ಬೆಂಗಳೂರು ಸೇರಿ ಪ್ರಮುಖ ನಗರಗಳಲ್ಲಿ ಇಂದಿನ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ? ವಿವರ ಇಲ್ಲಿದೆ

Jan 30, 2023

ಸರ್ಕಾರಿ ಸ್ವಾಮ್ಯದ ತೈಲ ಕಂಪನಿಗಳು ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ದರಕ್ಕೆ ಅನುಗುಣವಾಗಿ ದೇಶದಲ್ಲಿ ಪೆಟ್ರೋಲ್, ಡೀಸೆಲ್ ದರವನ್ನು ಪರಿಷ್ಕರಿಸುತ್ತವೆ. ಪ್ರತಿ ದಿನ ಬೆಳಿಗ್ಗೆ 6 ಗಂಟೆಗೆ ದರ ಪರಿಷ್ಕರಣೆಯಾಗುತ್ತದೆ. ಇಂದಿನ ಪೆಟ್ರೋಲ್, ಡೀಸೆಲ್ ದರ (ಪ್ರತಿ ಲೀಟರ್​​ಗೆ) ವಿವರ ಇಲ್ಲಿದೆ.

ಬೆಂಗಳೂರು: ದೇಶದ ಮೆಟ್ರೋ ನಗರಗಳಲ್ಲಿ ಸೋಮವಾರ (ಜನವರಿ 30) ಪೆಟ್ರೋಲ್ (Petrol rate) ಮತ್ತು ಡೀಸೆಲ್ ದರದಲ್ಲಿ (diesel rate) ಯಾವುದೇ ವ್ಯತ್ಯಯವಾಗಿಲ್ಲ. ಇದರೊಂದಿಗೆ ಸತತ ಎಂಟು ತಿಂಗಳ ಕಾಲ ಉಭಯ ಇಂಧನಗಳ ದರದಲ್ಲಿ ಬದಲಾವಣೆಯಾಗಿಲ್ಲ. ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಲೀಟರ್ ಪೆಟ್ರೋಲ್ ದರ 96.72 ರೂ. ಇದ್ದು, ಡೀಸೆಲ್ ದರ 89.62 ರೂ. ಇದೆ. ಮುಂಬೈಯಲ್ಲಿ ಪೆಟ್ರೋಲ್ ದರ 106.31 ರೂ. ಹಾಗೂ ಡೀಸೆಲ್ ದರ 94.27 ರೂ. ಆಗಿದೆ. 2022ರ ಮೇ ತಿಂಗಳಲ್ಲಿ ದೇಶದಾದ್ಯಂತ ಪೆಟ್ರೋಲ್ ಮತ್ತು ಡೀಸೆಲ್ ದರದಲ್ಲಿ ಬದಲಾವಣೆಯಾಗಿತ್ತು. ಕೇಂದ್ರ ಸರ್ಕಾರವು ಪೆಟ್ರೋಲ್, ಡೀಸೆಲ್ ಮೇಲಿನ ಅಬಕಾರಿ ಸುಂಕವನ್ನು ಕ್ರಮವಾಗಿ 8 ರೂ, ಹಾಗೂ 6 ರೂ. ಕಡಿತಗೊಳಿಸಿತ್ತು. ಬಳಿಕ ಕರ್ನಾಟಕ ಸೇರಿದಂತೆ ಕೆಲವು ರಾಜ್ಯಗಳೂ ಅಬಕಾರಿ ಸುಂಕ ಕಡಿತಗೊಳಿಸಿದ್ದವು. ಹಿಮಾಚಲ ಪ್ರದೇಶ ಸರ್ಕಾರ ಇತ್ತೀಚೆಗೆ ಪೆಟ್ರೋಲ್, ಡೀಸೆಲ್ ಮೇಲಿನ ಮೌಲ್ಯವರ್ಧಿತ ತೆರಿಗೆಯನ್ನು (VAT) ಲೀಟರ್​ಗೆ 3 ರೂ. ಕಡಿತಗೊಳಿಸಿತ್ತು. ಆದಾಗ್ಯೂ, ಪೆಟ್ರೋಲ್ ಮತ್ತು ಡೀಸೆಲ್ ದರ ರಾಜ್ಯದಿಂದ ರಾಜ್ಯಕ್ಕೆ ವ್ಯತ್ಯಾಸ ಇರುತ್ತದೆ. ಸ್ಥಳೀಯ ತೆರಿಗೆಗಳ ಕಾರಣ ಈ ದರ ವ್ಯತ್ಯಾಸ ಇರುತ್ತದೆ.

ಸರ್ಕಾರಿ ಸ್ವಾಮ್ಯದ ಭಾರತ್ ಪೆಟ್ರೋಲಿಯಂ ಕಾರ್ಪೊರೇಷನ್, ಇಂಡಿಯನ್ ಆಯಿಲ್ ಕಾರ್ಪೊರೇಷನ್, ಹಿಂದುಸ್ತಾನ್ ಪೆಟ್ರೋಲಿಯಂ ಕಾರ್ಪೊರೇಷನ್ ಕಂಪನಿಗಳು ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ದರಕ್ಕೆ ಅನುಗುಣವಾಗಿ ದೇಶದಲ್ಲಿ ಪೆಟ್ರೋಲ್, ಡೀಸೆಲ್ ದರವನ್ನು ಪರಿಷ್ಕರಿಸುತ್ತವೆ. ಪ್ರತಿ ದಿನ ಬೆಳಿಗ್ಗೆ 6 ಗಂಟೆಗೆ ದರ ಪರಿಷ್ಕರಣೆಯಾಗುತ್ತದೆ. ಇಂದಿನ ಪೆಟ್ರೋಲ್, ಡೀಸೆಲ್ ದರ (ಪ್ರತಿ ಲೀಟರ್​​ಗೆ) ವಿವರ ಇಲ್ಲಿದೆ.

Petrol Price Today: ಬೆಂಗಳೂರು ಸೇರಿ ಪ್ರಮುಖ ನಗರಗಳಲ್ಲಿ ಇಂದಿನ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ? ವಿವರ ಇಲ್ಲಿದೆ

ಬೆಂಗಳೂರು: ಪೆಟ್ರೋಲ್ ದರ 101.94 ರೂ, ಡೀಸೆಲ್ ದರ 87.89 ರೂ.

ಕೋಲ್ಕತ್ತ: ಪೆಟ್ರೋಲ್ ದರ 106.03, ಡೀಸೆಲ್ ದರ 92.76 ರೂ.

ಲಖ್ನೋ: ಪೆಟ್ರೋಲ್ ದರ 96.57 ರೂ, ಡೀಸೆಲ್ ದರ 89.76 ರೂ.

ನೋಯ್ಡಾ: ಪೆಟ್ರೋಲ್ ದರ 96.79, ಡೀಸೆಲ್ ದರ 89.96 ರೂ.

ಗುರುಗ್ರಾಮ: ಪೆಟ್ರೋಲ್ ದರ 97.18 ರೂ, ಡೀಸೆಲ್ ದರ 90.05

ಚಂಡೀಗಢ: ಪೆಟ್ರೋಲ್ ದರ 96.20 ರೂ, ಡೀಸೆಲ್ ದರ 84.26 ರೂ.

ಮುಂಬೈ: ಪೆಟ್ರೋಲ್ ದರ 106.31 ರೂ, ಡೀಸೆಲ್ ದರ 94.27 ರೂ.

ದೆಹಲಿ: ಪೆಟ್ರೋಲ್ ದರ 96.72 ರೂ, ಡೀಸೆಲ್ ದರ 89.62 ರೂ.

Source: TV9Kannada