ಇಂದಿನಿಂದ ಮೈಸೂರಲ್ಲಿ ದಸರಾ ವಸ್ತು ಪ್ರದರ್ಶನ

Nov 26, 2021

ಮೈಸೂರು,ನ.25(ಆರ್‍ಕೆ)-ಕೋವಿಡ್ ಸೋಂಕಿನ ಭೀತಿಯಿಂದ ಕಳೆದ 2 ವರ್ಷ ಗಳಿಂದ ಬಂದ್ ಆಗಿದ್ದ ಮೈಸೂರು ದಸರಾ ವಸ್ತುಪ್ರದರ್ಶನ ನಾಳೆ(ನ.26)ಯಿಂದ ಆರಂಭವಾಗಲಿದೆ. ಮೈಸೂರಿನ ದೊಡ್ಡಕೆರೆ ಮೈದಾನದ ದಸರಾ ವಸ್ತು ಪ್ರದರ್ಶನ ಆವರಣದಲ್ಲಿ ಶುಕ್ರವಾರ ಸಂಜೆ 6 ಗಂಟೆಗೆ ಕರ್ನಾಟಕ ವಸ್ತು ಪ್ರದರ್ಶನ ಪ್ರಾಧಿಕಾರದ ಅಧ್ಯಕ್ಷ ಹೇಮಂತ್‍ಕುಮಾರ್‍ಗೌಡ ಉಪಸ್ಥಿತಿಯಲ್ಲಿ ಸಾಂಪ್ರದಾಯಿಕ ವಾಗಿ 66 ದಿನಗಳ ವಸ್ತು ಪ್ರದ ರ್ಶನಕ್ಕೆ ಚಾಲನೆ ದೊರೆಯಲಿದೆ. ವಸ್ತು ಪ್ರದರ್ಶನದಲ್ಲಿ ಒಟ್ಟು 142 ಮಳಿಗೆಗಳನ್ನು ತೆರೆಯಲಿದ್ದು, ಈಗಾಗಲೇ 100ಕ್ಕೂ ಅಧಿಕ ವಿವಿಧ ಮಳಿಗೆಗಳು ಸಿದ್ಧವಾಗಿವೆ. ಮೂರ್ನಾಲ್ಕು ದಿನಗಳಲ್ಲಿ ಉಳಿದ 42 ಮಳಿಗೆಗಳನ್ನು ತೆರೆಯಲಾಗುವುದು. ಕೈದಿಗಳು ತಯಾರಿಸಿದ ಫ್ಲೋರ್ ಮ್ಯಾಟ್ ಪ್ರದರ್ಶನ ಮತ್ತು ಮಾರಾಟ ಮಾಡಲು ಉಚಿತ ಮಳಿಗೆ ಕಲ್ಪಿಸಲಾಗಿದೆ ಎಂದರು.

ಗುಡಿ ಕೈಗಾರಿಕೆ, ಕರಕುಶಲ ವಸ್ತು, ಕುಡಿಕೆ ತಯಾರಿಕೆ ಸಂಬಂಧ ತರಬೇತಿ ಮತ್ತು ಮಾರಾಟಕ್ಕೆ ವಸ್ತುಪ್ರದರ್ಶನದಲ್ಲಿ ವ್ಯವಸ್ಥೆ ಮಾಡಲಾಗಿದೆ. ಆಟಿಕೆ, ವಸ್ತ್ರ, ಗೃಹೋಪ ಯೋಗಿ ವಸ್ತುಗಳು, ಎಲೆಕ್ಟ್ರಾನಿಕ್ ಉಪಕರಣ, ತಿಂಡಿ-ತಿನಿಸು ಮುಂತಾದ ಅಂಗಡಿ ಮಳಿಗೆಗಳನ್ನು ಸಿದ್ಧಪಡಿಸಲಾಗಿದೆ ಎಂದು ಹೇಮಂತ್‍ಕುಮಾರ್‍ಗೌಡ ತಿಳಿಸಿದ್ದಾರೆ. ಭಾನುವಾರದಿಂದ ಮನರಂಜನಾ ಕ್ರೀಡೆಗಳೂ ಆರಂಭವಾಗುವುದರಿಂದ ವಸ್ತುಪ್ರದರ್ಶನಕ್ಕೆ ಬರುವ ಸ್ಥಳೀಯರು, ಪ್ರವಾಸಿಗರು ಹಾಗೂ ಮಕ್ಕಳಿಗೆ ಮನರಂಜನೆಗೆ ಅವಕಾಶ ಕಲ್ಪಿಸಲಾಗಿದೆ ಎಂದರು. ವಯಸ್ಕರಿಗೆ 30 ರೂ. ಹಾಗೂ ಮಕ್ಕಳಿಗೆ 20 ರೂ. ಪ್ರವೇಶ ಶುಲ್ಕ ನಿಗದಿಪಡಿಸಲಾಗಿದೆ. ವಾಹನಗಳ ನಿಲುಗಡೆ ಶುಲ್ಕವನ್ನು ನ.26ರಂದು ನಿರ್ಧರಿಸಲಾಗುವುದೆಂದು ವಸ್ತುಪ್ರದರ್ಶನ ಗುತ್ತಿಗೆ ಪಡೆದಿರುವ ಫನ್‍ವಲ್ರ್ಡ್ ಸಂಸ್ಥೆ ಮುಖ್ಯ ಸ್ಥರು ಹೇಳಿದ್ದಾರೆ ಎಂದರು. 66 ದಿನಗಳ ಕಾಲ ವಸ್ತುಪ್ರದರ್ಶನ ನಡೆಸಲು ಫನ್ ವಲ್ರ್ಡ್ ಸಂಸ್ಥೆಗೆ 62 ಲಕ್ಷ ರೂ.ಗಳಿಗೆ ವಹಿಸಲಾಗಿದೆ. ಈ ಹಣವನ್ನು ಸಂಸ್ಥೆಯು ಪ್ರಾಧಿಕಾರಕ್ಕೆ ಪಾವ ತಿಸಿದೆ. ವಿದ್ಯುತ್, ಜನರೇಟರ್, ನೀರು ಮತ್ತಿತರ ಶುಲ್ಕವನ್ನು ಅವರೇ ಪಾವತಿಸಬೇಕು. ಸ್ವಚ್ಛತೆ, ಭದ್ರತೆ ಹೀಗೆ ಪ್ರತಿಯೊಂದು ವ್ಯವಸ್ಥೆಯನ್ನು ಅವರೇ ನಿರ್ವಹಿಸಬೇಕೆಂಬ ಷರತ್ತಿನೊಂ ದಿಗೆ ಒಪ್ಪಿಸಲಾಗಿದೆ. ಹಾಗಾಗಿ, ಪ್ರಾಧಿಕಾರಕ್ಕೆ ಯಾವ ಖರ್ಚುಗಳೂ ಬರುವುದಿಲ್ಲ ಎಂದು ತಿಳಿಸಿದ್ದಾರೆ.

Source: mysoremithra