ನನಗೆ ಸಚಿವ ಸ್ಥಾನ ಕೊಡಿ ಅಂತಾ ಕೇಳಲ್ಲ.. ಹಳೇ ಮೈಸೂರು ಭಾಗಕ್ಕೆ ಅಂತಾದರೂ ಒಂದು ಕೊಡಿ -S.A.ರಾಮದಾಸ್

Jan 21, 2021

ರಾಮದಾಸ್‌ಗೆ ಸಚಿವ ಸ್ಥಾನ ಕೊಡಿ ಎಂದು ನಾನು ಕೇಳಲ್ಲ. ಹಳೆಯ ಮೈಸೂರು ಭಾಗದ ಶಾಸಕರಿಗೆ ಸಚಿವ ಸ್ಥಾನ ಕೊಡಿ ಎಂದು ಬಿಜೆಪಿ ಶಾಸಕ ಎಸ್.ಎ.ರಾಮದಾಸ್ ಹೇಳಿದರು.

ಮೈಸೂರು: ನಾನು ಟ್ವಿಟ್ಟರ್‌ನಲ್ಲಿ ಅಸಮಾಧಾನವನ್ನು ವ್ಯಕ್ತಪಡಿಸಿದ್ದು ನಿಜ. ನಾನು ಚಿಕ್ಕ ಹುಡುಗನಾಗಿದ್ದಾಗ ರಾಜ್ಯದಲ್ಲಿ 2 ಬಾರಿ ಯುವ ಮೋರ್ಛ ಅಧ್ಯಕ್ಷನಾಗಿದ್ದೆ. ಬಿಜೆಪಿಯಲ್ಲಿ ಯಾರೂ ಇಲ್ಲದಿದ್ದಾಗ ಭಿಕ್ಷೆ ಬೇಡಿ ಪಕ್ಷ ಕಟ್ಟಿದ್ದೀವಿ. ಬೇರೆ ಪಕ್ಷಕ್ಕಿಂತ ಬಿಜೆಪಿ ವಿಭಿನ್ನವಾಗಿರಬೇಕೆಂದು ಬಯಸ್ತೇವೆ. ಪ್ರಾದೇಶಿಕ ಅಸಮತೋಲನ ಇರೋದು ನಿಜ ಎಂದು ಬಿಜೆಪಿ ಶಾಸಕ ಎಸ್.ಎ.ರಾಮದಾಸ್ ಹೇಳಿದ್ದಾರೆ.

ನನಗಾಗಲಿ, ಇನ್ನೊಬ್ಬರಿಗಾಗಲಿ ಇದು ಕಣ್ಣಿಗೆ ಕಾಣುವ ಸತ್ಯ. ಹಳೇ ಮೈಸೂರು ಭಾಗಕ್ಕೆ ಒಂದು ಸ್ಥಾನ ಕೊಡಬೇಕಿತ್ತು. ನನ್ನ ಬಿಟ್ಟು ಬೇರೆ ಶಾಸಕರು ಕೂಡ ಗೆದ್ದಿದ್ದಾರಲ್ಲ, ಅವರಿಗಾದ್ರು ಕೊಡಿ. ರಾಮದಾಸ್‌ಗೆ ಸಚಿವ ಸ್ಥಾನ ಕೊಡಿ ಎಂದು ನಾನು ಕೇಳಲ್ಲ. ಹಳೆಯ ಮೈಸೂರು ಭಾಗದ ಶಾಸಕರಿಗೆ ಸಚಿವ ಸ್ಥಾನ ಕೊಡಿ ಎಂದು ಬಿಜೆಪಿ ಶಾಸಕ ಎಸ್.ಎ.ರಾಮದಾಸ್ ಹೇಳಿದರು.

ಹಳೇ ಮೈಸೂರು ಅಂತಾ ಬಂದಾಗ ಇಲ್ಲಿದ್ದವನಿಗೆ ಈ‌ ಮಣ್ಣಿನ ವಾಸನೆ ಗೊತ್ತಿರುತ್ತೆ. ಪ್ರತಿ ಕ್ಷೇತ್ರಕ್ಕೆ 25 ಕೋಟಿ ರೂ. ಕೊಡುವುದಾಗಿ ಹೇಳಿದ್ದಾರೆ. ಅದನ್ನು ಬಿಟ್ಟು ನಾವು ಇತರೆ ಇಲಾಖೆಯಿಂದ ಕ್ಷೇತ್ರದ ಕೆಲಸ ಮಾಡಿಸುತ್ತಿದ್ದೇನೆ. ಅಧಿಕಾರಕ್ಕೆ ಇದ್ದಾಗಲು, ಇಲ್ಲದಾಗಲು ನಾನು ಅತಿ ಹೆಚ್ಚು ಅನುದಾನ ತಂದಿದ್ದೇನೆ ಎಂದು ಶಾಸಕ ರಾಮದಾಸ್ ಹೇಳಿದರು.

Source: TV9Kannada