ಧನಂಜಯ್ ನಟನೆಯ ‘ರತ್ನನ್ ಪ್ರಪಂಚ’ ಬಿಡುಗಡೆಗೆ ಮುಹೂರ್ತ ನಿಗದಿ; ಅಕ್ಟೋಬರ್ 22ಕ್ಕೆ ಈ ಒಟಿಟಿಯಲ್ಲಿ ಚಿತ್ರ ರಿಲೀಸ್

Oct 5, 2021

ಸ್ಯಾಂಡಲ್​ವುಡ್​ನ ಮುಂಚೂಣಿಯ ನಟರಲ್ಲಿ ಒಬ್ಬರಾಗಿ ಗುರುತಿಸಕೊಳ್ಳುತ್ತಿರುವ ಡಾಲಿ ಧನಂಜಯ ಅವರ ಬಹುನಿರೀಕ್ಷಿತ ‘ರತ್ನನ್ ಪ್ರಪಂಚ’ (Rathnan Prapancha) ಚಿತ್ರದ ಬಿಡುಗಡೆಯ ದಿನಾಂಕ ಘೋಷಣೆಯಾಗಿದೆ. ಅಭಿಮಾನಿಗಳಿಗೆ ಇದರಿಂದ ತುಸು ಅಚ್ಚರಿಯಾಗಿದೆ. ಕಾರಣ, ‘ರತ್ನನ್ ಪ್ರಪಂಚ’ ಅಕ್ಟೋಬರ್ 22ರಂದು ಆಮೆಜಾನ್ ಪ್ರೈಮ್ ಒಟಿಟಿಯಲ್ಲಿ ಬಿಡುಗಡೆಯಾಗಲಿದೆ. ಈ ಕುರಿತು ಆಮೆಜಾನ್ ಪ್ರೈಮ್ ಹಾಗೂ ಧನಂಜಯ್ ಟ್ವೀಟ್​ಗಳನ್ನು ಹಂಚಿಕೊಂಡಿದ್ದಾರೆ. ಆಮೆಜಾನ್ ಪ್ರೈಮ್ ಈ ಕುರಿತು ಟ್ವೀಟ್ ಮಾಡುತ್ತಾ, ‘ಒಂಬತ್ತು ಪಾತ್ರಗಳು, ಒಂದು ಕುತೂಹಲಕರ ಕತೆ’ ಎಂದು ಕ್ಯಾಪ್ಶನ್ ನೀಡಿದೆ.

ಆಮೆಜಾನ್ ಪ್ರೈಮ್ ಹಂಚಿಕೊಂಡಿರುವ ಟ್ವೀಟ್ ಇಲ್ಲಿದೆ:

 

‘ರತ್ನನ್ ಪ್ರಪಂಚ’ದ ನಾಯಕ ನಟ ಧನಂಜಯ್ ಟ್ವೀಟ್ ಹಂಚಿಕೊಳ್ಳುತ್ತಾ, ‘ನಗು+ ತಿರುವು+ ಪ್ರೀತಿ= ರತ್ನನ್ ಪ್ರಪಂಚ’ ಎಂದು ಬರೆದುಕೊಂಡಿದ್ದಾರೆ. ಈಗಾಗಲೇ ರತ್ನನ್ ಪ್ರಪಂಚ ತನ್ನ ಟ್ರೈಲರ್ ಮುಖಾಂತರ ಅಪಾರ ನಿರೀಕ್ಷೆ ಹುಟ್ಟುಹಾಕಿದೆ. ‘ದಯವಿಟ್ಟು ಗಮನಿಸಿ’ ಚಿತ್ರದ ಮುಖಾಂತರ ಸ್ಯಾಂಡಲ್​ವುಡ್​ನಲ್ಲಿ ಸಂಚಲನ ಮೂಡಿಸಿದ್ದ ರೋಹಿತ್ ಪದಕಿ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ. ಕನ್ನಡದ ಹಿರಿಯ ನಟಿ ಉಮಾಶ್ರೀ ಈ ಚಿತ್ರದಲ್ಲಿ ಧನಂಜಯ್ ತಾಯಿಯ ಪಾತ್ರವನ್ನು ನಿರ್ವಹಿಸಿದ್ದು, ಟ್ರೈಲರ್​ನಲ್ಲಿ ಅವರ ಪಾತ್ರ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.

Source:tv9kannada