ಬಿಬಿಎಂಪಿ ಸದಸ್ಯರ ಸಂಖ್ಯೆ 198ರಿಂದ 243ಕ್ಕೆ ಹೆಚ್ಚಳ ವಾರ್ಡ್ ಪುನರ್‍ವಿಂಗಡಣೆಗೆ ಸರ್ಕಾರ ಆದೇಶ

Feb 1, 2021

ಬೆಂಗಳೂರು, ಜ. 29- ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಸದಸ್ಯರ ಸಂಖ್ಯೆಯನ್ನು ಹೆಚ್ಚಳ ಮಾಡಿ ಹಾಗೂ ವಾರ್ಡ್‍ಗಳ ಪುನರ್‍ವಿಂಗಡಣೆಗೆ ರಾಜ್ಯ ಸರ್ಕಾರದ ಶುಕ್ರವಾರ ಆದೇಶ ನೀಡಿದೆ. ಬಿಬಿಎಂಪಿ ಪ್ರಸ್ತುತ 198 ಸದಸ್ಯ ಸ್ಥಾನ ವನ್ನು ಹೊಂದಿದೆ. ಇದೀಗ ರಾಜ್ಯ ಸರ್ಕಾರ ಆ ಸ್ಥಾನಗಳನ್ನು 243ಕ್ಕೆ ಹೆಚ್ಚಳ ಮಾಡಿದೆ. ಬಿಬಿಎಂಪಿ ಕಾಪೆರ್Çರೇಟರ್‍ಗಳ ಸಂಖ್ಯೆಯನ್ನು 243ಕ್ಕೆ ಹೆಚ್ಚಳ ಮಾಡಿ ಸರ್ಕಾರ ಅಧಿಕೃತ ಆದೇಶ ಹೊರಡಿಸಿದೆ. ಜೊತೆಗೆ 6 ತಿಂಗಳ ಒಳಗೆ ವಾರ್ಡ್‍ಗಳ ಪುನರ್ ವಿಂಗಡಣೆ ಮಾಡಲು ಸೂಚನೆ ನೀಡಿದೆ. ವಾರ್ಡ್‍ಗಳ ಪುನರ್‍ವಿಂಗಡಣೆಗೆ 4 ಮಂದಿ ಹಿರಿಯ ಐಎಎಸ್ ಅಧಿಕಾರಿ ಗಳನ್ನು ಒಳಗೊಂಡ ಸಮಿತಿ ರಚನೆ ಮಾಡಲಾಗಿದೆ. ಬಿಬಿಎಂಪಿ ವಾರ್ಡ್ ಪುನರ್ ವಿಂಗಡಣಾ ಸಮಿತಿಯಲ್ಲಿ ಬಿಬಿಎಂಪಿ ಆಯುಕ್ತ ಮಂಜುನಾಥ್‍ಪ್ರಸಾದ್, ಬೆಂಗಳೂರು ಜಿಲ್ಲಾಧಿಕಾರಿ ಶಿವಮೂರ್ತಿ, ಬಿಡಿಎ ಆಯುಕ್ತ ಮಹದೇವ್, ಬಿಬಿಎಂಪಿ ವಿಶೇಷ ಆಯುಕ್ತ ಬಸವರಾಜ್ (ಕಂದಾಯ) ಒಳಗೊಂಡ ಸಮಿತಿ ರಚಿಸಿ ಅಧಿಸೂಚನೆ ಹೊರಡಿಸಲಾಗಿದೆ.

Source: Mysore Mitra