ಕೆಜಿಎಫ್ ಚಾಪ್ಟರ್-2 ಟೀಸರ್ ಯೂಟ್ಯೂಬ್ನಿಂದ ಗಳಿಸಿದ್ದೆಷ್ಟು ಗೊತ್ತಾ?
ಕೆಜಿಎಫ್-2 ಟೀಸರ್ ಈವರೆಗೆ 16.19 ಕೋಟಿ ವೀಕ್ಷಣೆ ಕಂಡಿದೆ. ಕನ್ನಡ ಸಿನಿಮಾದ ಟೀಸರ್ ಒಂದು ಕಡಿಮೆ ಅವಧಿಯಲ್ಲಿ ಇಷ್ಟು ವೀಕ್ಷಣೆ ಕಂಡಿರುವುದು ಇದೇ ಮೊದಲಂತೆ. ಹೀಗಾಗಿ, ಈ ಟೀಸರ್ನಿಂದ ಚಿತ್ರತಂಡಕ್ಕೆ ದೊಡ್ಡ ಮಟ್ಟದ ಗಳಿಕೆ ಬಂದಿದೆ ಎನ್ನಲಾಗುತ್ತಿದೆ.
ಕೆಜಿಎಫ್ ಚಾಪ್ಟರ್ 2 ಚಿತ್ರದ ಟೀಸರ್ ಯಶ್ ಜನ್ಮದಿನದ ಅಂಗವಾಗಿ ಜನವರಿ 7ರಂದು ರಿಲೀಸ್ ಆಗಿತ್ತು. ಕೆಜಿಎಫ್-2 ಟೀಸರ್ ರಿಲೀಸ್ ಸಾಕಷ್ಟು ದಾಖಲೆ ಸೃಷ್ಟಿಸಿದೆ. ವಿಶೇಷ ಎಂದರೆ ಈ ಟೀಸರ್ ಒಂದೇ ಕೋಟಿ ಕೋಟಿ ರೂಪಾಯಿ ಗಳಿಕೆ ಮಾಡಿದೆಯಂತೆ.
ಯಶ್ ಜನ್ಮದಿನದ ಅಂಗವಾಗಿ ರಿಲೀಸ್ ಆಗಿದ್ದ ಕೆಜಿಎಫ್-2 ಟೀಸರ್ ಐದೂ ಭಾಷೆಗಳಿಗೆ ಹೊಂದಿಕೆ ಆಗುವಂತಿತ್ತು. ಹೀಗಾಗಿ, ಬೇರೆ ಬೇರೆ ಟೀಸರ್ ಬಿಡುಗಡೆ ಮಾಡದೆ, ಒಂದೇ ಟೀಸರ್ ರಿಲೀಸ್ ಆಗಿತ್ತು. ಇನ್ನು, ಚಿತ್ರದ ಮೇಲೆ ನಿರೀಕ್ಷೆ ಹೆಚ್ಚಿದೆ. ಈ ಎಲ್ಲಾ ಕಾರಣಕ್ಕೆ ಟೀಸರ್ ಅತಿ ಹೆಚ್ಚು ವೀಕ್ಷಣೆ ಕಂಡಿತ್ತು.
ಕೆಜಿಎಫ್-2 ಟೀಸರ್ ಈವರೆಗೆ 16.19 ಕೋಟಿ ವೀಕ್ಷಣೆ ಕಂಡಿದೆ. ಕನ್ನಡ ಸಿನಿಮಾದ ಟೀಸರ್ ಒಂದು ಕಡಿಮೆ ಅವಧಿಯಲ್ಲಿ ಇಷ್ಟು ವೀಕ್ಷಣೆ ಕಂಡಿರುವುದು ಇದೇ ಮೊದಲಂತೆ. ಹೀಗಾಗಿ, ಈ ಟೀಸರ್ನಿಂದ ಚಿತ್ರತಂಡಕ್ಕೆ ದೊಡ್ಡ ಮಟ್ಟದ ಗಳಿಕೆ ಬಂದಿದೆ ಎನ್ನಲಾಗುತ್ತಿದೆ.
ವಿಡಿಯೋ ಎಷ್ಟು ವೀಕ್ಷಣೆ ಕಂಡಿದೆ ಎಂಬಿತ್ಯಾದಿ ವಿಚಾರ ಇಟ್ಟುಕೊಂಡು ಯೂಟ್ಯೂಬ್ ವಿಡಿಯೋಗೆ ಹಣ ನೀಡುತ್ತದೆ. ಹೊಂಬಾಳೆ ಫಿಲ್ಮ್ಸ್ನಲ್ಲಿ ತೆರೆಕಂಡಿರುವ ಈ ಟೀಸರ್ನಿಂದ ಬರೋಬ್ಬರಿ 2.18 ಕೋಟಿ ರೂಪಾಯಿ ದೊರೆತಿದೆ ಎನ್ನಲಾಗಿದೆ. ಇದು ಕೆಲ ಸ್ಯಾಂಡಲ್ವುಡ್ ಹೀರೋನ ಸಂಭಾವನೆಗಿಂತ ಹೆಚ್ಚು ಅನ್ನೋದು ವಿಶೇಷ.
Source: TV9 Kannada