ದ್ವಿತೀಯ ಪಿಯುಸಿ ಪರಿಷ್ಕೃತ ವೇಳಾಪಟ್ಟಿ ಬಿಡುಗಡೆ; ಮೇ 24 ರಿಂದ ಜೂನ್ ​16 ರ ತನಕ ಪರೀಕ್ಷೆ

Mar 12, 2021

ಈ ಹಿಂದಿನ ವೇಳಾಪಟ್ಟಿಗೆ ಹಲವು ಆಕ್ಷೇಪಣೆಗಳು ಬಂದ ಕಾರಣ ಹೊಸ ವೇಳಾಪಟ್ಟಿ ನೀಡುತ್ತಿರುವುದಾಗಿ ಇಲಾಖೆ ತಿಳಿಸಿದೆ. ನೂತನ ವೇಳಾಪಟ್ಟಿಯ ಪ್ರಕಾರ 24-05-2021ರಿಂದ 16-06-2021ರ ತನಕ ಪರೀಕ್ಷೆಗಳು ನಡೆಯಲಿವೆ.

ಬೆಂಗಳೂರು: ಪ್ರಸ್ತುತ 2020-21ನೇ ಸಾಲಿನ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯನ್ನು ಮೇ 24 ರಿಂದ ಜೂನ್​ 10ರ ತನಕ ನಡೆಸಲು ನಿರ್ಧರಿಸಿ ಈ ಹಿಂದೆ ಹೊರಡಿಸಲಾಗಿದ್ದ ವೇಳಾಪಟ್ಟಿಯನ್ನು ಪದವಿ ಪೂರ್ವ ಶಿಕ್ಷಣ ಇಲಾಖೆ ತಿದ್ದುಪಡಿಗೊಳಿಸಿ ಪರಿಷ್ಕೃತ ವೇಳಾಪಟ್ಟಿಯನ್ನು ಬಿಡುಗಡೆ ಮಾಡಿದೆ. ಈ ಹಿಂದಿನ ವೇಳಾಪಟ್ಟಿಗೆ ಹಲವು ಆಕ್ಷೇಪಣೆಗಳು ಬಂದ ಕಾರಣ ಹೊಸ ವೇಳಾಪಟ್ಟಿ ನೀಡುತ್ತಿರುವುದಾಗಿ ಇಲಾಖೆ ತಿಳಿಸಿದೆ. ನೂತನ ವೇಳಾಪಟ್ಟಿಯ ಪ್ರಕಾರ 24-05-2021ರಿಂದ 16-06-2021ರ ತನಕ ಪರೀಕ್ಷೆಗಳು ನಡೆಯಲಿವೆ.

ಮೇ 24, ಸೋಮವಾರ: ಇತಿಹಾಸ
ಮೇ 25, ಮಂಗಳವಾರ: ಕರ್ನಾಟಕ ಸಂಗೀತ, ಹಿಂದೂಸ್ತಾನಿ ಸಂಗೀತ
ಮೇ 26, ಬುಧವಾರ: ಭೂಗೋಳಶಾಸ್ತ್ರ
ಮೇ 27, ಗುರುವಾರ: ಮನಃಶಾಸ್ತ್ರ, ಬೇಸಿಕ್​ ಮ್ಯಾಥ್ಸ್​
ಮೇ 28, ಶುಕ್ರವಾರ: ತರ್ಕಶಾಸ್ತ್ರ
ಮೇ 29, ಶನಿವಾರ: ಕನ್ನಡ
ಮೇ 31, ಸೋಮವಾರ: ಲೆಕ್ಕಶಾಸ್ತ್ರ, ಗಣಿತ, ಶಿಕ್ಷಣ
ಜೂನ್​ 1, ಮಂಗಳವಾರ: ಮಾಹಿತಿ ತಂತ್ರಜ್ಞಾನ, ರೀಟೈಲ್, ಆಟೋಮೊಬೈಲ್​, ಹೆಲ್ತ್​ಕೇರ್​, ಬ್ಯೂಟಿ ಮತ್ತು ವೆಲ್​ನೆಸ್​ (NSQF)
ಜೂನ್​ 2, ಬುಧವಾರ: ರಾಜ್ಯಶಾಸ್ತ್ರ, ಗಣಕ ವಿಜ್ಞಾನ
ಜೂನ್​ 3, ಗುರುವಾರ: ಜೀವಶಾಸ್ತ್ರ, ಎಲೆಕ್ಟ್ರಾನಿಕ್ಸ್
ಜೂನ್ 4, ಶುಕ್ರವಾರ: ಅರ್ಥಶಾಸ್ತ್ರ
ಜೂನ್ 5, ಶನಿವಾರ: ಗೃಹವಿಜ್ಞಾನ
ಜೂನ್​ 7, ಸೋಮವಾರ: ವ್ಯವಹಾರ ಅಧ್ಯಯನ, ಭೌತಶಾಸ್ತ್ರ
ಜೂನ್ 8, ಮಂಗಳವಾರ: ಭೂಗರ್ಭಶಾಸ್ತ್ರ
ಜೂನ್ 9, ಬುಧವಾರ: ತಮಿಳು, ತೆಲುಗು, ಮಲಯಾಳಂ, ಮರಾಠಿ, ಅರೇಬಿಕ್, ಫ್ರೆಂಚ್
ಜೂನ್ 10, ಗುರುವಾರ: ಸಮಾಜಶಾಸ್ತ್ರ, ರಸಾಯನ ಶಾಸ್ತ್ರ
ಜೂನ್ 11, ಶುಕ್ರವಾರ: ಉರ್ದು, ಸಂಸ್ಕೃತ
ಜೂನ್ 12, ಶನಿವಾರ: ಸಂಖ್ಯಾಶಾಸ್ತ್ರ
ಜೂನ್​ 14, ಸೋಮವಾರ: ಐಚ್ಛಿಕ ಕನ್ನಡ
ಜೂನ್ 15, ಮಂಗಳವಾರ: ಹಿಂದಿ
ಜೂನ್​ 16, ಬುಧವಾರ: ಇಂಗ್ಲೀಷ್

ಪರೀಕ್ಷಾ ವೇಳಾಪಟ್ಟಿ ಡೌನ್​ಲೋಡ್​ ಮಾಡಲು ಇಲ್ಲಿ ಕ್ಲಿಕ್​ ಮಾಡಿ

Source:TV9Kannada