ಬಡವರ ಬದುಕಿಗೆ ಕಂಟಕವಾದ ಬೆಂಗಳೂರು ಮೈಸೂರು ಎಕ್ಸ್‌ಪ್ರೆಸ್‌ವೇ
ಬೆಂಗಳೂರು, ಫೆಬ್ರವರಿ 9: ಬೆಂಗಳೂರು ಮೈಸೂರು ದಶಪಥ ರಾಷ್ಟ್ರೀಯ ಹೆದ್ದಾರಿಯು ವಾಹನ ಸವಾರರಿಗೆ ಸುಗಮ ಸಂಚಾರಕ್ಕೆ ರಹದಾರಿಯಾಗಿದ್ದರೆ, ಈ ಹೆದ್ದಾರಿಯಲ್ಲಿ ಸಣ್ಣಪುಟ್ಟ ವ್ಯಾಪಾರ ಮಾಡಿಕೊಂಡು ಹೊಟ್ಟೆಹೊರೆಯುತ್ತಿದ್ದ ಜನರಿಗೆ ಕಂಟಕವಾಗಿ ಪರಿಣಮಿಸಿದೆ. ಚನ್ನಪಟ್ಟಣ ಪಟ್ಟಣದಲ್ಲಿ ಅದರ ಪ್ರಸಿದ್ಧ ವರ್ಣರಂಜಿತ ಮರದ ಆಟಿಕೆಗಳನ್ನು ಮಾರಾಟ ಮಾಡುವ ಮಳಿಗೆಗಳು ಈಗ ನಿರ್ಜನವಾಗಿವೆ. ವಡೆಗಳಿಗೆ ಹೆಸರಾದ ಮದ್ದೂರಿನಲ್ಲಿ ಅಂಗಡಿಗಳು ಮುಚ್ಚಿವೆ ಎಂಬ ಸೂಚನಫಲಕ ಕಂಡು ಬರುತ್ತಿದೆ. ಇದರಂತೆ ರಾಮನಗರ, ಚನ್ನಪಟ್ಟಣ, ಮದ್ದೂರು ಮತ್ತು ಮಂಡ್ಯದಾದ್ಯಂತ ಸಾವಿರಾರು ಮಾರಾಟಗಾರರು ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ವೇ ತಮ್ಮ ಜೀವನೋಪಾಯಕ್ಕೆ ಬಾರಿ ಸಂಕಷ್ಟ ತಂದಿದೆ. ಈ ರಸ್ತೆಯಿಂದ ವ್ಯಾಪಾರಸ್ಥರಿಗೆ ಶೇ. 60% ಆದಾಯವನ್ನು ಕಡಿಮೆ ಮಾಡಿದೆ.
ಸಿದ್ದರಾಮಯ್ಯ ನಾನು ಚೆಕ್ ಗೆ ಸೈನ್ ಹಾಕಿದ್ದೀವಿ, 2 ಲಕ್ಷ ಕೊಡ್ತೀವಿ ಚನ್ನಪಟ್ಟಣದ ಆಟಿಕೆ ಮಾರಾಟಗಾರ ಚಂದ್ರಶೇಖರ್, ವಾರಾಂತ್ಯದಲ್ಲಿ, ಅಂಗಡಿಯು 20,000 ರೂಪಾಯಿ ಮೌಲ್ಯದ ವಹಿವಾಟು ಆಗುತ್ತಿತ್ತು. ಈಗ ನಾವು ಕೇವಲ 4,000 ರೂಪಾಯಿ ಗಳಿಸುತಿದ್ದೇವೆ.”ಕಳೆದ ಎರಡು ಮೂರು ತಿಂಗಳುಗಳಲ್ಲಿ, ಬಾಡಿಗೆಗೆ ಇರುವ ಅನೇಕರು ಅಂಗಡಿಗಳನ್ನು ಮುಚ್ಚಿಕೊಂಡು ಹೋಗಿದ್ದಾರೆ ಎಂದು ಡಿಚ್ ವರದಿ ಮಾಡಿದೆ.
ಚಿಲ್ಲರೆ ವ್ಯಾಪಾರಿಗಳೂ ತಮ್ಮ ಭವಿಷ್ಯದ ಬಗ್ಗೆ ಚಿಂತಕ್ರಾಂತರಾಗಿದ್ದಾರೆ. ವ್ಯಾಪಾರ ತೀವ್ರವಾಗಿ ಕುಸಿದಿದ್ದು ಮೈಸೂರಿಗೆ ಹೋಗುವ ಪ್ರಯಾಣಿಕರು ಚನ್ನಪಟ್ಟಣದಲ್ಲಿ ವಾಹನ ನಿಲ್ಲಿಸಿ ಏನನ್ನಾದರೂ ಖರೀದಿಸಿಕೊಂಡು ಹೋಗುತ್ತಿದ್ದರು. ಈಗ ಅದು ಇಲ್ಲದಾಗಿದೆ ಎಂದು ಕಾವೇರಿ ಆಟಿಕೆ ಅಂಗಡಿಯ ಚಿಲ್ಲರೆ ಕೆಲಸಗಾರ ಅಹಮದ್ ಹೇಳುತ್ತಾರೆ. ಹಲವಾರು ಅಂಗಡಿಗಳು ಸಂಬಳವನ್ನು ಕಡಿತಗೊಳಿಸಿವೆ. ಮತ್ತೆ ಕೆಲವು ಉದ್ಯೋಗಿಗಳನ್ನು ತೆಗೆದುಹಾಕಿವೆ ಎಂದು ಅಹ್ಮದ್ ಅವರ ಸಹೋದ್ಯೋಗಿ ಬಾಬು ಹೇಳಿದ್ದಾರೆ.
ನಾವು ಈಗ ದೈನಂದಿನ ವೇತನದಲ್ಲಿ ಕೆಲಸ ಮಾಡುತ್ತಿದ್ದೇವೆ. ನಮಗೆ ಮರುದಿನ ಕೆಲಸವಿದೆಯೇ ಎಂಬ ಖಾತ್ರಿಯಿಲ್ಲ ಎಂದು ಅವರು ಹೇಳುತ್ತಾರೆ. ದಶಪಥದ 117 ಕಿಮೀ ಎಕ್ಸ್‌ಪ್ರೆಸ್‌ವೇ ಇನ್ನೂ ಉದ್ಘಾಟನೆಯಾಗಬೇಕಿದೆ. ಆದರೆ ಬಹುತೇಕ ಸಂಚಾರಕ್ಕೆ ಮುಕ್ತವಾಗಿದೆ. ಇದು 6 ಬೈಪಾಸ್‌ಗಳನ್ನು ಹೊಂದಿದೆ. ಅದರಲ್ಲಿ ಬಿಡದಿ, ರಾಮನಗರ, ಚನ್ನಪಟ್ಟಣ, ಮದ್ದೂರು, ಮಂಡ್ಯ ಮತ್ತು ಶ್ರೀರಂಗಪಟ್ಟಣ ಇವೆಲ್ಲವೂ ಈಗ ಸಂಚಾರಕ್ಕೆ ಮುಕ್ತವಾಗಿದೆ. ಯೋಜನೆಯ ಒಟ್ಟು ವೆಚ್ಚ 9,551 ಕೋಟಿ ರೂಪಾಯಿಗಳಾಗಿದೆ. ಇನ್ನೂ ವಾಹನ ಸವಾರರು ಬೆಂಗಳೂರಿನಿಂದ ಮೈಸೂರಿಗೆ ಪ್ರಯಾಣಿಸಲು ಮೂರರಿಂದ ನಾಲ್ಕು ಗಂಟೆಗಳು ತೆಗೆದುಕೊಳ್ಳುತ್ತದೆ. ಎಕ್ಸ್‌ಪ್ರೆಸ್‌ವೇಯಲ್ಲಿ ಹೋದರೆ ಇದು ಕೇವಲ ಎರಡು ಗಂಟೆಗಳನ್ನು ತೆಗೆದುಕೊಳ್ಳಬಹುದು. ಪ್ರಯಾಣಿಕರು ಇದರಿಂದ ಪ್ರಯೋಜನ ಪಡೆಯುತ್ತಾರೆ ಎಂದು ಮೈಸೂರು ರಸ್ತೆಯನ್ನು ಆಗಾಗ್ಗೆ ಬಳಸುವ ಚಾಲಕರೊಬ್ಬರು ಹೇಳುತ್ತಾರೆ.