ನಾಳೆ ಮೈಸೂರು ವಿವಿ ಘಟಿಕೋತ್ಸವ

Sep 6, 2021

ಮೈಸೂರು ವಿಶ್ವವಿದ್ಯಾನಿಲಯದ ವಿಜ್ಞಾನ ಭವನದ ಸಭಾಂಗಣದಲ್ಲಿ ಭಾನುವಾರ ಸುದ್ದಿ ಗೋಷ್ಠಿಯಲ್ಲಿ ಮಾತನಾಡಿದ ಅವರು, ಕೋವಿಡ್ ಮಾರ್ಗ ಸೂಚಿ ಪಾಲನೆಯೊಂದಿಗೆ ಮೈಸೂರು ವಿಶ್ವವಿದ್ಯಾನಿಲಯದ 101ನೇ ಘಟಿಕೋತ್ಸವ ಆಚರಿಸಲಾಗುತ್ತಿದೆ. ಈ ಬಾರಿ ಘಟಿ ಕೋತ್ಸವದಲ್ಲಿ ವಿವಿಧ ವಿಷಯಗಳಲ್ಲಿ ಪದವಿ ಪಡೆಯುತ್ತಿರುವವ ರಲ್ಲಿ ಮಹಿಳೆಯರೇ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಈ ಸಾಲಿನ ಘಟಿಕೋತ್ಸವದಲ್ಲಿ 29,852 ಅಭ್ಯರ್ಥಿಗಳಿಗೆ ವಿವಿಧ ಪದವಿಗಳನ್ನು ಅದರಲ್ಲಿ 20,118 ಮಹಿಳೆಯರು(ಶೇ.67) ಮತ್ತು 9,974 ಪುರುಷ ರಿದ್ದಾರೆ. ಪ್ರದಾನ ಮಾಡುವ 387 ಪದಕಗಳು ಮತ್ತು 178 ನಗದು ಬಹುಮಾನವನ್ನು 216 ಅಭ್ಯರ್ಥಿಗಳು ಪಡೆದುಕೊಳ್ಳ ಲಿದ್ದು, ಇದರಲ್ಲಿ 172 ಮಹಿಳೆಯರು ಮತ್ತು 44 ಪುರುಷರಿ ದ್ದಾರೆ ಎಂದರು. 7,143 ಅಭ್ಯರ್ಥಿಗಳಿಗೆ ಸ್ನಾತಕೋತ್ತರ ಪದವಿ ಯನ್ನು ನೀಡಲಾಗುತ್ತಿದ್ದು, ಅವರಲ್ಲಿ 4,876 ಮಹಿಳೆಯರು (ಶೇ.68.26) ಹಾಗೂ 2,267(ಶೇ.31.73) ಪುರುಷ ಅಭ್ಯರ್ಥಿ ಗಳಿದ್ದಾರೆ. 22,465 ಅಭ್ಯರ್ಥಿಗಳಿಗೆ ಸ್ನಾತಕ ಪದವಿಯನ್ನು ನೀಡಲಾಗುತ್ತಿದೆ. ಇದರಲ್ಲಿ 15,144(ಶೇ.67.41) ಮಹಿಳೆಯರು ಮತ್ತು 7,321(ಶೇ.32.59) ಪುರುಷರಿದ್ದಾರೆ. ಈ ಎಲ್ಲ ವಿಭಾಗ ದಲ್ಲೂ ಮಹಿಳೆಯರೇ ಮುಂದಿದ್ದಾರೆ.

ಆದರೆ, ಪಿಹೆಚ್‍ಡಿಯಲ್ಲಿ ಮಾತ್ರ ಮಹಿಳೆ ಯರು ಹಿಂದುಳಿದ್ದಾರೆ. ವಿವಿಧ ವಿಷಯಗಳಲ್ಲಿ 244 ಅಭ್ಯರ್ಥಿಗಳಿಗೆ ಪಿಹೆಚ್‍ಡಿ ಪದವಿಯನ್ನು ಪ್ರದಾನ ಮಾಡಲಾಗುತ್ತಿದ್ದು, ಅವರಲ್ಲಿ 98 ಮಹಿಳೆ ಯರು(ಶೇ.40.16) ಮತ್ತು 146 ಪುರುಷರು (ಶೇ. 59.83) ಇದ್ದಾರೆ. ಪಿಹೆಚ್‍ಡಿಯಲ್ಲಿ ಮಾತ್ರ ಮಹಿಳೆ ಯರು ಹಿನ್ನೆಡೆ ಸಾಧಿಸಿದ್ದಾರೆ. ಮದುವೆ ಇನ್ನಿತರ ವಿಷಯಗಳಿಗೆ ಈ ಹಂತದಲ್ಲಿ ಹೆಣ್ಣು ಮಕ್ಕಳು ಉನ್ನತ ಶಿಕ್ಷಣದಿಂದ ವಿಮುಕ್ತವಾಗುತ್ತಿರಬಹುದು ಎಂದು ಎಂದು ವಿಶ್ಲೇಷಿಸಿದರು.

ಟಾಪರ್ ವಿದ್ಯಾರ್ಥಿಗಳು: ಎಂಎಸ್ಸಿ(ರಸಾಯನ ಶಾಸ್ತ್ರ) ವಿದ್ಯಾರ್ಥಿನಿ ಚೈತ್ರ ನಾರಾಯಣ್ ಹೆಗಡೆ ಅತಿ ಹೆಚ್ಚು ಚಿನ್ನದ ಪದಕಕ್ಕೆ ಭಾಜನರಾಗಿದ್ದಾರೆ. 4 ನಗದು ಬಹುಮಾನ ಸೇರಿ 20 ಚಿನ್ನದ ಪದಕ ವನ್ನು ಪಡೆದುಕೊಳ್ಳಲಿದ್ದಾರೆ. ಎಂಎ(ಕನ್ನಡ) ವಿದ್ಯಾರ್ಥಿನಿ ಟಿ.ಎಸ್.ಮದಲಾಂಬಿಕೆ 10 ಚಿನ್ನದ ಪದಕ, 4 ನಗದು ಬಹುಮಾನವನ್ನು ಮುಡಿ ಗೇರಿಸಿಕೊಳ್ಳಲಿದ್ದಾರೆ. ಉಳಿದಂತೆ ಎಂ.ಟೆಕ್‍ನ ಎನ್.ಹರ್ಷಿತಾ( 9 ಚಿನ್ನದ ಪದಕ), ಎಂಎಸ್ಸಿ ಸಸ್ಯಶಾಸ್ತ್ರದ ಹಿಮಂಷಿ ಚೌಹಾನ್( 8 ಚಿನ್ನದ ಪದಕ), ಎಂಎಸ್ಸಿ ಗಣಿತ ವಿಭಾಗದ ಎಲ್.ಆರ್. ವಿದ್ಯಾಶ್ರೀ, ಬಿಎ ವಿದ್ಯಾರ್ಥಿನಿ ಸಿಂಧು ನಾಗ ರಾಜ್(7 ಚಿನ್ನದ ಪದಕ), ಎಂಎ (ಕನ್ನಡ) ಮಹಾಲಕ್ಷ್ಮೀ, ಮಿನಾಕ್ಷಿ, ಬಿಪಿಎ ಮ್ಯೂಜಿಕ್ ವಿಷಯದ ಕೆ.ಅಶ್ವಿನಿ, ಎಂಎಸ್ಸಿ ಬಯೋ ಟೆಕ್ನಾ ಲಜಿ ವಿಷಯದ ಸುರುಚಿ ಗರ್ಗ್(6 ಚಿನ್ನದ ಪದಕ) ಅವರು ಅಧಿಕ ಚಿನ್ನದ ಪದಕವನ್ನು ಗಿಟ್ಟಿಸಿ ಕೊಳ್ಳಲಿದ್ದಾರೆ ಎಂದು ಮಾಹಿತಿ ನೀಡಿದರು.

ಕೀನ್ಯಾ ವಿದ್ಯಾರ್ಥಿನಿಗೆ ಚಿನ್ನ: ವಿದೇಶಿ ವಿದ್ಯಾರ್ಥಿಯೊಬ್ಬರು ಚಿನ್ನದ ಪದಕಕ್ಕೆ ಭಾಜನ ವಾಗುವ ಮೂಲಕ ಗಮನ ಸೆಳೆದಿದ್ದಾರೆ. ಕಿನ್ಯಾ ದೇಶದ ಪ್ರಜೆ ಡೇಚೆ ಎಂ.ಮರ್ಸಿ ಎಲ್‍ಎಲ್ ಎಂನಲ್ಲಿ 2 ಚಿನ್ನದ ಪದಕ, 3 ನಗದು ಬಹು ಮಾನ ಪಡೆಯಲಿದ್ದಾರೆ ಎಂದು ಮೈಸೂರು ವಿವಿ ಕುಲಪತಿ ಪ್ರೊ.ಹೇಮಂತ್‍ಕುಮಾರ್ ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಕುಲಸಚಿವರಾದ ಪೆÇ್ರ.ಆರ್.ಶಿವಪ್ಪ(ಆಡಳಿತ), ಪೆÇ್ರ.ಜ್ಞಾನಪ್ರಕಾಶ್ (ಪರೀಕ್ಷಾಂಗ) ಇದ್ದರು.

Source:mysurumithra