IND vs AUS 1st Test: ಕುತೂಹಲ ಕೆರಳಿಸಿದ ದ್ವಿತೀಯ ದಿನದಾಟ: ರೋಹಿತ್ ಮೇಲೆ ಎಲ್ಲರ ಕಣ್ಣು: ದೊಡ್ಡ ಮೊತ್ತ ಪೇರಿಸುತ್ತ ಭಾರತ?

Feb 10, 2023

India vs Australia 1st Test: ಮೊದಲ ಇನ್ನಿಂಗ್ಸ್ ಆರಂಭಿಸಿರುವ ಟೀಮ್ ಇಂಡಿಯಾ ಮೊದಲ ದಿನದಾಟದ ಅಂತ್ಯಕ್ಕೆ 24 ಓವರ್​ಗಳಲ್ಲಿ 1 ವಿಕೆಟ್ ಕಳೆದುಕೊಂಡು 77 ರನ್​ಗಳನ್ನು ಕಲೆಹಾಕಿದೆ. ಭಾರತ ಇನ್ನೂ 100 ರನ್​ಗಳ ಹಿನ್ನಡೆಯಲ್ಲಿದೆ. ಅರ್ಧಶತಕ ಸಿಡಿಸಿ ತಂಡಕ್ಕೆ ಭರ್ಜರಿ ಆರಂಭ ಒದಗಿಸಿರುವ ನಾಯಕ ರೋಹಿತ್ ಶರ್ಮಾ ಮೇಲೆ ಎಲ್ಲರ ಕಣ್ಣಿದೆ.

1)ನಾಗ್ಪುರದ ವಿದರ್ಭ ಕ್ರಿಕೆಟ್ ಅಸೋಸಿಯೇಷನ್ ಸ್ಟೇಡಿಯಂನಲ್ಲಿ ಶುರುವಾಗಿರುವ ಬಾರ್ಡರ್-ಗವಾಸ್ಕರ್ ಟ್ರೋಫಿಯ ಭಾರತ ಹಾಗೂ ಆಸ್ಟ್ರೇಲಿಯಾ ನಡುವಣ ಮೊದಲ ಟೆಸ್ಟ್ ಪಂದ್ಯ ಕುತೂಹಲ ಕೆರಳಿಸಿದೆ. ಕಾಂಗರೂ ಪಡೆಯನ್ನು ಭಾರತ 177 ರನ್​ಗೆ ಆಲೌಟ್ ಮಾಡಿದೆ.

2)ಬಳಿಕ ತನ್ನ ಮೊದಲ ಇನ್ನಿಂಗ್ಸ್ ಆರಂಭಿಸಿರುವ ಟೀಮ್ ಇಂಡಿಯಾ ಮೊದಲ ದಿನದಾಟದ ಅಂತ್ಯಕ್ಕೆ 24 ಓವರ್​ಗಳಲ್ಲಿ 1 ವಿಕೆಟ್ ಕಳೆದುಕೊಂಡು 77 ರನ್​ಗಳನ್ನು ಕಲೆಹಾಕಿದೆ. ಭಾರತ ಇನ್ನೂ 100 ರನ್​ಗಳ ಹಿನ್ನಡೆಯಲ್ಲಿದೆ.

3)ಅರ್ಧಶತಕ ಸಿಡಿಸಿ ತಂಡಕ್ಕೆ ಭರ್ಜರಿ ಆರಂಭ ಒದಗಿಸಿರುವ ನಾಯಕ ರೋಹಿತ್ ಶರ್ಮಾ ಮೇಲೆ ಎಲ್ಲರ ಕಣ್ಣಿದೆ. ಹಿಟ್​ಮ್ಯಾನ್ ಬ್ಯಾಟ್​ನಿಂದ ಶತಕ ಬರುತ್ತಾ ಎಂಬುದು ನೋಡಬೇಕಿದೆ. ಜೊತೆಗೆ ದೊಡ್ಡ ಮೊತ್ತ ಪೇರಿಸುವ ಪ್ಲಾನ್​ನಲ್ಲಿ ಟೀಮ್ ಇಂಡಿಯಾವಿದೆ. ಹೀಗೆ ಅನೇಕ ಕಾರಣಗಳಿಗೆ ದ್ವಿತೀಯ ದಿನದಾಟ ಕುತೂಹಲ ಕೆರಳಿಸಿದೆ. ಅಲ್ಲದೆ ಎರಡನೇ ದಿನ ಪಿಚ್ ಹೇಗೆ ವರ್ತಿಸುತ್ತೆ ನೋಡಬೇಕಿದೆ.

4)ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಆಸ್ಟ್ರೇಲಿಯಾ ಎರಡು ರನ್​ಗೆ ಎರಡು ವಿಕೆಟ್ ಕಳೆದುಕೊಂಡಿತು. ಡೇವಿಡ್ ವಾರ್ನರ್​ರನ್ನು (1) ಶಮಿ ಪೆವಿಲಿಯನ್​ಗೆ ಅಟ್ಟಿದರೆ ಉಸ್ಮಾನ್ ಖ್ವಾಜಾ (1) ಅವರನ್ನು ಮೊಹಮ್ಮದ್ ಸಿರಾಜ್ ಔಟ್ ಮಾಡಿದರು.

5)ಈ ಸಂದರ್ಭ ಜೊತೆಯಾದ ಮಾರ್ನಸ್ ಲಾಬುಶೇನ್ ಹಾಗೂ ಸ್ಟೀವ್ ಸ್ಮಿತ್ ತಂಡಕ್ಕೆ ಆಸರೆಯಾಗಿ ನಿಂತರು. ಎಚ್ಚರಿಕೆಯ ಆಟವಾಡಿದ ಈ ಜೋಡಿ 82 ರನ್​ಗಳ ಕಾಣಿಕೆ ನೀಡಿತು. ಇವರ ಜೊತೆಯಾಟಕ್ಕೆ ಬ್ರೇಕ್ ಹಾಕಿದ್ದು ರವೀಂದ್ರ ಜಡೇಜಾ.

6)ಕ್ರೀಸ್ ಕಚ್ಚಿ ಆಡುತ್ತಿದ್ದ ಲಾಬುಶೇನ್​ಗೆ ಜಡೇಜಾ ಕೆಡ್ಡಾ ತೋರಿದರು. 123 ಎಸತಗಳಲ್ಲಿ 49 ರನ್ ಗಳಿಸಿ ಮಾರ್ನಸ್ ಔಟಾದರೆ, ಅತ್ತ ಅಪಾಯಕಾರಿ ಗೋಚರಿಸಿದ ಸ್ಮಿತ್​ಗೂ (37) ಜಡೇಜಾ ಪೆವಿಲಿಯನ್ ಹಾದಿ ತೋರಿದರು.

7)ನಂತರ ಬಂದ ಬ್ಯಾಟರ್​ಗಳ ಪೈಕಿ ಹ್ಯಾಂಡ್ಸ್​ಕಾಂಬ್ 31 ಹಾಗೂ ಅಲೆಕ್ಸ್ ಕ್ಯಾರಿ 36 ರನ್ ಗಳಿಸಿದ್ದು ಬಿಟ್ಟರೆ ಉಳಿದವರ ಸ್ಕೋರ್ ಎರಡಂಕಿ ದಾಟಲಿಲ್ಲ. ಮೂವರು ಬ್ಯಾಟರ್​ಗಳು ಸೊನ್ನೆ ಸುತ್ತಿದರು. ಆಸ್ಟ್ರೇಲಿಯಾ 63.5 ಓವರ್​ಗಳಲ್ಲಿ 177 ರನ್​ಗೆ ಆಲೌಟ್ ಆಯಿತು.

8)ಭಾರತ ಪರ ಭರ್ಜರಿ ಕಮ್​ಬ್ಯಾಕ್ ಮಾಡಿದ ರವೀಂದ್ರ ಜಡೇಜಾ 22 ಓವರ್​​ಗೆ 47 ರನ್ ನೀಡಿ 5 ವಿಕೆಟ್ ಕಿತ್ತರೆ, ಆರ್. ಅಶ್ವಿನ್ 3, ಶಮಿ ಹಾಗೂ ಸಿರಾಜ್ ತಲಾ 1 ವಿಕೆಟ್ ಪಡೆದರು.

9)ನಂತರ ತನ್ನ ಮೊದಲ ಇನ್ನಿಂಗ್ಸ್ ಆರಂಭಿಸಿದ ಭಾರತ ಭರ್ಜರಿ ಆರಂಭ ಪಡೆದುಕೊಂಡಿತು. ರೋಹಿತ್ ಬಿರುಸಿನ ಬ್ಯಾಟಿಂಗ್ ನಡೆಸಿದರೆ ಕೆಎಲ್ ರಾಹುಲ್ ಉತ್ತಮ ಸಾಥ್ ನೀಡಿದರು. ಆದರೆ, ಇವರಿಬ್ಬರ ಜೊತೆಯಾಟ 76 ರನ್​ಗೆ ಅಂತ್ಯವಾಯಿತು. ರಾಹುಲ್ 71 ಎಸೆತಗಳಲ್ಲಿ 20 ರನ್​ಗೆ ಔಟಾದರು.

10)ಹೀಗೆ ಮೊದಲ ದಿನದಾಟದ ಅಂತ್ಯಕ್ಕೆ ಭಾರತ 1 ವಿಕೆಟ್ ಕಳೆದುಕೊಂಡು 77 ರನ್ ಕಲೆಹಾಕಿದೆ. ರೋಹಿತ್ 69 ಎಸೆತಗಳಲ್ಲಿ 56 ರನ್ ಗಳಿಸಿ ಹಾಗೂ ರವಿಚಂದ್ರನ್ ಅಶ್ವಿನ್ 5 ಎಸೆತಗಳಲ್ಲಿ ಖಾತೆ ತೆರೆಯದೆ ದ್ವಿತೀಯ ದಿನಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ.

Source: TV9KANNADA