ಗೂಗಲ್ ಪ್ರಕಾರ ಟೀಮ್ ಇಂಡಿಯಾ ಕೋಚ್ ರವಿ ಶಾಸ್ತ್ರೀಯ ವಯಸ್ಸು 120
ಹಾಗೆ ನೋಡಿದರೆ, ಅವರ ಇತರ ಎಲ್ಲ ದಾಖಲೆಗಳನ್ನು ಗೂಗಲ್ ಸರಿಯಾಗಿ ತೋರಿಸುತ್ತಿದೆ. ಅವರ ಮದುವೆ ಬಗ್ಗೆ ಗೂಗಲ್ ಪೇಜ್ಗಳಲ್ಲಿ ದಾಖಲಾಗಿರುವ ದಿನಾಂಕ ಸರಿಯಾಗಿದೆ
ಟೀಮ್ ಇಂಡಿಯಾದ ಹೆಡ್ ಕೋಚ್ ರವಿ ಶಾಸ್ತ್ರೀಯ ವಯಸ್ಸೆಷ್ಟು ಅಂತ ನಿಮಗೆ ಗೊತ್ತಾ? ಗೂಗಲ್ ಸರ್ಚ್ ಪ್ರಕಾರ 120. ಹೌದು ನೀವು ಓದುತ್ತಿರುವುದು ನಿಜ. ಒಂದು ಪಕ್ಷ ನಿಮಗೆ ನಾವು ಹೇಳುತ್ತಿರುವುದು ಖಾತ್ರಿಯಾಗದಿದ್ದರೆ ಗೂಗಲ್ ಸರ್ಚ್ಗೆ ಹೋಗಿ ಪರಿಶೀಲಿಸಿ. ಅವರು ಹುಟ್ಟಿದ್ದು 27 ಮೇ, 1901ರಲ್ಲಿ ಅಂತ ಅದು ತೋರಿಸುತ್ತದೆ.
ಹಾಗೆ ನೋಡಿದರೆ, ಅವರ ಇತರ ಎಲ್ಲ ದಾಖಲೆಗಳನ್ನು ಗೂಗಲ್ ಸರಿಯಾಗಿ ತೋರಿಸುತ್ತಿದೆ. ಅವರ ಮದುವೆ ಬಗ್ಗೆ ಗೂಗಲ್ ಪೇಜ್ಗಳಲ್ಲಿ ದಾಖಲಾಗಿರುವ ದಿನಾಂಕ ಸರಿಯಾಗಿದೆ. ಆದರೆ ಸರ್ಚ್ ಬಾರ್ನಲ್ಲಿ ನೀವು ರವಿ ಶಾಸ್ತ್ರೀ ವಯಸ್ಸು ಎಂದು ನಮೂದಿಸುತ್ತಿದ್ದಂತೆ ಅದು 120 ವರ್ಷ್ಗಳೆಂದು ತೋರಿಸುತ್ತದೆ.
ಅಸಲಿಗೆ ರವಿ ಶಾಸ್ತ್ರೀ ಹುಟ್ಟಿದ್ದು 27 ಮೇ, 1962ರಂದು, ಅಂದರೆ ಅವರು ವಯಸ್ಸು ಈಗ 58 ವರ್ಷ. ಗೂಗಲ್ಗೆಯಾಕೆ ಅವರ ವಯಸ್ಸನ್ನು ದುಪ್ಪಟ್ಟು ಮಾಡಿ ದಾಖಲಿಸುವ ಮನಸ್ಸು ಬಂತೋ?
Source:TV9Kannada