ನಾಳೆ ನಾಲ್ವಡಿ ಕೃಷ್ಣರಾಜ ಒಡೆಯರ್ ಪ್ರಶಸ್ತಿ ಪ್ರದಾನ

Oct 12, 2021

ಮೈಸೂರು, ಅ.11(ಆರ್‍ಕೆಬಿ)- ವಿವಿಧ ಕ್ಷೇತ್ರಗಳ 12 ಮಂದಿ ಸಾಧಕರನ್ನು ನಾಲ್ವಡಿ ಕೃಷ್ಣರಾಜ ಒಡೆಯರ್ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.
ಡಾ.ಜಿ.ಎಸ್.ಜಯದೇವ (ಶಿಕ್ಷಣ-ಚಾಮರಾಜ ನಗರ), ಈಚನೂರು ಕುಮಾರ್ (ಮೈಸೂರು ಅರಸರ ಇತಿಹಾಸ), ಡಾ.ಶಂಕರೇಗೌಡ (ವೈದ್ಯ ಕೀಯ- ಮಂಡ್ಯ), ಡಾ.ಸುಕನ್ಯಾ ಪ್ರಭಾಕರ್ (ಸಂಗೀತ), ಅಂಶಿ ಪ್ರಸನ್ನಕುಮಾರ್ (ಪತ್ರಿಕೋ ದ್ಯಮ), ಹನಸೋಗೆ ಸೋಮಶೇಖರ್ (ನಾಲ್ವಡಿ ಸಾಹಿತ್ಯ), ಜೀನಹಳ್ಳಿ ಸಿದ್ದಲಿಂಗಪ್ಪ (ಜಾನಪದ), ಕಿರಗಸೂರು ರಾಜಪ್ಪ (ರಂಗಭೂಮಿ), ಗುರುರಾಜ್ (ಮಹದೇಶ್ವರ ಮಂಟೇಸ್ವಾಮಿ ಪರಂಪರೆ ಗಾಯಕ), ಅರುಣ್ ಯೋಗಿರಾಜ್ (ಶಿಲ್ಪಕಲೆ), ರಾಜೇಂದ್ರ (ಅನ್ನದಾಸೋಹ), ಅರಿವು (ಸಂಸ್ಥೆ) ಪ್ರಶಸ್ತಿಗೆ ಆಯ್ಕೆ ಯಾದವರು. ರಾಜರ್ಷಿ ನಾಲ್ವಡಿ ಕೃಷ್ಣರಾಜ ಒಡೆಯರ್ ಜನ್ಮದಿನದಂದು ಈ 12 ಸಾಧಕರನ್ನು ಆಯ್ಕೆ ಮಾಡಿ `ನಾಲ್ವಡಿ ಪ್ರಶಸ್ತಿ’ ನೀಡುವುದಾಗಿ ಜಿಲ್ಲಾ ಉಸ್ತುವಾರಿ ಸಚಿವರು ಜೂನ್ 4ರಂದು ನಾಲ್ವಡಿ ಕೃಷ್ಣರಾಜ ಒಡೆಯರ್ ಜಯಂತಿ ದಿನದಂದು ಘೋಷಿಸಿದ್ದರು. ಅದರಂತೆ ಪ್ರಶಸ್ತಿಗೆ ಸಾಧಕರನ್ನು ಸಮಿತಿ ಆಯ್ಕೆ ಮಾಡಿದೆ.

ಪ್ರಶಸ್ತಿ ಪ್ರದಾನ ಸಮಾರಂಭವನ್ನು ಅ.13ರಂದು ಮಧ್ಯಾಹ್ನ 3 ಗಂಟೆಗೆ ಅರಮನೆ ವೇದಿಕೆಯಲ್ಲಿ ಏರ್ಪ ಡಿಸಿದೆ. ಆದಿಚುಂಚನಗಿರಿ ಮಠದ ಪೀಠಾಧ್ಯಕ್ಷ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಸಾನಿಧ್ಯ ವಹಿಸು ವರು. ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಕಾರ್ಯಕ್ರಮ ಉದ್ಘಾಟಿಸುವರು. ಕೃಷ್ಣರಾಜ ಕ್ಷೇತ್ರದ ಶಾಸಕ ಎಸ್.ಎ.ರಾಮದಾಸ್ ಅಧ್ಯಕ್ಷತೆ ವಹಿಸುವರು. ಚಿಂತಕ ಪ್ರೊ.ಕೃಷ್ಣೇಗೌಡ ಪ್ರಶಸ್ತಿ ಪುರಸ್ಕøತರನ್ನು ಅಭಿ ನಂದಿಸಲಿದ್ದಾರೆ ಎಂದು ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಹಾಯಕ ನಿರ್ದೇಶಕ ಎಚ್.ಚನ್ನಪ್ಪ ತಿಳಿಸಿದ್ದಾರೆ.

Source:mysurmithra