ಏನೋ ಮಿಸ್ ಹೊಡೀತಿದೆ ಎಂದ ದರ್ಶನ್‌ಗೆ ಅಪಾಯದ ಹಿಂಟ್ ಮೊದಲೇ ಸಿಕ್ಕಿತ್ತು

Feb 25, 2021

ದರ್ಶನ್ ಅಂದರೆ ಕನ್ನಡಿಗರಿಗೆ ಏನೋ ಅಭಿಮಾನ. ಅವರ ಸ್ಕ್ರೀನ್ ಮೇಲಿನ ಅಬ್ಬರ ಒಂದು ಲೆಕ್ಕವಾದರೆ ರಿಯಲ್‌ ಲೈಫ್‌ನಲ್ಲೂ ಅವರು ಹೀರೋ ತರನೇ ಲೈಪ್ ಲೀಡ್ ಮಾಡ್ತಿರೋದು ಇನ್ನೊಂದು ಲೆಕ್ಕ. ಅವರ ಸ್ವಭಾವದಲ್ಲೇ ಒಂದು ವಿಶೇಷತೆ ಇದೆ ಅನ್ನೋದು ಹಲವರಿಗೆ ಗೊತ್ತು. ಇದೀಗ ರಾಬರ್ಟ್ ಚಿತ್ರೀಕರಣದ ವೇಳೆಗೆ ಅವರ ಇನ್ನೊಂದು ವಿಶೇಷತೆ ಗಮನ ಸೆಳೆಯುತ್ತಿದೆ. ಅದು ಅವರ ಸಿಕ್ತ್ ಸೆನ್ಸ್ ಬಹಳ ಚುರುಕಾಗಿರೋದು. ಇತ್ತೀಚೆಗೆ ರಾಬರ್ಟ್ ಸಿನಿಮಾ ಚಿತ್ರೀಕರಣದ ವೇಳೆ ಅದು ಮತ್ತೊಮ್ಮೆ ಸಾಬೀತಾಯ್ತು.

ಸಾಮಾನ್ಯವಾಗಿ ಕಾಡಿನ ಜೊತೆಗೆ ಹೆಚ್ಚೆಚ್ಚೆ ಒಡನಾಟ ಇದ್ದವರಿಗೆ ಪ್ರಕೃತಿ ನೀಡೋ ಕೆಲವು ಸಿಗ್ನಲ್ ಗಳು ತಕ್ಷಣ ಅರಿವಿಗೆ ಬರುತ್ತದೆ. ಪ್ರಾಣಿಗಳಿಗಂತೂ ಆ ಶಕ್ತಿ ಮೊದಲೇ ಇದೆ. ಸುನಾಮಿ ಬರುವ ಮೊದಲೇ ಜಲಚರಗಳಿಗೆ ಆ ಸೂಚನೆ ಸಿಕ್ಕಿ ಅವು ಬಹುದೂರ ಪ್ರಯಾಣ ಬೆಳೆಸಿದವಂತೆ. ಪ್ರಾಣಿಗಳಿಗೂ ಇಂಥಾ ರಹಸ್ಯಗಳು ಬಹು ಬೇಗ ಅರಿವಾಗುತ್ತದೆ. ಕಲವೊಮ್ಮೆ ಮಧ್ಯರಾತ್ರಿ ನಾಯಿ ಇದ್ದಕ್ಕಿದ್ದ ಹಾಗೆ ಎದ್ದು ಬೊಗಳಲಾರಂಭಿಸುತ್ತದೆ.

ನಾವು ಎದ್ದು ಲೈಟ್ ಹಾಕಿ ಏನೂ ಗೊತ್ತಾಗದೇ ಆ ಪಾಪದ ಪ್ರಾಣಿಗೆ ಬೈದು ಸುಮ್ಮನಾಗ್ತೀವಿ. ಆದರೆ ಅದರ ಸೂಕ್ಷ್ಮ ಕಿವಿಗೆ ನಮಗೆ ತಿಳಿಯದೇ ಹೋಗುವ ಯಾವುದೋ ಸೂಕ್ಷ್ಮ ಸೌಂಡ್ ಗೊತ್ತಾಗಿರುತ್ತೆ. ಪ್ರಕೃತಿ ಪ್ರಾಣಿ, ಪಕ್ಷಿ, ಜಲಚರಗಳಿಗೆ ನೀಡಿರುವ ವಿಶೇಷ ಶಕ್ತಿ ಅದು. ಇತ್ತೀಚೆಗೆ ಕಾಡು, ಪ್ರಾಣಿಗಳ ಜೊತೆಗೆ ಹೆಚ್ಚೆಚ್ಚು ಒಡನಾಡುವ ದರ್ಶನ್ ಅವರಲ್ಲೂ ಸೆಕ್ಸ್ತ್ ಸೆನ್ಸ್ ಹೆಚ್ಚು ಚುರುಕಾದಂತೆ ಕಾಣೋದನ್ನು ಅವರ ಆಪ್ತರು ಗಮನಿಸಿದ್ದಾರೆ.

ಮಾರ್ಚ್ 5ಕ್ಕೆ ದರ್ಶನ್ ಅಭಿನಯದ ರಾಬರ್ಟ್ ಚಿತ್ರ ಥಿಯೇಟರ್‌ಗಳಿಗೆ ಲಗ್ಗೆ ಇಡುತ್ತಿದೆ. ಈ ಚಿತ್ರದ ಶೂಟಿಂಗ್ ವೇಳೆ ನಡೆದ ಒಂದು ರೋಚಕ ಪ್ರಸಂಗವನ್ನು, ತಮ್ಮ ಸಿಕ್ತ್ ಸೆನ್ಸ್ ಮೂಲಕ ಒಂದು ಅನಾಹುತ ತಪ್ಪಿದ್ದನ್ನು ದರ್ಶನ್ ಇತ್ತೀಚೆಗೆ ಹೇಳಿದ್ದಾರೆ. ಇದಾಗಿದ್ದು ಪುದುಚೆರಿಯಲ್ಲಿ. ಅಲ್ಲಿನ ಸಮುದ್ರ ದಂಡೆಯಲ್ಲಿ ರಾಬರ್ಟ್ ಶೂಟಿಂಗ್ ನಡೆಯುತ್ತಿತ್ತು.

ಅವತ್ತು ಪುದುಚೆರಿಯಲ್ಲಿ ವಿಶೇಷ ಫೈಟ್ ನ ಶೂಟಿಂಗ್ ಇತ್ತು. ಇದಕ್ಕಾಗಿ ಸಮುದ್ರ ದಂಡೆಯಲ್ಲಿ ಶೂಟಿಂಗ್ ಸೆಟ್ ಹಾಕಲಾಗಿತ್ತು. ಜೊತೆಗೆ ಶೂಟಿಂಗ್ ವಾಹನಗಳೂ ಅಲ್ಲೇ ಇದ್ದವು. ಈ ವೇಳೆ ರಾತ್ರಿ ಊಟಕ್ಕೆ ಅಂತ ದರ್ಶನ್ ಮತ್ತು ಟೀಮ್ ಹೊರಗೆ ಹೋಗಿದೆ. ವಾಪಾಸ್ ಬಂದಾಗ ದರ್ಶನ್ ಗೆ ಏನೋ ಮಿಸ್ ಹೊಡೀತಿರೋ ಸೂಕ್ಷ್ಮ ಮನಸ್ಸಿಗೆ ಬಂದಿದೆ. ಅವರದನ್ನು ನಿರ್ದೇಶಕ ತರುಣ್ ಸುಧೀರ್‌ಗೂ ಹೇಳಿದ್ದಾರೆ. ತರುಣ್ ಗೂ ದರ್ಶನ್ ಗಾದ ಅನುಭವವೇ ಆಗಿದೆ. ಅವರು ಕೂಡಲೇ ಪ್ಯಾಕ್ ಅಪ್ ಮಾಡಲು ಟೀಮ್ ಗೆ ಹೇಳಿದ್ದಾರೆ. ಇನ್ನುಳಿದ ಸೀನ್‌ಅನ್ನು ಬೇರೆ ಕಡೆ ಶೂಟ್ ಮಾಡಲು ಪ್ಲಾನ್ ಮಾಡಿಕೊಂಡಿದ್ದಾರೆ.

ಅವತ್ತು ಸೆಟ್ ಖಾಲಿ ಮಾಡಲಾಯ್ತು. ಅವತ್ತು ರಾತ್ರಿ ಮಳೆ ಅಂದರೆ ಮಳೆ. ಭೋರ್ಗರೆಯುತ್ತಿದ್ದ ಮಳೆ, ಹೆದರಿಕೆ ಹುಟ್ಟಿಸುವಂತಿದ್ದ ಭಯಂಕರ ಅಲೆಗಳು. ಅವರು ಸೆಟ್ ಹಾಕಿದ್ದ ಜಾಗವನ್ನೆಲ್ಲ ಅಲೆಗಳು ಆಕ್ರಮಿಸಿಕೊಂಡಿದ್ದವು. ಮರುದಿನ ಮಳೆಬಿಟ್ಟ ಸ್ವಲ್ಪ ಸಮಯದ ಬಳಿಕ ಮೊದಲು ಸೆಟ್‌ ಹಾಕಿದ ಜಾಗ ನೋಡಿ ಟೀಮ್‌ನವರ ಎದೆ ಧಸಕ್ ಅಂದಿದೆ. ಒಂದು ವೇಳೆ ಆ ರಾತ್ರಿ ಅಲ್ಲೇ ಇದ್ದಿದ್ದರೆ ಇಡೀ ಸೆಟ್, ಪ್ರಾಪರ್ಟಿ, ಕ್ಯಾಮರಾಗಳು ಎಲ್ಲವನ್ನೂ ಸಮುದ್ರ ಸ್ವಾಹಾ ಮಾಡಿಬಿಡುವ ಅಪಾಯವಿತ್ತು.

ದರ್ಶನ್ ಅವರು ಸಕಾಲಕ್ಕೆ ಎಚ್ಚರಿಸಿದ ಕಾರಣ ಅಪಾರ ನಷ್ಟ ತಪ್ಪಿ ಹೋಯಿತು. ಹಿಂದಿನ ರಾತ್ರಿಯ ವಾತಾವರಣ ನೋಡಿಯೇ ಅವರಿಗೆ ಪ್ರಕೃತಿ ಎಂದಿನಂತಿಲ್ಲ ಎಂಬುದರ ಅರಿವಾಗಿತ್ತು. ಕಹಿಯಾಗಿ ಅಪಾರ ನಷ್ಟ ತಂದೊಡ್ಡಬೇಕಿದ್ದ ಸನ್ನಿವೇಶವೊಂದು ದರ್ಶನ್ ಸಮಯ ಪ್ರಜ್ಞೆಯಿಂದ ತಪ್ಪಿ ಹೋಯಿತು. ಇಂಥಾ ಅಡೆತಡೆಗಳಿಂದ ತಪ್ಪಿಸಿಕೊಂಡು ಮಾ.11ಕ್ಕೆ ದರ್ಶನ್, ಆಶಾ ಭಟ್ ಅಭಿನಯದ ರಾಬರ್ಟ್ ತೆರೆಗೆ ಅಪ್ಪಳಿಸಲಿದೆ. ಡಿ ಬಾಸ್ ಅಭಿಮಾನಿಗಳ ಖುಷಿ ಮೇರೆ ಮೀರಲಿದೆ.

Source: Suvarna News