ದಸರಾ ದೀಪಾಲಂಕಾರಕ್ಕೆ ಚಾಲನೆ ಆಕ್ಷೇಪದ ನಡುವೆಯೂ ಮರಗಳಲ್ಲಿ ದೀಪದ ಮೆರಗು

Sep 25, 2021

ಮೈಸೂರು,ಸೆ.೨೪(ಎಂಟಿವೈ)- ನಾಡಹಬ್ಬ ದಸರಾ ಮಹೋತ್ಸವಕ್ಕೆ ಸಾಂಸ್ಕೃತಿಕ ನಗರಿ ಮೈಸೂರು ಸಜ್ಜುಗೊಳ್ಳುತ್ತಿದ್ದು, ಶುಕ್ರವಾರದಿಂದ ನಗರದ ಪ್ರಮುಖ ರಸ್ತೆಗಳಲ್ಲಿ ದೀಪಾಲಂಕಾರಕ್ಕೆ ಬಣ್ಣ ಬಣ್ಣದ ಬಲ್ಬ್ ಅಳವಡಿಸುವ ಕಾರ್ಯ ಆರಂಭವಾಗಿದೆ.

ದಸರಾ ಮಹೋತ್ಸವ ಆರಂಭಕ್ಕೆ ದಿನಗಣನೆ ಆರಂಭಗೊAಡಿದ್ದು, ನವರಾತ್ರಿ ಉದ್ಘಾಟನೆಗೆ ೧೩ ದಿನ ಮಾತ್ರ ಬಾಕಿಯಿದೆ. ಅರಮನೆ ಹೊರ ಭಾಗದ ರಸ್ತೆ, ಫುಟ್‌ಪಾತ್‌ನಲ್ಲಿ ಸ್ವಚ್ಛತಾ ಕಾರ್ಯ ನಡೆಸಲಾಗುತ್ತಿದೆ. ಹಾರ್ಡಿಂಜ್ ವೃತ್ತದಿಂದ ಊಟಿ ರಸ್ತೆಯ ಬಸವೇಶ್ವರ ವೃತ್ತದವರೆಗಿನ ಡಿವೈಡರ್‌ನಲ್ಲಿ ಬೆಳೆದಿದ್ದ ಗಿಡಗಂಟಿ ತೆರವುಗೊಳಿಸುವ ಕಾರ್ಯದಲ್ಲಿ ಕಾರ್ಮಿಕರು ಮಗ್ನರಾಗಿದ್ದಾರೆ. ದಸರಾ ಸಿದ್ಧತಾ ಕಾರ್ಯ ಭರದಿಂದ ಸಾಗುತ್ತಿದ್ದು, ಕೆಲವೇ ದಿನಗಳಲ್ಲಿ ಮೈಸೂರಿನ ಹಲವು ರಸ್ತೆ ಹಾಗೂ ಪ್ರಮುಖ ವೃತ್ತಗಳು ವಿದ್ಯುತ್ ದೀಪಾಲಂಕಾರಗೊAಡು ಕಂಗೊಳಿಸಲಿವೆ.

೧೦೦ ಕಿಲೋ ಮೀಟರ್ ದೀಪಾಲಂಕಾರ: ಈ ವರ್ಷದ ನಾಡಹಬ್ಬ ಮೈಸೂರು ದಸರಾ ಮಹೋತ್ಸವದಲ್ಲಿ ೧೦೦ ಕಿಲೋ ಮೀಟರ್ ವಿದ್ಯುತ್ ದೀಪಾಲಂಕಾರ ಮಾಡಲು ನಿರ್ಧರಿಸಲಾಗಿದೆ. ದೀಪಾಲಂಕಾರ ಕ್ಕಾಗಿ ರಸ್ತೆ ಎರಡು ಬದಿಯಲ್ಲಿ ಕಂಬ ನೆಡಲಾಗುತ್ತಿದೆ. ಹಾರ್ಡಿಂಜ್ ವೃತ್ತ, ಕೆ.ಆರ್.ವೃತ್ತ, ಬಸವೇಶ್ವರ ವೃತ್ತ ಮೂರು ವೃತ್ತಗಳಲ್ಲೂ ವಿದ್ಯುತ್ ದೀಪಾಲಂಕಾರ ಅಂತಿಮ ಹಂತಕ್ಕೆ ತಲುಪಿದೆ. ಇರ್ವಿನ್ ರಸ್ತೆಯ ನಗರ ಬಸ್ ನಿಲ್ದಾಣದ ಎದುರಿನಲ್ಲಿ ಕೆಟ್ಟಿರುವ ಬೀದಿ ದೀಪಗಳನ್ನು ಪಾಲಿಕೆ ಸಿಬ್ಬಂದಿ ಬದಲಿಸಿ ಬೆಳಕು ಚೆಲ್ಲಿದರು.
ಮರಗಳಿಗೂ ಸೀರಿಯಲ್ ಸೆಟ್: ಕಳೆದ ಕೆಲ ವರ್ಷಗಳಿಂದ ದಸರಾ ದೀಪಾಲಂಕಾರದ ವೇಳೆ ಮರಗಳಿಗೆ ಸೀರಿಯಲ್ ಸೆಟ್ ಅಳವಡಿಸದಂತೆ ಆಕ್ಷೇಪ ವ್ಯಕ್ತವಾಗುತ್ತಿದ್ದರೂ, ಈ ಬಾರಿಯೂ ಮರಗಳಿಗೆ ಬಣ್ಣ ಬಣ್ಣದ ವಿದ್ಯುತ್ ದೀಪ ಅಳವಡಿಸುವ ಕಾರ್ಯ ಆರಂಭವಾಗಿದ್ದು, ಪರಿಸರವಾದಿಗಳ ಕೆಂಗಣ ್ಣಗೆ ಗುರಿಯಾಗುತ್ತಿದೆ. ಸೀರಿಯಲ್ ಸೆಟ್ ಸುತ್ತಲು ಮೊಳೆ ಬಳಸುತ್ತಿರುವುದೂ ಪರಿಸರ ವಾದಿಗಳ ಆಕ್ರೋಶಕ್ಕೆ ಕಾರಣವಾಗಿದೆ. ರಸ್ತೆ ಬದಿಯಿರುವ ಮರ ಗಳಲ್ಲಿ ಪಕ್ಷಿ ಸಂಕುಲ ಆಶ್ರಯ ಪಡೆದಿದ್ದು, ರಾತ್ರಿ ವೇಳೆ ಬಲ್ಬ್ ಜಗಮಗಿಸುವುದರಿಂದ ಮರದಲ್ಲಿರುವ ಪಕ್ಷಿಗಳ ಶಾಂತಿಗೆ ಭಂಗವಾಗ ಲಿದೆ ಎಂಬ ಆಕ್ಷೇಪದ ನಡುವೆಯೂ ಮರಗಳಿಗೆ ವಿದ್ಯುತ್ ಲೈಟ್ ಅಳವಡಿಸುವ ಕಾರ್ಯ ಭರದಿಂದ ಸಾಗುತ್ತಿದೆ. ಇರ್ವಿನ್ ರಸ್ತೆಯಲ್ಲಿರುವ ಮರಗಳು, ಚಾಮರಾಜ ಜೋಡಿ ರಸ್ತೆಯಲ್ಲಿರುವ ಮರಗಳಿಗೆ ಚೈನಾ ಸೆಟ್ ಹಾಕಲಾಗಿದೆ. ಚಾಮರಾಜ ಜೋಡಿ ರಸ್ತೆಯ ಬಸವೇಶ್ವರ ವೃತ್ತದಿಂದ ರಾಮಸ್ವಾಮಿ ವೃತ್ತದವರೆಗೆ ಓಂಕಾರ್ ಲೈಟಿಂಗ್ಸ್ನವರು ದೀಪಾಲಂಕಾರದಲ್ಲಿ ನಿರತರಾಗಿದ್ದರು.

ಅ. ೫ರಂದು ದಸರಾ ದೀಪಾಲಂಕಾರ ಉದ್ಘಾಟನೆಗೊಳ್ಳಲಿ ರುವುದರಿಂದ ಬಿರುಸಿನಿಂದ ಕೆಲಸಗಳು ಆರಂಭಗೊAಡಿವೆ. ಅ.೧೫ರವರೆಗೆ ದೀಪಾಲಂಕಾರ ಇರಲಿದೆ. ಈ ವರ್ಷದ ದಸರಾದ ದೀಪಾಲಂಕಾರವೇ ವಿಶೇಷವಾಗಿದೆ.

Source:mysurumithra