ಪಂಜಾಬ್​ನ ರಂಜಿತ್ ಸಾಗರ್ ಡ್ಯಾಂ ಬಳಿ ಭಾರತೀಯ ಸೇನೆಯ ಹೆಲಿಕಾಪ್ಟರ್ ಪತನ

Aug 3, 2021

ಪತಾನ್​​ಕೋಟ್: ಪಂಜಾಬ್​ ರಾಜ್ಯದ ಪತಾನ್​ಕೋಟ್ ಬಳಿ ಇರುವ ರಂಜಿತ್ ಸಾಗರ್ ಡ್ಯಾಂನಲ್ಲಿ (Ranjit Sagar Dam) ಭಾರತೀಯ ಸೇನೆಯ (Indian Army) ಹೆಲಿಕಾಪ್ಟರ್ ಪತನವಾಗಿದೆ. ರಂಜಿತ್ ಸಾಗರ್ ಡ್ಯಾಂನ ನೀರಿನೊಳಗೆ ಇಂದು ಬೆಳಗ್ಗೆ ಹೆಲಿಕಾಪ್ಟರ್ ಬಿದ್ದಿದ್ದು, ಈ ಬಗ್ಗೆ ಇಲ್ಲಿನ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪಂಜಾಬ್​ನ ಪತಾನ್​ಕೋಟ್​ನಿಂದ (Pathankot) 30 ಕಿ.ಮೀ. ದೂರದಲ್ಲಿ ಈ ಡ್ಯಾಂ ಇದೆ. ಸೇನಾ ಅಧಿಕಾರಿಗಳು ಸ್ಥಳಕ್ಕೆ ದೌಡಾಯಿಸಿದ್ದು, ಪ್ರಾಣಾಪಾಯದ ಬಗ್ಗೆ ಇನ್ನೂ ಖಚಿತ ಮಾಹಿತಿ ಲಭ್ಯವಾಗಿಲ್ಲ. ರಕ್ಷಣಾ ಕಾರ್ಯಾಚರಣೆ ಮುಂದುವರೆದಿದೆ.

ಜಮ್ಮು ಕಾಶ್ಮೀರ ಮತ್ತು ಪಂಜಾಬ್ ರಾಜ್ಯಗಳ ಗಡಿಯಲ್ಲಿರುವ ರಂಜಿತ್ ಸಾಗರ್ ಡ್ಯಾಂ ಜಮ್ಮು ಕಾಶ್ಮೀರದ ಕಥುವಾ ಹಾಗೂ ಪಂಜಾಬ್​ನ ಪತಾನ್​ಕೋಟ್​ ಬಳಿ ಇದೆ. ಇಲ್ಲಿರುವ ಕೆರೆಯೊಳಗೆ ಹೆಲಿಕಾಪ್ಟರ್ ಪತನವಾಗಿದೆ. ಇಂದು ಬೆಳಗ್ಗೆ 10.43ಕ್ಕೆ ಹೆಲಿಕಾಪ್ಟರ್ ಪತನವಾಗಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ. ಆ ಹೆಲಿಕಾಪ್ಟರ್ ಒಳಗೆ ಎಷ್ಟು ಜನರಿದ್ದರು, ಅವರ ಪರಿಸ್ಥಿತಿ ಹೇಗಿದೆ ಎಂಬ ಬಗ್ಗೆ ಇನ್ನೂ ಮಾಹಿತಿ ಲಭ್ಯವಾಗಿಲ್ಲ.

Source: Tv9 kannada