ಚಿತ್ರಮಂದಿರ ಸಂಪೂರ್ಣ ಭರ್ತಿಗೆ ಅವಕಾಶ: ಸರ್ಕಾರದಿಂದ ಹೊಸ ಮಾರ್ಗಸೂಚಿ
ಎಲ್ಲಾ ಪ್ರೇಕ್ಷಕರು ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು. ಮಲ್ಟಿಪ್ಲೆಕ್ಸ್ಗಳಲ್ಲಿ ಒಟ್ಟಿಗೆ ಮಧ್ಯಂತರ ವಿರಾಮ ನೀಡುವಂತಿಲ್ಲ. ಇಂಟರ್ವಲ್ನಲ್ಲಿ ಪ್ರೇಕ್ಷಕರು ಗುಂಪು ಸೇರುವಂತಿಲ್ಲ ಎಂಬ ಅಂಶಗಳು ಮಾರ್ಗಸೂಚಿಯಲ್ಲಿವೆ.
ಬೆಂಗಳೂರು: ಸಿನಿ ತಾರೆಯರ ಒತ್ತಾಯಕ್ಕೆ ಮಣಿದ ರಾಜ್ಯಸರ್ಕಾರ ಚಿತ್ರಮಂದಿರಗಳ ಪೂರ್ಣ ಸಾಮರ್ಥ್ಯದಷ್ಟು ಪ್ರೇಕ್ಷಕರ ಪ್ರವೇಶಕ್ಕೆ ಅವಕಾಶ ಕಲ್ಪಿಸಿ ಆದೇಶ ಹೊರಡಿಸಿದೆ. ಈ ಸಂಬಂಧ (ಫೆ.4) ಇಂದು ಹೊಸ ಮಾರ್ಗಸೂಚಿ ಬಿಡುಗಡೆ ಮಾಡಿದೆ.
ಚಿತ್ರಮಂದಿರದ ಆವರಣದಲ್ಲಿ ದೈಹಿಕ ಅಂತರ ಕಾಪಾಡಬೇಕು. ಕಂಟೇನ್ಮೆಂಟ್ ಜೋನ್ ಚಿತ್ರಮಂದಿರಗಳಲ್ಲಿ ಪ್ರದರ್ಶನಕ್ಕೆ ಅನುಮತಿ ನಿರಾಕರಣೆ. ಪ್ರತಿಯೊಂದು ಪ್ರದರ್ಶನದ ಬಳಿಕ ಸ್ಯಾನಿಟೈಸ್ ಮಾಡಬೇಕು. ಎಲ್ಲಾ ಪ್ರೇಕ್ಷಕರು ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು. ಮಲ್ಟಿಪ್ಲೆಕ್ಸ್ಗಳಲ್ಲಿ ಒಟ್ಟಿಗೆ ಮಧ್ಯಂತರ ವಿರಾಮ ನೀಡುವಂತಿಲ್ಲ. ಇಂಟರ್ವಲ್ನಲ್ಲಿ ಪ್ರೇಕ್ಷಕರು ಗುಂಪು ಸೇರುವಂತಿಲ್ಲ ಎಂಬ ಅಂಶಗಳು ಮಾರ್ಗಸೂಚಿಯಲ್ಲಿವೆ.
ಚಿತ್ರ ಪ್ರದರ್ಶನ ಮುಗಿದ ಬಳಿಕ ಎಲ್ಲರೂ ಒಟ್ಟಿಗೆ ಹೊರಗೆ ಬರುವಂತಿಲ್ಲ. ಮಲ್ಟಿಪ್ಲೆಕ್ಸ್ಗಳಲ್ಲಿ ಪ್ರತಿ ತೆರೆಯ ಪ್ರದರ್ಶನದ ಸಮಯ ವ್ಯತ್ಯಾಸವಿರಬೇಕು. ಡಿಜಿಟಲ್ ಪೇಮೆಂಟ್ಗೆ ಆದ್ಯತೆ ನೀಡಬೇಕು. ಶೌಚಾಲಯಗಳಲ್ಲಿ ಅಂತರ ಪಾಲಿಸಬೇಕು. ಯಾವುದೇ ಕೊವಿಡ್ ಲಕ್ಷಣ ಇದ್ದವರಿಗೆ ಪ್ರವೇಶ ನೀಡುವಂತಿಲ್ಲ. ಕೆಮ್ಮು, ಸೀನು ಬಂದಾಗ ಮಾಸ್ಕ್ ಕರವಸ್ತ್ರ ಬಳಸಬೇಕು ಎಂಬಿತ್ಯಾದಿ ನಿಯಮಗಳು ಮಾರ್ಗಸೂಚಿಯಲ್ಲಿವೆ.
Source:TV9Kannada