ಮುಂಗಾರು ಮುನ್ನದ ದಿನಗಳಾಗಿರೋ ಈಗ ತಾಪ ಹೆಚ್ಚು. ಅಲ್ಲಲ್ಲಿ ಮಳೆ ಬಂದು ಹೋದರೂ ಶೆಕೆ ಇದ್ದೇ ಇದೆ. ಈ ಸಂದರ್ಭದಲ್ಲಿಯೂ ದಾಹಕ್ಕೆ ಏನಾದರೂ ಕೂಲ್ ಕೂಲ್ ಬೇಕು ಎನಿಸುತ್ತದೆ. ಹಾಗಿದ್ದರೆ ಕಲ್ಲಂಗಡಿ ಮೊಜಿಟೊ ನೀವೊಮ್ಮೆ ಟ್ರೈ ಮಾಡಬಹುದು. ದಾಹ ತಣಿಸೋ ಕಲ್ಲಂಗಡಿ ಮೊಜಿಟೊ ರೆಸಿಪಿ ಇಲ್ಲಿದೆ.
ಬೇಕಾಗುವ ಪದಾರ್ಥಗಳು:
ಸೋಡಾ – ಅರ್ಧ ಲೀಟರ್
ಸಣ್ಣಗೆ ಹೆಚ್ಚಿದ ಕಲ್ಲಂಗಡಿ ಹಣ್ಣು – 1 ಕಪ್
ತೆಳ್ಳಗೆ ಕತ್ತರಿಸಿದ ನಿಂಬೆ ಹಣ್ಣು – 1
ಪುದೀನಾ ಸೊಪ್ಪು – 5-6 ಚಿಗುರು
ಉಪ್ಪು – ರುಚಿಗೆ ತಕ್ಕಷ್ಟು
ಸಕ್ಕರೆ – 1 ಟೀಸ್ಪೂನ್
ಪುಡಿ ಮಾಡಿದ ಐಸ್ – 1 ಕಪ್
ಮಾಡುವ ವಿಧಾನ:
* ಮೊದಲಿಗೆ ಒಂದು ಸಣ್ಣ ಬೌಲ್ ತೆಗೆದುಕೊಂಡು ಅದರಲ್ಲಿ ಪುದೀನ ಚಿಗುರು ಹಾಗೂ ನಿಂಬೆಯನ್ನು ಹಾಕಿ ಪುಡಿ ಮಾಡಿಕೊಳ್ಳಿ.
* ಸಕ್ಕರೆಯನ್ನು ಕಾಲು ಕಪ್ ನೀರಿಗೆ ಬೆರೆಸಿ ಕರಗಿಸಿಕೊಳ್ಳಿ.
* ಈಗ ಒಂದು ಗ್ಲಾಸ್‌ಗೆ ಕಲ್ಲಂಗಡಿ ತುಂಡುಗಳನ್ನು ಹಾಕಿ, ಅದಕ್ಕೆ ಪುಡಿ ಮಾಡಿದ ಪುದೀನಾ, ನಿಂಬೆ ಹಣ್ಣು ಹಾಗೂ ಕರಗಿಸಿದ ಸಕ್ಕರೆಯನ್ನು ಸೇರಿಸಿ.
* ಬಳಿಕ ಅದಕ್ಕೆ ಚಿಟಿಕೆ ಉಪ್ಪು ಸೇರಿಸಿ ಮಿಶ್ರಣ ಮಾಡಿ.
* ಈಗ ಗ್ಲಾಸ್‌ಗೆ ಸೋಡಾ ಸುರಿಯಿರಿ. ತಣ್ಣಗೆ ಸವಿಯಲು ಬಯಸುತ್ತೀರಾದರೆ ಪುಡಿ ಮಾಡಿದ ಐಸ್ ಅನ್ನು ಸೇರಿಸಿ.
* ಕಲ್ಲಂಗಡಿ ಮೊಜಿಟೊ ತಯಾರಾಗಿದ್ದು, ಇದನ್ನು ತಕ್ಷಣವೇ ಸವಿದು ಚಿಲ್ ಆಗಿ