ ಭಾರತಕ್ಕೆ ದೊಡ್ಡ ಮಟ್ಟದ ಸಾಲ ತೀರಿಸಬೇಕಿದೆ!
USA: ಅಮೆರಿಕಾ ದೇಶ ಚೀನಾಕ್ಕೆ 1 ಟ್ರಿಲಿಯನ್ ಡಾಲರ್, ಜಪಾನ್ಗೆ 1 ಟ್ರಿಲಿಯನ್ ಡಾಲರ್ ಹಾಗೂ ಭಾರತಕ್ಕೆ 216 ಬಿಲಿಯನ್ ಡಾಲರ್ ನೀಡುವುದು ಬಾಕಿ ಉಳಿದಿದೆ. ಒಟ್ಟಾರೆ 2020ರಲ್ಲಿ ಅಮೆರಿಕಾ 23.4 ಟ್ರಿಲಿಯನ್ ಡಾಲರ್ ಸಾಲ ಹೊಂದಿದ್ದು, ಆಮೆರಿಕಾದ ಪ್ರತಿಯೊಬ್ಬ ವ್ಯಕ್ತಿಯ ಮೇಲೆ 72,309 ಡಾಲರ್ ಸಾಲ ಇದೆ
ಇರುವೆಗೆ ಇರುವೆ ಭಾರ, ಆನೆಗೆ ಆನೆ ಭಾರ ಎಂಬ ಮಾತಿದೆ. ಎಷ್ಟೇ ಶ್ರೀಮಂತರಾದರೂ ಅದಕ್ಕೆ ತಕ್ಕನಾದ ಖರ್ಚು, ವೆಚ್ಚ, ಸಾಲಗಳಿರುತ್ತವೆ. ಈ ಮಾತಿಗೆ ತಕ್ಕಂತೆ ವಿಶ್ವದ ದೊಡ್ಡಣ ಅಮೆರಿಕಾ ಭಾರತದ ಬಳಿ ಪಡೆದಿರುವ ದೊಡ್ಡ ಮೊತ್ತದ ಸಾಲವೊಂದನ್ನು ಹಿಂದಿರುಗಿಸುವುದು ಬಾಕಿ ಇದೆಯಂತೆ. ಈ ಬಗ್ಗೆ ಸ್ವತಃ ಆಮೆರಿಕಾದ ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್ನಲ್ಲಿ ಆಮೆರಿಕಾ ಕಾಂಗ್ರೆಸ್ ಸದಸ್ಯ ಆಲೆಕ್ಸ್ ಮೂನಿ ಹೇಳಿಕೆ ನೀಡಿದ್ದು, ಭಾರತಕ್ಕೆ ಆಮೆರಿಕಾ ಬರೋಬ್ಬರಿ 216 ಬಿಲಿಯನ್ ಡಾಲರ್ ಹಣವನ್ನು ನೀಡುವುದು ಬಾಕಿ ಇದೆ ಎಂದು ತಿಳಿಸಿದ್ದಾರೆ.
ರಿಪಬ್ಲಿಕನ್ ಪಕ್ಷದ ಸೆನೆಟರ್ ಆಗಿರುವ ಆಲೆಕ್ಸ್ ಮೂನಿ ಆಮೆರಿಕಾದ ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್ನಲ್ಲಿ ಮಾತನಾಡುತ್ತಾ, ಕೊರೊನಾ ವೈರಸ್ ಸಂಕಷ್ಟ ಪರಿಹಾರಕ್ಕೆ 2 ಟ್ರಿಲಿಯನ್ ಡಾಲರ್ ಪರಿಹಾರ ಪ್ಯಾಕೇಜ್ ನೀಡುವ ಬಗ್ಗೆ ವಿರೋಧಿಸಿದರು. ಅದೇ ಭಾಷಣದ ವೇಳೆ ಅಮೆರಿಕಾದ ಸಾಲದ ಪ್ರಮಾಣ ಹೆಚ್ಚಾಗುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದ ಆಲೆಕ್ಸ್ ಮೂನಿ ಆಮೆರಿಕಾ ಯಾವ ಯಾವ ದೇಶಕ್ಕೆ ಎಷ್ಟು ಹಣ ನೀಡುವುದು ಬಾಕಿ ಇದೆ ಎಂದು ಹೇಳಿದ್ದಾರೆ.
ಅಮೆರಿಕಾ ದೇಶ ಚೀನಾಕ್ಕೆ 1 ಟ್ರಿಲಿಯನ್ ಡಾಲರ್, ಜಪಾನ್ಗೆ 1 ಟ್ರಿಲಿಯನ್ ಡಾಲರ್ ಹಾಗೂ ಭಾರತಕ್ಕೆ 216 ಬಿಲಿಯನ್ ಡಾಲರ್ ನೀಡುವುದು ಬಾಕಿ ಉಳಿದಿದೆ. ಒಟ್ಟಾರೆ 2020ರಲ್ಲಿ ಅಮೆರಿಕಾ 23.4 ಟ್ರಿಲಿಯನ್ ಡಾಲರ್ ಸಾಲ ಹೊಂದಿದ್ದು, ಆಮೆರಿಕಾದ ಪ್ರತಿಯೊಬ್ಬ ವ್ಯಕ್ತಿಯ ಮೇಲೆ 72,309 ಡಾಲರ್ ಸಾಲ ಇದೆ ಎಂದು ಆಲೆಕ್ಸ್ ಮೂನಿ ಹೇಳಿಕೆ ನೀಡಿದ್ದಾರೆ.
Source: TV9Kannada