ಕೊರೋನಾ ನಿಯಂತ್ರಣಕ್ಕೆ ಭಾರತದ ಸಿಂಪಲ್ ಟೆಕ್ನಿಕ್ಸ್: ಭೇಷ್ ಎಂದ WHO

Feb 6, 2021

ಸಂಪನ್ಮೂಲ ಹೆಚ್ಚಿರದಿದ್ದಾಗ, ಇರುವುದರಲ್ಲಿಯೇ ಹೊಂದಿಕೊಳ್ಳಬೇಕಾಗುತ್ತದೆ. ಈ ವಿಚಾರದಲ್ಲಿ ಭಾರತ ಎಕ್ಸ್‌ಪರ್ಟ್. ಕಡಿಮೆ ಖರ್ಚು, ಕಡಿಮೆ ಸಂಪನ್ಮೂಲ ಇರುವುದರಲ್ಲಿಯೇ ಸಮಸ್ಯೆಯನ್ನು ಎದುರಿಸಬೇಕಾಗುತ್ತದೆ.

ಭಾರತದ ಮಟ್ಟಿಗೆ ಕೊರೋನಾ ವಿಷಯದಲ್ಲೂ ಭಿನ್ನವಾಗಿರಲಿಲ್ಲ. ಕೊರೋನಾದಂತಹ ಡೆಡ್ಲೀ ವೈರಸ್ ಅಟಕಾಯಿಸಿಕೊಂಡ್ರೂ ಭಾರತ ಯಶಸ್ವಿಯಾಗಿ ಇದರ ವಿರುದ್ಧ ಹೋರಾಡುತ್ತಿದೆ.

ಜನಸಂಖ್ಯೆ ಹೆಚ್ಚಿರುವ, ಸುವ್ಯವಸ್ಥಿತ ವೈದ್ಯಕೀಯ ವ್ಯವಸ್ಥೆ ಇರದ ಭಾರತದಂಥ ದೇಶಕ್ಕೆ ಕೋವಿಡ್ ಸೋಂಕನ್ನು ನಿಯಂತ್ರಿಸುವುದು ಅಸಾಧ್ಯವೆಂದೇ ಪಾಶ್ಚಿಮಾತ್ಯ ದೇಶಗಳು ಪರಗಿಣಿಸಿದ್ದವು. ಅದೇನಾಯಿತೋ ಗೊತ್ತಿಲ್ಲ, ಸರಕಾರದ ದಿಟ್ಟ ಕ್ರಮಗಳಿಂದ ಕೊರೋನಾ ಓಡಿಸುವಲ್ಲಿ ದೇಶ ಬಹುತೇಕ ಯಶಸ್ವಿಯಾಗಿದೆ.

ಅಷ್ಟೇ ಅಲ್ಲ ಲಸಿಕೆ ಕಂಡು ಹಿಡಿಯುವಲ್ಲಿಯೂ ಯಶಸ್ವಿಯಾಗಿದೆ. ಈಗಾಗಲೇ ಅನೇಕ ಬಾರಿ ಭಾರತದ ಕ್ರಮಕ್ಕೆ ಭೇಷ್ ಎಂದು ವಿಶ್ವ ಆರೋಗ್ಯ ಸಂಸ್ಥೆ ಇದೀಗ ಮತ್ತೆ ನಮ್ಮ ದೇಶದ ಬೆನ್ನು ತಟ್ಟಿದೆ. ಮಹಾರಾಷ್ಟ್ರ ಹಾಗೂ ಕೇರಳ ಹೊರತುಪಡಿಸಿ, ಇತರೆ ರಾಜ್ಯಗಳಲ್ಲಿ ಕೋವಿಡ್ ಸಂಪೂರ್ಣವಾಗಿ ನಿಯಂತ್ರಣಕ್ಕೆ ಬಂದಿದ್ದು, ಜೊತಗೆ ಲಸಿಕೆ ನೀಡುವ ಕಾರ್ಯವೂ ಭರದಿಂದ ಸಾಗುತ್ತಿದೆ.

 

ವೈರಸ್ ನಿಯಂತ್ರಣ ಜೊತೆಗೆ, ಲಸಿಕೆ ಪ್ರಯೋಗ ಸೋಂಕನ್ನು ಓಡಿಸುವಲ್ಲಿ ಯಶಸ್ವಿಯಾಗಲಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆಯ ಡೈರೆಕ್ಟರ್ ಜನರಲ್ ಟೆಡ್ರೋಸ್ ಅಡಾನೋಮ್ ಹೇಳಿದ್ದಾರೆ.

Source:Suvarna News