ಭಾರತದ ವಿವಿಧ ನಗರಗಳಲ್ಲಿ ಪೆಟ್ರೋಲ್​, ಡೀಸೆಲ್​ ದರ ಹೀಗಿದೆ!

Mar 19, 2021

Petrol Diesel Rate in Bangalore: ಚುನಾವಣೆ ಮುಗಿದ ನಂತರ ಇಂಧನ ದರದಲ್ಲಿ ವ್ಯತ್ಯಾಸವಾಗಬಹುದು ಎಂಬ ಮಾತುಗಳು ಕೇಳಿಬರುತ್ತಿದೆ. ಮಾರ್ಚ್​ ತಿಂಗಳ ಪ್ರಾರಂಭದಿಂದ ಪೆಟ್ರೋಲ್​, ಡೀಸೆಲ್​ ದರ ಬದಲಾಗದೇ ಸ್ಥಿರವಾಗಿ ಉಳಿದಿದೆ.

ಬೆಂಗಳೂರು: ಪೆಟ್ರೋಲ್​ ದರ ಏರಿಕೆ ಕಾಣದಿರುವುದರಿಂದ ಗ್ರಾಹಕರು ನಿರಾಳರಾಗಿದ್ದಂತೂ ನಿಜ. ಚುನಾವಣೆ ಎದುರಿಗಿರುವುದರಿಂದ ಇಂಧನ ದರ ಏರುತ್ತಿಲ್ಲ ಎಂಬ ಮಾತುಗಳು ಹರಿದಾಡುತ್ತಿವೆ. ಪೆಟ್ರೋಲ್​ ದರ ಇದೀಗ ಸ್ಥಿರವಾಗಿರುವುದು ಚುನಾವಣೆಯ ನಂತರ ಏರುವುದೇ ಎಂಬ ಚಿಂತೆಯೂ ಗ್ರಾಹಕರಲ್ಲಿ ಮನೆ ಮಾಡಿದೆ. ಇಂಧನ ದರ ವ್ಯತ್ಯಾಸವನ್ನು ಚುನಾವಣೆಯ ನಂತರ ಕಾದು ನೋಡಬೇಕಿದೆ.

ಇದೀಗ ಬೆಂಗಳೂರಿನಲ್ಲಿ ಪ್ರತಿ ಲೀಟರ್​ ಪೆಟ್ರೋಲ್​ 94.22 ರೂಪಾಯಿಗೆ ಗ್ರಾಹಕರು ಕೊಳ್ಳುತ್ತಿದ್ದಾರೆ. ಡೀಸೆಲ್​ ದರ 86.37 ರೂಪಾಯಿಗೆ ಮಾರಾಟವಾಗುತ್ತಿದೆ. ಸತತವಾಗಿ 20ನೇ ದಿನ ಕೂಡಾ ಪೆಟ್ರೋಲ್​, ಡೀಸೆಲ್​ ದರದಲ್ಲಿ ಯಾವುದೇ ವ್ಯತ್ಯಾಸ ಕಂಡು ಬಂದಿಲ್ಲ. ಚುನಾವಣೆ ನಡೆಯಲಿರುವ 5 ರಾಜ್ಯಗಳಲ್ಲಿ ಚುನಾವಣೆ ದಿನಾಂಕ ಘೋಷಣೆಯಾದ ನಂತರದಿಂದ ಇಂಧನ ಬೆಲೆ ಏರಿಕೆ ಸ್ಥಗಿತಗೊಂಡಿದೆ. ಮೆಟ್ರೋ ನಗರಗಳಾದ ದೆಹಲಿಯಲ್ಲಿ ಇಂದು ಪ್ರತಿ ಲೀಟರ್​ ಪೆಟ್ರೋಲ್​ ದರ 91.17 ರೂಪಾಯಿಗೆ ಮಾರಾಟವಾಗುತ್ತಿದೆ. ಮುಂಬೈನಲ್ಲಿ ಪ್ರತಿ ಲೀಟರ್​ ಪೆಟ್ರೋಲ್​ ಗರಿಷ್ಠ ಮಟ್ಟ ತಲುಪಿದ್ದು 97.57 ರೂಪಾಯಿಗೆ ಮಾರಾಟವಾಗುತ್ತಿದೆ. ಚೆನ್ನೈನಲ್ಲಿ ಪ್ರತಿ ಲೀಟರ್​ ಪೆಟ್ರೋಲ್​ಅನ್ನು 93.11 ರೂಪಾಯಿಗೆ ಗ್ರಾಹಕರು ಕೊಳ್ಳುತ್ತಿದ್ದಾರೆ. ಕೋಲ್ಕತ್ತಾದಲ್ಲಿ ಪ್ರತಿ ಲೀಟರ್​ ಪೆಟ್ರೋಲ್​ ದರ 91.35 ರೂಪಾಯಿಗೆ ಮಾರಾಟವಾಗುತ್ತಿದೆ.

ಕೊನೆಯದಾಗಿ ಫೆಬ್ರವರಿ 27ರಂದು ಪೆಟ್ರೋಲ್​ ಡೀಸೆಲ್​ ಬದಲಾದ ನಂತರದಲ್ಲಿ ಇಂಧನ ದರದಲ್ಲಿ ಯಾವುದೇ ಬದಲಾವಣೆ ಕಂಡು ಬಂದಿಲ್ಲ. ಆಗ ಪ್ರತಿ ಲೀಟರ್​ ಪೆಟ್ರೋಲ್​ಅನ್ನು 24 ಪೈಸೆ ಹಾಗೂ ಪ್ರತಿ ಲೀಟರ್​ ಡೀಸೆಲ್​ ದರವನ್ನು 15 ಪೈಸೆ ಏರಿಕೆ ಮಾಡಲಾಗಿತ್ತು.

ಇನ್ನು, ಪುಣೆಯಲ್ಲಿ ಪ್ರತಿ ಲೀಟರ್​ ಪೆಟ್ರೋಲ್​ ದರ 97.21 ರೂಪಾಯಿಗೆ ಮಾರಾಟವಾಗುತ್ತಿದೆ. ಪ್ರತಿ ಲೀಟರ್​ ಡೀಸೆಲ್​ಅನ್ನು 86.90 ರೂಪಾಯಿಗೆ ಗ್ರಾಹಕರು ಕೊಳ್ಳುತ್ತಿದ್ದಾರೆ. ಪಂಜಾಬ್​ ರಾಜ್ಯದ ಮೊಹಾಲಿಯಲ್ಲಿ ಪ್ರತಿ ಲೀಟರ್​ ಪೆಟ್ರೋಲ್​ 93.05 ರೂಪಾಯಿಗೆ ಮಾರಾಟವಾಗುತ್ತಿದ್ದು, ಪ್ರತಿ ಲೀಟರ್​ ಡೀಸೆಲ್​ ದರ 84.03 ರೂಪಾಯಿಗೆ ಗ್ರಾಹಕರು ಕೊಳ್ಳುತ್ತಿದ್ದಾರೆ. ಹರಿಯಾಣದ ಗುರುಗ್ರಾಮದಲ್ಲಿ ಪ್ರತಿ ಲೀಟರ್​ ಪೆಟ್ರೋಲ್​ಟನ್ನು 89.111 ರೂಪಾಯಿಗೆ ಗ್ರಾಹಕರು ಕೊಳ್ಳುತ್ತಿದ್ದು, ಪ್ರತಿ ಲೀಟರ್​ ಡೀಸೆಲ್​ 82.05 ರೂಪಾಯಿಗೆ ಮಾರಾಟವಾಗುತ್ತಿದೆ.

Source:TV9Kannada