ಮುಷ್ಕರ ಕೈಬಿಡಲು ಕೋಡಿಹಳ್ಳಿ ಚಂದ್ರಶೇಖರ್​ಗೆ ಬಸವರಾಜ ಬೊಮ್ಮಾಯಿ ಮನವಿ

Apr 19, 2021

ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಆಸ್ಪತ್ರೆಯಲ್ಲಿದ್ದಾರೆ. ಸಾರಿಗೆ ಸಚಿವ ಲಕ್ಷ್ಮಣ ಸವದಿ ಕೂಡಾ ಕ್ವಾರಂಟೈನ್​ನಲ್ಲಿದ್ದಾರೆ. ಎಲ್ಲರ ಜೊತೆ ಚರ್ಚಿಸುವುದಾಗಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ. ಕೊವಿಡ್ ಹೆಚ್ಚಾಗುತ್ತಿದೆ ಮುಷ್ಕರ ಕೈಬಿಡಿ ಎಂದು ಅಫೀಲ್ ಮಾಡಿದ್ದಾರೆ. ಸಾರಿಗೆ ಸಚಿವರು ಎರಡು ದಿನದಲ್ಲಿ ಬರುತ್ತಾರೆ.

ಬೆಂಗಳೂರು: ರಾಜ್ಯದಲ್ಲಿ ಸಾರಿಗೆ ನೌಕರರ ಅನಿರ್ದಿಷ್ಟಾವಧಿ ಮುಷ್ಕರ ಹಿನ್ನೆಲೆ ಗೃಹ ಸಚಿವ ಬಸವರಾಜ ಬೊಮ್ಮಾಯಿಯನ್ನು ಕೋಡಿಹಳ್ಳಿ ಚಂದ್ರಶೇಖರ್ ಭೇಟಿ ಮಾಡಿದ್ದಾರೆ. ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾದ ಹಿನ್ನೆಲೆ ಮುಷ್ಕರ ಕೈಬಿಡಲು ಬಸವರಾಜ ಬೊಮ್ಮಾಯಿ ಮನವಿ ಮಾಡಿದ್ದಾರೆ ಎಂದು ಕೋಡಿಹಳ್ಳಿ ಚಂದ್ರಶೇಖರ್ ತಿಳಿಸಿದರು.

ಸದ್ಯ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಆಸ್ಪತ್ರೆಯಲ್ಲಿದ್ದಾರೆ. ಸಾರಿಗೆ ಸಚಿವ ಲಕ್ಷ್ಮಣ ಸವದಿ ಕೂಡಾ ಕ್ವಾರಂಟೈನ್​ನಲ್ಲಿದ್ದಾರೆ. ಎಲ್ಲರ ಜೊತೆ ಚರ್ಚಿಸುವುದಾಗಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ. ಕೊವಿಡ್ ಹೆಚ್ಚಾಗುತ್ತಿದೆ ಮುಷ್ಕರ ಕೈಬಿಡಿ ಎಂದು ಅಫೀಲ್ ಮಾಡಿದ್ದಾರೆ. ಸಾರಿಗೆ ಸಚಿವರು ಎರಡು ದಿನದಲ್ಲಿ ಬರುತ್ತಾರೆ. ಅವರು ಬಂದ ಬಳಿಕ ಸಾರಿಗೆ ಕಾರ್ಯಕಾರಿ ಸಮಿತಿಯಲ್ಲಿ ಚರ್ಚಿಸಿ ತೀರ್ಮಾನ ತೆಗೆದುಕೊಳ್ಳುತ್ತೇವೆ ಎಂದು ಕೋಡಿಹಳ್ಳಿ ಚಂದ್ರಶೇಖರ್ ಹೇಳಿದರು.

2004ರಲ್ಲಿ 20 ಶೇಕಡಾಕ್ಕೆ 6 ಶೇಕಡಾ ಬಡ್ಡಿ ಸೇರಿಸಿ ಕೊಡಬೇಕು ಅಂತಾ ಕೋರ್ಟ್ ಆದೇಶ ನೀಡಿದೆ. ಅದರ ಪ್ರಕಾರ ಹೋದರೆ 6ನೇ ವೇತನ ಆಯೋಗದಕ್ಕಿಂತ ಹೆಚ್ಚಾಗುತ್ತದೆ. ಸರ್ಕಾರ ಯಾವುದು ಆಯ್ಕೆ ಮಾಡಿಕೊಳ್ಳುತ್ತದೆಯೋ ಮಾಡಿಕೊಳ್ಳಲಿ. ಅದನ್ನ ಬಿಟ್ಟು ಅನಗತ್ಯ ಹೇಳಿಕೆ ನೀಡುವುದು ಔಚಿತ್ಯವಲ್ಲ. ಗೃಹ ಸಚಿವರು ಮುಖ್ಯಮಂತ್ರಿ ಮತ್ತು ಸಾರಿಗೆ ಸಚಿವರ ಹತ್ತಿರ ಮಾತನಾಡುತ್ತೀನಿ ಅಂತಾ ಹೇಳಿದ್ದಾರೆ. ಕಲ್ಲು ಹೊಡೆಯೋದು, ಹಿಂಸೆ ಮಾಡುವುದು ನಮ್ಮ ಸಂಸ್ಕೃತಿ ಅಲ್ಲ. ಉಪವಾಸ ಸತ್ಯಾಗ್ರಹ ಮಾಡುವುದಕ್ಕೆ ಹೇಳಿದ್ದೇವೆ. ಹೋರಾಟ ಹಿಂತೆಗೆದುಕೊಳ್ಳೋಕೆ ಸರ್ಕಾರ ಬೇಗ ತೀರ್ಮಾನ ಮಾಡಲಿ ಎಂದು ತಿಳಿಸಿದರು.

Source:TV9Kannada