ನಟ ರವಿತೇಜಗೆ ಸಾಥ್ ಕೊಟ್ಟ ಶಿವರಾಜ್​ಕುಮಾರ್; ತೆಲುಗು ಚಿತ್ರಕ್ಕೆ ಶಿವಣ್ಣನ ಧ್ವನಿ

May 17, 2023

ಇತ್ತೀಚೆಗೆ ಪ್ಯಾನ್ ಇಂಡಿಯಾ ಸಿನಿಮಾಗಳ ಸಂಖ್ಯೆ ಹೆಚ್ಚುತ್ತಿದೆ. ಅನೇಕ ಸ್ಟಾರ್ ಹೀರೋಗಳು ಪ್ಯಾನ್​​ ಇಂಡಿಯಾ ಸಿನಿಮಾ ಮಾಡಿ ಗಮನ ಸೆಳೆಯುತ್ತಿದ್ದಾರೆ. ರವಿತೇಜ ಕೂಡ ಇದೇ ಪ್ರಯೋಗಕ್ಕೆ ಇಳಿದಿದ್ದಾರೆ.

ಶಿವರಾಜ್​ಕುಮಾರ್ (Shivarajkumar) ಅವರು ಸದ್ಯ ರಿಲ್ಯಾಕ್ಸ್ ಮೂಡ್​ನಲ್ಲಿದ್ದಾರೆ. ಇಷ್ಟು ದಿನ ಅವರು ವಿವಿಧ ಕಡೆಗಳಲ್ಲಿ ತೆರಳಿ ಚುನಾವಣೆ ಪ್ರಚಾರ ಮಾಡಿದ್ದರು. ಕಾಂಗ್ರೆಸ್ ನಾಯಕರಿಗೆ ಬೆಂಬಲ ಕೊಟ್ಟಿದ್ದರು. ಈಗ ಚುನಾವಣೆ ಮುಗಿದಿದೆ. ಹೀಗಾಗಿ, ಅವರು ಮರಳಿ ಸಿನಿಮಾ ಕೆಲಸದಲ್ಲಿ ತೊಡಗಿಕೊಳ್ಳಲಿದ್ದಾರೆ. ಈಗ ಶಿವರಾಜ್​ಕುಮಾರ್ ಅವರು ತೆಲುಗು ನಟ ರವಿತೇಜಗೆ ಸಾಥ್ ಕೊಟ್ಟಿದ್ದಾರೆ. ಈ ವಿಚಾರವನ್ನು ಚಿತ್ರತಂಡದವರೇ ಅಧಿಕೃತ ಮಾಡಿದ್ದಾರೆ.  ಹೌದು, ರವಿತೇಜ (Raviteja) ನಟಿಸುತ್ತಿರುವ ಮೊದಲ ಪ್ಯಾನ್ ಇಂಡಿಯಾ ಸಿನಿಮಾ ‘ಟೈಗರ್ ನಾಗೇಶ್ವರ್ ರಾವ್’ ಫಸ್ಟ್ ಲುಕ್ ಶೀಘ್ರವೇ ರಿಲೀಸ್ ಆಗಲಿದ್ದು, ಕನ್ನಡ ವರ್ಷನ್​ಗೆ ಶಿವಣ್ಣನ ಧ್ವನಿ ಇರಲಿದೆ.

ಇತ್ತೀಚೆಗೆ ಪ್ಯಾನ್ ಇಂಡಿಯಾ ಸಿನಿಮಾಗಳ ಸಂಖ್ಯೆ ಹೆಚ್ಚುತ್ತಿದೆ. ಅನೇಕ ಸ್ಟಾರ್ ಹೀರೋಗಳು ಪ್ಯಾನ್​​ ಇಂಡಿಯಾ ಸಿನಿಮಾ ಮಾಡಿ ಗಮನ ಸೆಳೆಯುತ್ತಿದ್ದಾರೆ. ರವಿತೇಜ ಕೂಡ ಇದೇ ಪ್ರಯೋಗಕ್ಕೆ ಇಳಿದಿದ್ದಾರೆ. ‘ಧಮಾಕ’ ಚಿತ್ರದ ಮೂಲಕ ಗೆದ್ದು ಬೀಗಿರುವ ಅವರು, ಈಗ ‘ಟೈಗರ್ ನಾಗೇಶ್ವರ್ ರಾವ್’ ಸಿನಿಮಾ ಕೆಲಸಗಳಲ್ಲಿ ಬ್ಯುಸಿ ಇದ್ದಾರೆ. ಈ ಚಿತ್ರದ ಫಸ್ಟ್​ಲುಕ್ ಮೇ 24ರಂದು ಐದು ಭಾಷೆಗಳಲ್ಲಿ ಅನಾವರಣಗೊಳ್ಳಲಿದೆ. ಕನ್ನಡ ವರ್ಷನ್​​ಗೆ  ಶಿವರಾಜ್​ಕುಮಾರ್ ಧ್ವನಿ ನೀಡಿದ್ದಾರೆ.

ಶಿವರಾಜ್​ಕುಮಾರ್ ಅವರು ಈ ಮೊದಲು ಅನೇಕ ಟ್ರೇಲರ್ ಹಾಗೂ ಟೀಸರ್​ಗೆ ಧ್ವನಿ ನೀಡಿದ್ದರು. ಈಗ ಅವರು ‘ಟೈಗರ್ ನಾಗೇಶ್ವರ್ ರಾವ್’ ಫಸ್ಟ್​ಲುಕ್​ಗೆ ಧ್ವನಿ ಆಗಿದ್ದಾರೆ ಅನ್ನೋದು ವಿಶೇಷ. 70ರ ದಶಕದಲ್ಲಿ ಹೈದರಾಬದ್​ನ ಹಳ್ಳಿಯೊಂದರಲ್ಲಿ ಕಳ್ಳ ಇದ್ದ. ಈತನ ಕುಖ್ಯಾತಿ ರಾಜ್ಯಾದ್ಯಂತ ಹಬ್ಬಿತ್ತು. ಈ ಕಥೆಯನ್ನು ಇಟ್ಟುಕೊಂಡು ಸಿನಿಮಾ ಮಾಡಲಾಗಿದೆ.

‘ಟೈಗರ್ ನಾಗೇಶ್ವರ್ ರಾವ್’ ಚಿತ್ರವನ್ನು ಅಭಿಷೇಕ್ ಅಗರ್​ವಾಲ್ ನಿರ್ಮಾಣ ಮಾಡುತ್ತಿದ್ದಾರೆ. ಈ ಮೊದಲು ‘ದಿ ಕಾಶ್ಮೀರ್​ ಫೈಲ್ಸ್’ ಹಾಗೂ ‘ಕಾರ್ತಿಕೇಯ 2’ ಚಿತ್ರಗಳನ್ನು ನೀಡಿರುವ ಖ್ಯಾತಿ ಅವರಿಗೆ ಇದೆ. ಈಗ ಅವರು ‘ಅಭಿಷೇಕ್ ಅಗರ್​​ವಾಲ್ ಆರ್ಟ್ಸ್’ ಅಡಿ ಅದ್ದೂರಿಯಾಗಿ ನಿರ್ಮಿಸಿದ್ದಾರೆ.

ನೂಪುರ್ ಸನೋನ್ ಮತ್ತು ಗಾಯತ್ರಿ ಭಾರದ್ವಾಜ್ ‘ಟೈಗರ್ ನಾಗೇಶ್ವರ್ ರಾವ್’ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಆರ್. ಮಧಿ ಛಾಯಾಗ್ರಹಣ, ಶ್ರೀಕಾಂತ್ ವೀಸಾ ಸಂಭಾಷಣೆ, ವಿ. ಪ್ರಕಾಶ್ ಕುಮಾರ್ ಸಂಗೀತ ಸಿನಿಮಾಗೆ ಇದೆ. ದಸರಾ ಪ್ರಯುಕ್ತ ಅಕ್ಟೋಬರ್ 22ರಂದು ವಿಶ್ವಾದ್ಯಂತ ಈ ಸಿನಿಮಾ ರಿಲೀಸ್ ಆಗುತ್ತಿದೆ.

 

 

Source: Tv9 Kannada