ದೇಶದ ಅಥ್ಲೀಟ್‌ ಸ್ಟಾರ್ ಅಥ್ಲೀಟ್‌ ಹಿಮಾದಾಸ್‌ ಈಗ ಅಸ್ಸಾಂನಲ್ಲಿ ಡಿಎಸ್‌ಪಿ!

Feb 12, 2021

ನವದೆಹಲಿ(ಫೆ.12): ಭಾರತದ ತಾರಾ ಅಥ್ಲೀಟ್‌ ಹಿಮಾ ದಾಸ್‌ಗೆ ಅಸ್ಸಾಂ ಸರ್ಕಾರ ಅಲ್ಲಿನ ಪೊಲೀಸ್‌ ಇಲಾಖೆಯಲ್ಲಿ ಉಪ ಪೊಲೀಸ್‌ ವರಿಷ್ಠಾಧಿಕಾರಿ(ಡಿಎಸ್‌ಪಿ) ಹುದ್ದೆ ನೀಡಿದೆ.

21 ವರ್ಷದ ಹಿಮಾ 2018ರ ವಿಶ್ವ ಅಂಡರ್‌ 20 ಚಾಂಪಿಯನ್‌ಶಿಪ್‌ನ 200 ಮೀ. ಓಟದಲ್ಲಿ ಚಿನ್ನ ಜಯಿಸಿ ಇತಿಹಾಸ ಬರೆದಿದ್ದರು. ತಮಗೆ ಈ ಗೌರವ ಸಿಕ್ಕಿದ್ದಕ್ಕೆ ಹಿಮಾ, ಅಸ್ಸಾಂ ಮುಖ್ಯಮಂತ್ರಿ ಸರ್ಬಾನಂದ ಸೊನೊವಾಲ್‌ಗೆ ಧನ್ಯವಾದ ತಿಳಿಸಿದ್ದಾರೆ. ಸರ್ಕಾರದ ಈ ನಿರ್ಧಾರ ನನ್ನಲ್ಲಿ ಮತ್ತಷ್ಟು ಹುರುಪು ತುಂಬುವಂತೆ ಮಾಡಿದೆ. ನಾನು ನನ್ನ ರಾಜ್ಯ ಹಾಗೂ ದೇಶಕ್ಕೆ ಸೇವೆ ಸಲ್ಲಿಸುವುದಕ್ಕೆ ಎದುರು ನೋಡುತ್ತಿದ್ದೇನೆ ಜೈ ಹಿಂದ್ ಎಂದು ಹಿಮಾದಾಸ್‌ ಟ್ವೀಟ್‌ ಮಾಡಿದ್ದಾರೆ.

ಟೋಕಿಯೋ ಒಲಿಂಪಿಕ್ಸ್‌ಗೆ ಅರ್ಹತೆಗಿಟ್ಟಿಸುತ್ತ ಚಿತ್ತ ನೆಟ್ಟಿರುವ ಹಿಮದಾಸ್‌ಗೆ ಡಿಎಸ್‌ಪಿ ಹುದ್ದೆ ನೀಡಿರುವ ಕುರಿತಂತೆ, ಓಟದ ರಾಣಿಗೆ ಅಸ್ಸಾಂ ಸರ್ಕಾರದ ನಿರ್ಧಾರ ಎಲ್ಲರೂ ಮೆಚ್ಚುವಂತಹದ್ದು ಎಂದು ಕೇಂದ್ರ ಕ್ರೀಡಾ ಸಚಿವ ಕಿರಣ್‌ ರಿಜಿಜು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ದಿಂಗ್‌ ಎಕ್ಸ್‌ಪ್ರೆಸ್‌ ಖ್ಯಾತಿಯ ‌ ಸದ್ಯ ಎನ್‌ಐಎಸ್‌ ಪಟಿಯಾಲಾದಲ್ಲಿ ತರಬೇತಿ ಪಡೆಯುತ್ತಿದ್ದು, ಜುಲೈ 23ರಿಂದ ಆರಂಭವಾಗಲಿರುವ ಟೋಕಿಯೋ ಒಲಿಂಪಿಕ್ಸ್‌ಗೆ ಅರ್ಹತೆ ಗಿಟ್ಟಿಸಲು ಎದುರು ನೋಡುತ್ತಿದ್ದಾರೆ. ಕಿರಿಯರ ವಿಶ್ವಚಾಂಪಿಯನ್‌ಶಿಪ್‌ 400 ಮೀಟರ್ ಓಟದಲ್ಲಿ ಬೆಳ್ಳಿ ಪದಕ ಗೆಲ್ಲುವ ಮೂಲಕ ಮನೆಮಾತಾದ ಹಿಮಾದಾಸ್‌, ಆ ಬಳಿಕ 2018ರಲ್ಲಿ  ಜಕಾರ್ತಾದಲ್ಲಿ ನಡೆದ ಏಷ್ಯನ್ ಗೇಮ್ಸ್‌ನಲ್ಲಿ ಮಹಿಳೆಯರ 4*400 ಮೀಟರ್‌ ರಿಲೇಯಲ್ಲಿ ಹಾಗೂ ಮಿಶ್ರ ರಿಲೇಯಲ್ಲಿ ಚಿನ್ನದ ಪದಕ ಗೆದ್ದ ತಂಡದ ಸದಸ್ಯೆಯಾಗಿದ್ದರು

 

Source:Suvarna News