ಇಂದು ಸ್ಟ್ರಾಬೆರಿ ಮೂನ್​ ಗೋಚರಿಸುತ್ತಿದೆ! ಭಾರತದಲ್ಲಿ ಈ ವಿಸ್ಮಯವನ್ನು ನೋಡಬಹುದೇ?

Jun 24, 2021

ಸ್ಟ್ರಾಬೆರಿ ಹುಣ್ಣಿಮೆ ಜೂನ್​ 24 ಅಂದರೆ ಇಂದು ಗೋಚರಿಸಲಿದೆ. ಕಿತ್ತಳೆ ಮಂಡಲದಂತೆ ಕಂಡು ಬಂದು ನಂತರ ತಿಳಿ ಹಳದಿ ಬಣ್ಣಕ್ಕೆ ತಿರುಗುತ್ತದೆ. ತುಂಬಾ ಪ್ರಕಾಶಮಾನವಾಗಿ ದೊಡ್ಡದಾಗಿ ಕಾಣಿಸುತ್ತದೆ.

ಆಕಾಶದಲ್ಲಿ ನಡೆಯುವ ವಿಸ್ಮಯದ ವಿದ್ಯಮಾನಗಳು ಎಲ್ಲರನ್ನು ಬೆರಗುಗೊಳಿಸುವಂತೆ ಮಾಡುತ್ತದೆ. ಪ್ರಕೃತಿಯಲ್ಲಿನ ಕೆಲವು ವಿಸ್ಮಯಗಳು ಜಾದೂ ಆದಂತೆಯೇ! ನೋಡಲು ಸುಂದರ.. ಕೆಲವರು ಬಾರಿ ಅಶ್ವರ್ಯವನ್ನೂ ಹುಟ್ಟು ಹಾಕುವಂತಿರುತ್ತದೆ. ಅಂತಹುದೇ ಒಂದು ವಿಸ್ಮಯ ಆಕಾಶದಲ್ಲಿ ಇಂದು ಗೋಚರಿಸಲಿದೆ. ಅದೇ ಸ್ಟ್ರಾಬೆರಿ ಮೂನ್​.

ಕೆಲವು ವಿಭಿನ್ನ ರೀತಿಯ ಅಮವಾಸ್ಯೆ, ಹುಣ್ಣಿಮೆಯ ದಿನಗಳಿವೆ. ಅವುಗಳಲ್ಲಿ ರಕ್ತ ಚಂದ್ರ, ಸೂಪರ್​ಮೂನ್​, ನೀಲಿ ಚಂದ್ರ ಹೀಗೆ ಮುಂತಾದವುಗಳು. ಕೆಲವೊಮ್ಮೆ ಘಟಿಸುವ ಚಂದ್ರ ಗ್ರಹಣವನ್ನು ರಕ್ತ ಚಂದ್ರ ಎಂದೂ ಕರೆಯಲಾಗುತ್ತದೆ. ಹೀಗೆ ನಾನಾ ಕಾರಣಗಳಿಂದ ಕೆಲವು ವಿಸ್ಮಯಗಳು ಸಂಭವಿಸುತ್ತದೆ. ಅದೇ ರೀತಿ ಈ ಸ್ಟ್ರಾಬೆರಿ ಮೂನ್​ ಕೂಡಾ ಒಂದು ವಿಸ್ಮಯ ಗೋಚರ.

ಪ್ರತಿಯೊಂದ ಹುಣ್ಣಿಮೆ ಕೂಡಾ ಒಂದೊಂದು ವಿಭಿನ್ನ ಹೆಸರಿನಿಂದ ಕರೆಯಲ್ಪಡುತ್ತದೆ. ಚಂದ್ರನು ತನ್ನ ಕಕ್ಷೆಯಲ್ಲಿ ಸುತ್ತುತ್ತಾ ಭೂಮಿಗೆ ಅತಿ ಸಮೀಪದಲ್ಲಿ ಹಾದು ಹೋಗುತ್ತಾನೆ. ಹೀಗಾಗಿ ಚಂದ್ರ ಪ್ರಕಾಶಮಾನವಾಗಿ ದೊಡ್ಡದಾಗಿ ಕಾಣಿಸಿಕೊಳ್ಳುತ್ತಾನೆ.

ಇಂದು ಸ್ಟ್ರಾಬೆರಿ ಮೂನ್​ ಗೋಚರವಾಗುತ್ತಿದೆ. ಇದರೆ ಭಾರತದಲ್ಲಿ ವಿಶಿಷ್ಟ ಹೆಸರಿನ ಸ್ಟ್ರಾಬೆರಿ ಮೂನ್​ ಗೋಚರಿಸುವುದಿಲ್ಲ. ಉತ್ತರ ಅಮೇರಿಕಾದ ಭಾಗದಲ್ಲಿ ಸ್ಟ್ರಾಬೆರಿ ಹಣ್ಣು ಬೆಳೆಯುವ ಸಮಯ. ಈ ದಿನದ ನಂತರ ಸ್ಟ್ರಾಬೆರಿ ಕೊಯ್ಲು ಪ್ರಾರಂಭವಾಗುತ್ತದೆ. ಈ ಕಾರಣಕ್ಕಾಗಿ ಇದನ್ನು ಸ್ಟ್ರಾಬೆರಿ ಮೂನ್​ ಎಂದು ಕರೆಯಲಾಗುತ್ತದೆ.

ಸ್ಟ್ರಾಬೆರಿ ಹುಣ್ಣಿಮೆ ಜೂನ್​ 24 ಅಂದರೆ ಇಂದು ಗೋಚರಿಸಲಿದೆ. ಕಿತ್ತಳೆ ಮಂಡಲದಂತೆ ಕಂಡು ಬಂದು ನಂತರ ತಿಳಿ ಹಳದಿ ಬಣ್ಣಕ್ಕೆ ತಿರುಗುತ್ತದೆ. ತುಂಬಾ ಪ್ರಕಾಶಮಾನವಾಗಿ ದೊಡ್ಡದಾಗಿ ಕಾಣಿಸುತ್ತದೆ. ಇದಕ್ಕೆ ಸ್ಟ್ರಾಬೆರಿ ಮೂನ್​, ಬ್ಲೂಮಿಂಗ್​ ಮೂನ್​, ಗ್ರೀನ್​ ಕಾರ್ನ್​ ಮೂನ್​, ಆನರ್​ ಮೂನ್​, ಬರ್ತ್​ ಮೂನ್​, ಎಗ್​ ಲೇಯಿಂಗ್​ ಮೂನ್​, ಹ್ಯಾಚಿಂಗ್​ ಮೂನ್​ ಎಂದೆಲ್ಲಾ ಹೆಸರುಗಳಿವೆ. ವಿವಿಧ ಪ್ರದೇಶಗಳಲ್ಲಿ ವಿವಿಧ ಹೆಸರುಗಳಿಂದ ಕರೆಯಲಾಗುತ್ತದೆ. ಆದರೆ, ಭಾತರದಲ್ಲಿ ಸ್ಟ್ರಾಬೆರಿ ಮೂನ್​ಅನ್ನು ನೋಡಲು ಸಾಧ್ಯವಿಲ್ಲ. ಹಾಗಾಗಿ ಆನ್​ಲೈನ್​ ಮೂಲಕ ವಿಸ್ಮಯವನ್ನು ನೋಡಬಹುದು.

Source: Tv9Kannada