ಮೈಸೂರು; ಆಭರಣ ಅಂಗಡಿ ದರೋಡೆಗೆ ಯತ್ನ, ಮಾಲೀಕನ ಮೇಲೆ ಗುಂಡಿನ ದಾಳಿ

Aug 24, 2021

* ಸಾಂಸ್ಕ್ರತಿಕ ನಗರಿ ಮೈಸೂರಿನಲ್ಲಿ ಗುಂಡಿನ ಸದ್ದು
* ಚಿನ್ನಾಭರಣ ಅಂಗಡಿ ಒಳಗೆ ಫೈರಿಂಗ್
* ಗುಂಡೇಟು ಬಿದ್ದ ಓರ್ವ ಸಾವು, ದರೋಡೆ ಮಾಡಲು ಯತ್ನಿಸಿ ತಪ್ಪಿಸಿ ಕೊಳ್ಳಲು ಗುಂಡಿನ ದಾಳಿ
* ಅಂಗಡಿ ಮಾಲೀಕನ ಮೇಲೆಯೂ ದಾಳಿ

ದರೋಡೆ ಮಾಡಲು ಯತ್ನಿಸಿದ ಗುಂಪು ತಪ್ಪಿಸಿಕೊಳ್ಳಲು ಮುಂದಾದವರ ಮೇಲೆ ಗುಂಡಿನ ದಾಳಿ ಮಾಡಿದೆ. ಮೈಸೂರಿನ ವಿದ್ಯಾರಣ್ಯಪುರಂನಲ್ಲಿ ಘಟನೆ ನಡೆದಿದೆ.

ಅಮೃತ್ ಗೋಲ್ಡ್ ಆ್ಯಂಡ್ ಸಿಲ್ವರ್ ಯಲ್ಲಿ ಗುಂಡಿನ ಸದ್ದು ಕೇಳಿದೆ. ಮುಖ್ಯರಸ್ತೆಯಲ್ಲಿರುವ ಅಂಗಡಿಗೆ ನುಗ್ಗಿದ ಮೂವರು ದರೋಡೆಕೋರರು ಚಿನ್ನ, ಬೆಳ್ಳಿ ಕದಿಯಲು ಯತ್ನಿಸಿದ್ದಾರೆ. ಇದನ್ನು ತಡೆಯಲು ಯತ್ನಿಸಿದ ಅಂಗಡಿ ಮಾಲೀಕ ಧರ್ಮೇಂದ್ರ ಅವರ ಮೇಲೆ ಗುಂಡು ಹಾರಿಸಿ ಪರಾರಿಯಾಗಿದ್ದಾರೆ.ದಾಳಿಯ ವೇಳೆ ಅಂಗಡಿ ಒಳಗೆ ಇದ್ದ ದಡದಹಳ್ಳಿ ಚಂದ್ರು ಗುಂಡಿನ ದಾಳಿಗೆ ಬಲಿಯಾಗಿದ್ದಾರೆ.

Source: kannada.asianetnews