ಮೈಸೂರಲ್ಲೊಬ್ಬ ಮಾದರಿ ರೈತ.. ಸರ್ಕಾರಿ ಉದ್ಯೋಗ ಬಿಟ್ಟು ಕೃಷಿಯಲ್ಲೇ ಸಾಧನೆಗೈದ ಅನ್ನದಾತ

Feb 4, 2021

Man Quits Govt Job T‌o Do Farming ಅವರು ವಿದೇಶದಲ್ಲಿ ವ್ಯಾಸಗ ಮಾಡಿ ಬಂದಿದ್ದಾರೆ. ಅಷ್ಟೆ ಯಾಕೇ ಪಕ್ಕದ‌ ಆಂಧ್ರ ಸರ್ಕಾರದಲ್ಲೂ ಉನ್ನತ ಹುದ್ದೆಯಲ್ಲಿ ಕೆಲಸ ಮಾಡಿದ್ದವರು. ಆದ್ರೆ ಯಾಕೋ ಹುದ್ದೆ ಇಷ್ಟವಾಗದೆ, ಕೃಷಿ ಮಾಡಬೇಕೆಂಬ ಉದ್ದೇಶದಿಂದ ಮೈಸೂರಿಗೆ ಬಂದು ನೆಲೆಸಿ ಈಗ ಮಾದರಿ ರೈತರಾಗಿದ್ದಾರೆ.

ಮೈಸೂರು: ಜಿಲ್ಲೆಯ ಹೆಚ್.ಡಿ.ಕೋಟೆ ತಾಲೂಕಿ‌ನ ಪಡುವಲಕೋಟೆ ಕಾವಲ್ ಗ್ರಾಮದಲ್ಲಿ ರಾಮಕೃಷ್ಣ ಎಂಬ ತೋಟದ ಮಾಲೀಕ ಕೃಷಿ ಮಾಡಿ ಮಾದರಿ ರೈತರಾಗಿದ್ದಾರೆ. ಮೂಲತಃ ಆಂಧ್ರದವರಾದ ರಾಮಕೃಷ್ಣಗೆ ಕೃಷಿಯಲ್ಲಿ ತುಂಬಾ ಆಸಕ್ತಿ.

ಬಿಎಸ್ಸಿ ಅಗ್ರಿಕಲ್ಚರ್ ಮಾಡಿದ್ದ ಇವರು ಆಸ್ಟ್ರೇಲಿಯಾದ ಸಿಡ್ನಿ ಯೂನಿರ್ವಸಿಟಿ ಆಫ್ ವೆಸ್ಟ್ರನ್​ನಲ್ಲಿ 2 ವರ್ಷ ಮಾಸ್ಟರ್ ಆಫ್ ಹಾರ್ಟಿಕಲ್ಚರ್ ಪೂರೈಸಿದ್ದಾರೆ. ಬಳಿಕ ವಿದೇಶದ ಕೆಲಸ ಬಿಟ್ಟು ದೇಶದಲ್ಲಿ ಸೇವೆಯನ್ನ ಸಲ್ಲಿಸಿದ್ದರು. ಆಂಧ್ರಪ್ರದೇಶದಲ್ಲಿ ತೋಟಗಾರಿಕೆ ಇಲಾಖೆಯಲ್ಲಿ ಉಪನಿರ್ದೇಶಕರಾಗಿ‌‌ ಕೆಲಸ‌ ನಿರ್ವಹಿಸಿದ್ದಾರೆ. ಆದ್ರೆ ಒಂದೇ ವರ್ಷಕ್ಕೆ ಕೆಲಸ ಬಿಟ್ಟು ಮತ್ತೆ ಬಂದಿದ್ದು ಕೃಷಿ ಕಡೆಗೆ. ಎಲ್ಲೆಡೆ ಸುತ್ತಾಡಿ ಕಳೆದ 15 ವರ್ಷಗಳಿಂದ ಇವರು ಮೈಸೂರಿಗೆ ಬಂದು ನೆಲೆಸಿದ್ದಾರೆ. ಸುಮಾರು 40 ಎಕರೆ ಜಾಗದಲ್ಲಿ ಕೃಷಿ ಆರಂಭಿಸಿ ಮಾದರಿ ರೈತರಾಗಿದ್ದಾರೆ.

ತೈವಾನ್ ಪಿಂಕ್ ಸೀಬೆ, ಪರ್ಷಿಯನ್ ಲೈಮ್ ಹೆಸರಿನ ಬೀಜ ರಹಿತ ನಿಂಬೆ ಮತ್ತು ಆಸ್ಟ್ರೇಲಿಯನ್ ಗೋಲ್ಡನ್ ಸೀತಾಫಲ ಬೆಳೆಯುತ್ತಿದ್ದಾರೆ. 15 ಎಕರೆ ಪ್ರದೇಶದಲ್ಲಿ ತೈವಾನ್ ಸೀಬೆ, ಉಳಿದ 25 ಎಕ್ಕೆರೆಯಲ್ಲಿ ಸೀತಾಫಲ, ನಿಂಬೆ ಬೆಳೆಯನ್ನು ಬೆಳೆಯುತ್ತಿದ್ದಾರೆ. ರಾಮಕೃಷ್ಣ ಪ್ರಕಾರ 5 ಎಕರೆಯಲ್ಲಿ ಕೃಷಿ ಮಾಡಿದ್ರೆ ವರ್ಷಕ್ಕೆ 15 ಲಕ್ಷದವರೆಗೂ ಆದಾಯ ಗಳಿಸುವುದು ಸಾಧ್ಯವಿದೆಯಂತೆ.

ಒಂದು ಸರ್ಕಾರಿ ಕೆಲಸ ಸಿಕ್ಕರೆ ಸಾಕು ಎನ್ನುವವರ ನಡುವೆ ಇದ್ದ ಸರ್ಕಾರಿ‌ ಕೆಲಸ ಬಿಟ್ಟು ಕೃಷಿ ಮಾಡುತ್ತಿರುವ ಇವರ ಕಾರ್ಯ ನಿಜಕ್ಕೂ ಶ್ಲಾಘನೀಯ.

Source:TV9Kannada