ಬಿಎಸ್ಎಫ್ ಕ್ಯಾಂಪ್​ನಲ್ಲಿ ಕೊರೊನಾ ರಣಕೇಕೆ, ಮೇಘಾಲಯದಿಂದ ಬಂದಿದ್ದ 70 ಯೋಧರಿಗೆ ಕೊರೊನಾ ಸೋಂಕು

Sep 22, 2021

ದೇವನಹಳ್ಳಿ: ಬಿಎಸ್ಎಫ್ ಕ್ಯಾಂಪ್‌ನ 70 ಯೋಧರಿಗೆ ಮಹಾಮಾರಿ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿದೆ. ಬೆಂಗಳೂರು ಗ್ರಾಮಾಂತರ ಜಿಲ್ಲೆ ದೇವನಹಳ್ಳಿ ತಾಲೂಕಿನ ಕಾರಹಳ್ಳಿಯ BSF ಕ್ಯಾಂಪ್ನಲ್ಲಿ ಮೇಘಾಲಯದಿಂದ ಬಂದಿದ್ದ 70 ಯೋಧರಿಗೆ ಕೊರೊನಾ ತಗುಲಿದೆ.

ಮೊದಲು 34 ಯೋಧರಲ್ಲಿ ಸೋಂಕು ಪತ್ತೆಯಾಗಿತ್ತು. ಬಳಿಕ ಇಂದು ಮತ್ತೆ 36 ಯೋಧರಿಗೆ ಸೋಂಕು ತಗುಲಿರುವುದು ದೃಢಪಟ್ಟಿದೆ. 2 ದಿನದಲ್ಲಿ 70 ಯೋಧರಿಗೆ ಕೊರೊನಾ ಸೋಂಕು ತಗುಲಿರುವುದು ತಿಳಿದು ಬಂದಿದೆ. ಇನ್ನು 70 ಸೋಂಕಿತರ ಪೈಕಿ ಒಬ್ಬ ಯೋಧನಿಗೆ ICUನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಕಳೆದ 11 ರಂದು ಮೇಘಾಲಯದಿಂದ ಬೆಂಗಳೂರಿನ ಬಿಎಸ್ಎಪ್ ಕ್ಯಾಂಪ್ಗೆ ಬಂದಿದ್ದ ಯೋಧರಲ್ಲಿ ಕೊರೊನಾ ಸೋಂಕು ಕಾಣಿಸಿಕೊಂಡಿದ್ದು ಸೋಂಕಿತರ ಸಂಖ್ಯೆ ಇಂದು 70 ಕ್ಕೆ ಏರಿದೆ. ಬೆಂಗಳೂರು ಗ್ರಾಮಾಂತರ ಜಿಲ್ಲೆ ದೇವನಹಳ್ಳಿ ತಾಲೂಕಿನ ಕಾರಹಳ್ಳಿ ಬಳಿಯಿರೂ ಬಿಎಸ್ಎಫ್ ಟ್ರೈನಿಂಗ್ ಕ್ವಾಟರ್ಸ್ ನಲ್ಲಿ ಉಳಿದುಕೊಂಡಿದ್ದ 365 ಜನರಿಗೆ ನೆನ್ನೆ ಆರ್ಟಿಪಿಸಿಆರ್ ಟೆಸ್ಟಿಂಗ್ ಮಾಡಲಾಗಿತ್ತು‌. ಹೀಗಾಗಿ ಇಂದು ಬೆಳಗ್ಗೆ ಟೆಸ್ಟಿಂಗ್ ವರದಿ ಬಂದಿದ್ದು ನೆನ್ನೆ ಆಸ್ವತ್ರೆಗೆ ದಾಖಲಾಗಿದ್ದ 34 ಜನರ ಜೊತೆಗೆ ಇದೀಗ ಹೊಸದಾಗಿ ಕೊರೊನಾ ಸೋಂಕು ಕಾಣಿಸಿಕೊಂಡಿರೂ 36 ಜನರನ್ನ ಐಸೋಲೇಷನ್ ಗೆ ಕಳಿಸುವ ಕೆಲಸವನ್ನ ಆರೋಗ್ಯ ಇಲಾಖೆ ಸಿಬ್ಬಂದಿ ಮಾಡ್ತಿದ್ದಾರೆ. ಜತೆಗೆ 34 ಇದ್ದ ಕೊರೊನಾ ಸೋಂಕಿತರ ಸಂಖ್ಯೆ ಇಂದು 70 ಕ್ಕೆ ಏರಿಕೆಯಾಗಿರೂ ಕಾರಣ ಬಿಎಸ್ಎಫ್ ಯೋಧರಲ್ಲಿ ಆತಂಕ ಮನೆ ಮಾಡಿದೆ.

ಕ್ವಾಟರ್ಸ್ ನಲ್ಲಿದ್ದಾರೆ 1800 ಜನ ಯೋಧರು ಮತ್ತು ಕುಟುಂಬಸ್ಥರು
ಇನ್ನೂ ಕಾರಹಳ್ಳಿಯ ಕ್ಯಾಂಪ್ನಲ್ಲಿ 1800 ಜನ ಯೋಧರು ಮತ್ತು ಅವರ ಕುಟುಂಬಸ್ಥರಿದ್ದು ನೆನ್ನೆ 400 ಜನರಿಗೆ ದೇವನಹಳ್ಳಿಯ ಆರೋಗ್ಯ ಇಲಾಖೆ ಸಿಬ್ಬಂದಿ ಆರ್ಟಿಪಿಸಿಆರ್ ಕೊರೊನಾ ಟೆಸ್ಟ್ ಮಾಡಿದ್ದು ಅದರಲ್ಲಿ 36 ಜನರಿಗೆ ಕೊರೊನಾ ಪಾಸಿಟಿವ್ ಬಂದಿದೆ. ಇನ್ನೂ ಕ್ಯಾಂಪ್ನಲ್ಲಿ ಟೆಸ್ಟಿಂಗ್ ಮಾಡಬೇಕಾದವರು 1400 ಜನರಿದ್ದು ಅವರಿಗೂ ಇಂದು ಮತ್ತು ನಾಳೆ ಆರೋಗ್ಯ ಇಲಾಖೆ ಸಿಬ್ಬಂದಿ ಕೊವಿಡ್ ಟೆಸ್ಟ್ ಮಾಡಲಿದ್ದಾರೆ. ಹೀಗಾಗಿ ಎಲ್ಲರಿಗೂ ಕೊರೊನಾ ಟೆಸ್ಟ್ ಮಾಡಿದ ನಂತರ ಕ್ಯಾಂಪ್ನಲ್ಲಿ ಸೋಂಕಿತರ ಸಂಖ್ಯೆ ನೂರರ ಗಡಿ ದಾಟಿ ಹೆಚ್ಚಾಗುವ ಆತಂಕವು ಹೆಚ್ಚಾಗಿದ್ದು ಬಿಎಸ್ಎಫ್ ಕ್ಯಾಂಪ್ ಕೊರೊನಾ ಹಾಟ್ ಸ್ಪಾಟ್ ಆಗ್ತಿದೆಯಾ ಅನ್ನೂ ಆತಂಕವು ಯೋಧರು ಮತ್ತು ಸುತ್ತಮುತ್ತಲಿನ ಗ್ರಾಮಸ್ಥರಲ್ಲಿ ಎದುರಾಗಿದೆ.

ಒರ್ವ ಯೋಧನ ಸ್ಥಿತಿ ಗಂಬೀರ ಐಸಿಯು ನಲ್ಲಿ ಚಿಕಿತ್ಸೆ
ಕೊರೊನಾ ಸೋಂಕಿಗೆ ತುತ್ತಾಗಿರೂ ಒಟ್ಟು 70 ಜನ ಸೋಂಕಿತರ ಪೈಕಿ ಓರ್ವಯೋಧನ ಸ್ಥಿತಿ ಗಂಭೀರವಾಗಿದ್ದು ನೆನ್ನೆಯಿಂದ ದೇವನಹಳ್ಳಿಯ ಸರ್ಕಾರಿ ಆಸ್ವತ್ರೆಯ ಐಸಿಯು ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಆದ್ರೆ ಅಲ್ಲಿಯು ಅಷ್ಟಾಗಿ ಚಿಕಿತ್ಸೆಗೆ ಸ್ವಂದಿಸದ ಹಿನ್ನೆಲೆಯಲ್ಲಿ ಇಂದು ಬೆಂಗಳೂರಿನ ಆಸ್ವತ್ರೆಗೆ ಐಸಿಯು ನಲ್ಲಿರೂ ಯೋಧನನ್ನ ಶಿಪ್ಟ್ ಮಾಡಲು ಅಧಿಕಾರಿಗಳು ನಿರ್ಧಾರ ಮಾಡಿದ್ದು ಇಂದು ಬೆಂಗಳೂರಿನ ಆಸ್ವತ್ರೆಗೆ ರವಾನಿಸಿ ಐಸಿಯುನಲ್ಲಿರೂ ಯೋಧನಿಗೆ ಹೆಚ್ಚಿನ ಚಿಕಿತ್ಸೆಯನ್ನ ನೀಡಲಿದ್ದಾರೆ.

Source:tv9kannada