ನೌಕಾಪಡೆಯಲ್ಲಿ ಕೆಲಸ ಮಾಡಬೇಕೆ? ಇಲ್ಲಿವೆ ನೋಡಿ ಖಾಲಿ ಹುದ್ದೆಗಳು
ಭಾರತೀಯ ನೌಕಾಸೇನೆಯಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳಿಗೆ ಅರ್ಜಿಗಳನ್ನು ಆಹ್ವಾನಿಸಲಾಗಿದೆ.ಕಾರ್ಯನಿರ್ವಾಹಕ ಶಾಖೆ (ಕ್ರೀಡಾ ಮತ್ತು ಕಾನೂನು) ಯಲ್ಲಿ ಕಿರು ಸೇವಾ ಆಯೋಗ (ಎಸ್ಎಸ್ಸಿ) ಹಾಗೂ ಕೇರಳದ ಎಜಿಮಾಲಾದ ಇಂಡಿಯನ್ ನೆವಲ್ ಅಕಾಡೆಮಿಯಲ್ಲಿ 2021ರ ಜೂನ್ನಿಂದ ಶುರುವಾಗಲಿರುವ ತಾಂತ್ರಿಕ ವಿಭಾಗಕ್ಕೆ ಅರ್ಜಿಗಳನ್ನು ಆಹ್ವಾನಿಸಲಾಗಿದೆ.
joinindiannavy.gov.in.ಅಧಿಕೃತ ವೆಬ್ಸೈಟ್ನಲ್ಲಿ ಭಾರತೀಯ ನೌಕಾಪಡೆಯ ನೇಮಕಾತಿ-2021ರ ಆನ್ಲೈನ್ ಅರ್ಜಿ ಪ್ರಕ್ರಿಯೆಯನ್ನು ಆರಂಭಿಸಲಾಗಿದೆ,ಇದಲ್ಲದೆ, ಭಾರತೀಯ ನೌಕಾಪಡೆಯ ಎಸ್ಎಸ್ಸಿ ಅಧಿಕಾರಿ ನೇಮಕಾತಿ 2021 ಗೆ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಫೆಬ್ರವರಿ 18 ಆಗಿದೆ. ಇದರ ನಡುವೆಯೇ, ನೇವಲ್ ಕನ್ಸ್ಟ್ರಕ್ಟರ್ ನೇಮಕಾತಿಗಾಗಿ ಆನ್ಲೈನ್ ಅರ್ಜಿ ಪ್ರಕ್ರಿಯೆಯು ಫೆಬ್ರವರಿ 10 ರಿಂದ ಪ್ರಾರಂಭವಾಗಲಿದ್ದು, ಫೆಬ್ರವರಿ 18 ರವರೆಗೆ ಮುಂದುವರಿಯುತ್ತದೆ.
ಒಟ್ಟು 17 ಹುದ್ದೆಗಳು ಖಾಲಿ ಇದ್ದು ಭರ್ತಿ ಮಾಡಿಕೊಳ್ಳಲಾಗುತ್ತಿದೆ. ಈ ಪೈಕಿ ಕ್ರೀಡಾ ವಿಭಾಗದಲ್ಲಿ ಒಂದು, ಕಾನೂನು ವಿಭಾಗದಲ್ಲಿ 2 ಮತ್ತು ನೇವಲ್ ಕನ್ಸಟ್ರಕ್ಟರ್ 14 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ.
ಹುದ್ದೆಗಳಿಗ ಅರ್ಜಿ ಸಲ್ಲಿಸಲು ಇಚ್ಛಿಸುವ ಅಭ್ಯರ್ಥಿಗಳು ಆನ್ಲೈನ್ ಅರ್ಜಿ ಸಲ್ಲಿಸಬೇಕಾಗುತ್ತದೆ. ಅಭ್ಯರ್ಥಿಗಳು www.joinindiannavy.gov.in. ವೆಬ್ಸೈಟ್ಗೆ ನೋಂದಣಿ ಮಾಡಿಕೊಂಡು, ಅರ್ಜಿಯನ್ನು ಭರ್ತಿ ಮಾಡಬೇಕು. ಆನ್ಲೈನ್ ಅರ್ಜಿ ಸಲ್ಲಿಸುವ ಮುನ್ನ ಅಬ್ಯರ್ಥಿಗಳ ಕೆಲವು ಸಂಗತಿಗಳನ್ನು ಗಮನದಲ್ಲಿಟ್ಟುಕೊಳ್ಳಬೇಕಾಗುತ್ತದೆ.
ಆನ್ಲೈನ್ನಲ್ಲಿ ಅರ್ಜಿ ಸಲ್ಲಿಸುವ ಮುನ್ನ ವೆಬ್ಸೈಟ್ನಲ್ಲಿ ನೀಡಿರುವ ಎಲ್ಲಾ ಸೂಚನೆಗಳನ್ನು ಕೇರ್ಫುಲ್ ಆಗಿ ಓದಿಕೊಳ್ಳಿ. ನಿಮ್ಮ ಅಪ್ಲಿಕೇಶನ್ ಅನ್ನು ನಂತರ ಪರಿಶೀಲನೆಗೆ ಒಳಪಡಿಸಲಾಗುತ್ತದೆ. ಯಾವುದೇ ಸಮಯದಲ್ಲಿ ಅನರ್ಹ / ಅಮಾನ್ಯವೆಂದು ಕಂಡುಬಂದಲ್ಲಿ ಆ ಅರ್ಜಿಯನ್ನು ತಿರಸ್ಕರಿಸಬಹುದು. ಆನ್ಲೈನ್ ಅರ್ಜಿ ಸಲ್ಲಿಕೆ ಮುಕ್ತಾಯದ ನಂತರ, ಅಪ್ಲೋಡ್ ಮಾಡಿದ ದಾಖಲೆಗಳಲ್ಲಿ ತಿದ್ದುಪಡಿಗಾಗಿ ಯಾವುದೇ ವಿನಂತಿ ಮಾಡಿಕೊಳ್ಳಲು ಅವಕಾಶ ಇರುವುದಿಲ್ಲ.
ಶೈಕ್ಷಣಿಕ ಅರ್ಹತೆಗಳೇನು?
ವೃತ್ತಿಪರ ಅರ್ಹತೆ:- ಅಭ್ಯರ್ಥಿಯು ಅಥ್ಲೆಟಿಕ್ಸ್ / ಟೆನಿಸ್ / ಫುಟ್ಬಾಲ್ / ಹಾಕಿ / ಬಾಸ್ಕೆಟ್ಬಾಲ್ / ಈಜು ಮತ್ತು ಹಿರಿಯ ಮಟ್ಟದ ರಾಷ್ಟ್ರೀಯ ಚಾಂಪಿಯನ್ಶಿಪ್ -ಇತರೆ ಕ್ರೀಡಾಕೂಟಗಳಲ್ಲಿ ಭಾಗವಹಿಸಿರಬೇಕು.
ಶೈಕ್ಷಣಿಕ ಅರ್ಹತೆ:- ಯಾವುದೇ ಕ್ಷೇತ್ರದಲ್ಲಿ ಸ್ನಾತಕೋತ್ತರ ಪದವಿ ಅಥವಾ ಬಿಇ / ಬಿಟೆಕ್ ಪದವಿ ಹೊಂದಿರಬೇಕು. ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಸ್ಪೋರ್ಟ್ಸ್ / ಎಂಎಸ್ಸಿ ಇನ್ ಸ್ಪೋರ್ಟ್ಸ್ (ಕೋಚಿಂಗ್) ನಿಂದ ಡಿಪ್ಲೊಮಾ ಇನ್ ಸ್ಪೋರ್ಟ್ಸ್ ಪೂರೈಸಿರುವ ಅಭ್ಯರ್ಥಿಗಳನ್ನ ಶಾರ್ಟ್ಲಿಸ್ಟ್ ಮಾಡಲಾಗುವುದು. ೨೨ ರಿಂದ ೨೭ ವರ್ಷದೊಳಗಿನವರಾಗಿರಬೇಕು (ಜುಲೈ ೦೨, ೧೯೯೪ ಹಾಗೂ ಜುಲೈ ೧, ೧೯೯೯ರ ನಡುವೆ)
1961ರ ಆಡ್ವೋಕೇಟ್ ಕಾಯ್ದೆಯಡಿ ಕಾನೂನು ಪದವಿ ಪಡೆದು, ಕನಿಷ್ಟ ಶೇಕಡಾ 55ರಷ್ಟು ಅಂಕ ಗಳಿಸಿರಬೇಕು. ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು, ಬಾರ್ ಕೌನ್ಸಿಲ್ ಆಫ್ ಇಂಡಿಯಾದಿಂದ ಮಾನ್ಯತೆ ಪಡೆದಿರುವ ಕಾಲೇಜು/ಯೂನಿರ್ವಸಿಟಿಯಲ್ಲಿ ಪದವಿ ಪಡೆದಿರಬೇಕು. 22 ವರ್ಷದಿಂದ 27 ವರ್ಷದೊಳಗಿರಬೇಕು
ನೇವಲ್ ಕನ್ಸ್ಟ್ರಕ್ಟರ್ ಹುದ್ದೆಗೆ ಅರ್ಜಿಸಲ್ಲಿಸುವ ಅಭ್ಯರ್ಥಿಗಳು, ಮೆಕ್ಯಾನಿಕಲ್ ಇಂಜಿನಿಯರಿಂಗ್, ಸಿವಿಲ್ ಇಂಜಿನಿಯರಿಂಗ್, ಏರೋನಾಟಿಕಲ್, ಏರೋ ಸ್ಪೇಸ್, ಮೆಟ್ಟಾಲರ್ಜಿ, ನೇವಲ್ ಆರ್ಕಿಟೆಕ್ಚರ್, ಓಸಿಯಾನ್ ಇಂಜಿನಿಯರಿಂಗ್, ಮೆರಿನ್ ಇಂಜಿನಿಯರಿಂಗ್, ಶಿಪ್ ಟೆಕ್ನಾಲಜಿ, ಶಿಪ್ ಡಿಸೈನಿಂಗ್ ವಿಭಾಗಗಳಲ್ಲಿ ಕನಿಷ್ಠ 60% ಅಂಕಗಳೊಂದಿಗೆ ಬಿಇ / ಬಿಟೆಕ್ ಮಾಡಿರಬೇಕು. ಅರ್ಹತೆ ಕುರಿತಂತೆ ಮತ್ತಷ್ಟು ಮಾಹಿತಿಗಾಗಿ ಭಾರತೀಯ ನೌಕಾಪಡೆಯ ಅಧಿಕೃತ ವೆಬ್ಸೈಟ್ಗೆ ಭೇಟಿ ನೀಡಬಹುದು.
ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಫೆಬ್ರವರಿ 18 ಆಗಿರುತ್ತದೆ. ಆದರೆ, ನೇವಲ್ ಕನ್ಸ್ಟ್ರಕ್ಟರ್ ಹುದ್ದೆಗಳ ಅರ್ಜಿ ಪ್ರಕ್ರಿಯೆ ಫೆಬ್ರವರಿ 10ರಿಂದ ಆರಂಭವಾಗುತ್ತದೆ ಎಂಬುದನ್ನು ಅಭ್ಯರ್ತಿಗಳು ಗಮನದಲ್ಲಿಟ್ಟುಕೊಳ್ಳಬೇಕು.
Source: Suvarna News