ಭಾರತೀಯ ವಾಯುಪಡೆ ರಾಜಸ್ಥಾನದಲ್ಲಿ ನಡೆದ ದುರಂತ ವಿಮಾನ ಅಪಘಾತದ ಕುರಿತು ಸಮಗ್ರ ವಿಚಾರಣೆ ನಡೆಯುವ ತನಕ ಎಲ್ಲಾ ಮಿಗ್-21 ವಿಮಾನಗಳ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಲು ಆದೇಶಿಸಿದೆ. ಮೇ 8ರಂದು ಸುರಾತ್‌ಘರ್ ವಾಯುನೆಲೆಯ ಬೈಸನ್ ವಿಮಾನ ಹನುಮಾನ್ ಘರ್ ಗ್ರಾಮದಲ್ಲಿ ಪತನಗೊಂಡು, ಮೂವರು ಸಾವನ್ನಪ್ಪಿದ್ದರು.
ಮಿಗ್-21 ವಿಮಾನಗಳು ಪರಿಚಯಿಸಲ್ಪಟ್ಟ ಬಳಿಕ ಅವುಗಳು 400ಕ್ಕೂ ಹೆಚ್ಚು ಅಪಘಾತಗಳಿಗೆ ಒಳಗಾಗಿವೆ. ಕಳೆದ ಐವತ್ತಕ್ಕೂ ಹೆಚ್ಚು ವರ್ಷಗಳ ಅವಧಿಯಲ್ಲಿ ಮಿಗ್-21 ವಿಮಾನದ ಬೇರೆ ಬೇರೆ ಆವೃತ್ತಿಗಳನ್ನು ಭಾರತೀಯ ವಾಯುಪಡೆಗೆ ಸೇರ್ಪಡೆಗೊಳಿಸಲಾಗಿದೆ. ಆದರೆ ಈಗ ಆ ವಿಮಾನಗಳು ನಿವೃತ್ತಿಯ ಪ್ರಕ್ರಿಯೆಯ ಹಂತದಲ್ಲಿವೆ. ಪ್ರಸ್ತುತ ಭಾರತೀಯ ವಾಯುಪಡೆಯ ಬಳಿ ಮಿಗ್-21ರ ಕೇವಲ ಮೂರು ಸ್ಕ್ವಾಡ್ರನ್‌ಗಳು ಮಾತ್ರವೇ ಇದ್ದು, ಅವುಗಳನ್ನೂ 2025ರ ಆರಂಭದಲ್ಲಿ ನಿವೃತ್ತಿಗೊಳಿಸಲಾಗುತ್ತದೆ.
ಮಿಗ್-21 ಯಾಕೆ ಅಪಘಾತಕರ ವಿಮಾನ ಎಂಬ ಅಪಕೀರ್ತಿ ಪಡೆಯಿತು?
1950ರ ದಶಕದಲ್ಲಿ ಮೊದಲ ಬಾರಿಗೆ ಪರಿಚಯಿಸಲಾದ ಮಿಗ್-21 ಒಂದು ಸಿಂಗಲ್ ಇಂಜಿನ್, ಸೂಪರ್ ಸಾನಿಕ್ ವಿಮಾನವಾಗಿದೆ. ಹೆಚ್ಚಿನ ಸಂಖ್ಯೆಯಲ್ಲಿ ಉತ್ಪಾದಿಸಲ್ಪಟ್ಟ ಈ ವರ್ಗದ ಮೊದಲ ಯುದ್ಧ ವಿಮಾನ ಎಂಬ ಕೀರ್ತಿಗೆ ಮಿಗ್-21 ಪಾತ್ರವಾಗಿದ್ದು, ಇಂದಿಗೂ ಜಗತ್ತಿನಾದ್ಯಂತ ವಿವಿಧ ವಾಯುಪಡೆಗಳು ಇದನ್ನು ಬಳಸುತ್ತಿವೆ. ಆದರೆ, ಮಿಗ್-21 ಅಪಾರವಾಗಿ ಅಪಘಾತಕ್ಕೀಡಾಗುವ ವಿಮಾನ ಎಂಬ ಅಪಖ್ಯಾತಿಗೂ ಪಾತ್ರವಾಗಿದ್ದು, ‘ಹಾರಾಡುವ ಶವಪೆಟ್ಟಿಗೆ’ ಎಂಬ ಅಡ್ಡ ಹೆಸರೂ ಪಡೆದುಕೊಂಡಿದೆ.
ಮಿಗ್-21 ಅಪಘಾತಕ್ಕೆ ತುತ್ತಾಗುವ ವಿಮಾನ ಎಂದು ಪರಿಗಣಿಸಲು ಹಲವು ಕಾರಣಗಳೂ ಇವೆ. ಅದಕ್ಕೆ ಒಂದು ಪ್ರಮುಖ ಕಾರಣವೆಂದರೆ, ಅದೊಂದು ಹಳೆಯದಾದ ಯುದ್ಧ ವಿಮಾನ. ಮಿಗ್-21 ಅನ್ನು ಮೊದಲ ಬಾರಿಗೆ 1959ರಲ್ಲಿ ಪರಿಚಯಿಸಲಾಗಿದ್ದು, ಕಳೆದ 60 ವರ್ಷಗಳಿಂದ ಸೇವೆ ಸಲ್ಲಿಸುತ್ತಿದೆ. ಅಂದರೆ, ಈಗ ಬಳಕೆಯಲ್ಲಿರುವ ಬಹುತೇಕ ಮಿಗ್-21 ಯುದ್ಧ ವಿಮಾನಗಳು ತಮ್ಮ ಮೂಲ ಆಯುಷ್ಯವನ್ನು ಕಳೆದು ಕಾರ್ಯಾಚರಿಸುತ್ತಿವೆ. ವಿಮಾನಗಳು ಹಳೆಯದಾಗುತ್ತಾ ಬಂದಂತೆ ಅವುಗಳು ಹೆಚ್ಚು ಹೆಚ್ಚು ಯಾಂತ್ರಿಕ ಸಮಸ್ಯೆಗಳಿಗೆ ಒಳಗಾಗುತ್ತವೆ. ಅದರ ಪರಿಣಾಮವಾಗಿ ಅವುಗಳು ಅಪಘಾತಕ್ಕೆ ಒಳಗಾಗಬಹುದು.
ಮಿಗ್-21 ಹೆಚ್ಚಾಗಿ ಅಪಘಾತಕ್ಕೆ ಒಳಗಾಗುವ ವಿಮಾನ ಎನ್ನಲು ಇನ್ನೊಂದು ಕಾರಣವೆಂದರೆ ಅದೊಂದು ಬಹುತೇಕ ಸರಳವಾದ ವಿಮಾನವಾಗಿದೆ. ಮಿಗ್-21 ಅನ್ನು ಸುಲಭವಾಗಿ ಹಾರಾಟ ನಡೆಸುವಂತೆ ಮತ್ತು ನಿರ್ವಹಿಸಲು ಸಾಧ್ಯವಾಗುವಂತೆ ವಿನ್ಯಾಸಗೊಳಿಸಲಾಗಿದೆ. ಆದ್ದರಿಂದಲೇ ಇದು ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರಗಳ ಆದ್ಯತೆಯ ವಿಮಾನವಾಗಿತ್ತು. ಆದರೆ ಇದು ಸರಳ ವಿಮಾನವಾಗಿರುವ ಕಾರಣದಿಂದ ಇಲ್ಲಿ ದುಬಾರಿ ವಿಮಾನಗಳಿಗೆ ಹೋಲಿಸಿದರೆ ಹೆಚ್ಚಿನ ಅವಕಾಶಗಳು ಲಭ್ಯವಿಲ್ಲ. ಅಂದರೆ, ಮಿಗ್-21 ವಿಮಾನ ಹಾರಾಟ ನಡೆಸುವಾಗ ಪೈಲಟ್‌ಗಳು ತಪ್ಪು ಮಾಡುವ ಸಾಧ್ಯತೆಗಳು ಹೆಚ್ಚಾಗಿದ್ದು, ಅಪಘಾತಗಳಾಗುವ ಸಂಭಾವ್ಯತೆಯೂ ಹೆಚ್ಚಾಗಿದೆ.
ಅಂತಿಮವಾಗಿ, ಮಿಗ್-21 ಒಂದು ಪ್ರಮುಖವಾದ ಕಾರ್ಯಾತ್ಮಕ ವಿಮಾನವಾಗಿದೆ. ಇದು ಮ್ಯಾಕ್ 2.0 ವೇಗದಲ್ಲಿ, ಅಂದರೆ ಶಬ್ದದ ವೇಗಕ್ಕಿಂತ ಎರಡು ಪಟ್ಟು ಹೆಚ್ಚಿನ ವೇಗದಲ್ಲಿ ಚಲಿಸಬಲ್ಲದಾಗಿದೆ. ಈ ಅಧಿಕ ವೇಗ ಮಿಗ್-21 ವಿಮಾನವನ್ನು ಒಂದು ಕುಶಲ ವಿಮಾನವನ್ನಾಗಿಸಿದೆ. ಆದರೆ ಈ ವೇಗವೇ ವಿಮಾನವನ್ನು ನಿಯಂತ್ರಿಸುವುದು ಕೆಲವೊಮ್ಮೆ ಕಷ್ಟಕರವಾಗುವಂತೆಯೂ ಮಾಡುತ್ತದೆ. ಇದರ ಪರಿಣಾಮವಾಗಿ ಅಪಘಾತಗಳು ಸಂಭವಿಸುವ ಸಾಧ್ಯತೆಗಳಿವೆ. ಅದರಲ್ಲೂ ಪೈಲಟ್ ಹೆಚ್ಚಿನ ತರಬೇತಿ ಹೊಂದಿಲ್ಲವಾದರೆ ಈ ಅಪಘಾತದ ಸಾಧ್ಯತೆಗಳು ಇನ್ನಷ್ಟು ಹೆಚ್ಚಾಗಬಲ್ಲವು.
ಈ ಎಲ್ಲ ಅಂಶಗಳ ಪರಿಣಾಮವಾಗಿ, ಮಿಗ್-21 ವಿಮಾನ ಅತಿಹೆಚ್ಚು ಅಪಘಾತ ದರ ಹೊಂದಿದೆ. ಏವಿಯೇಷನ್ ಸೊಸೈಟಿ ನೆಟ್‌ವರ್ಕ್ ಸಂಸ್ಥೆಯ ಪ್ರಕಾರ, ಮಿಗ್-21 ವಿಮಾನ 1,000ಕ್ಕೂ ಹೆಚ್ಚು ಅಪಘಾತಗಳಿಗೆ ಒಳಗಾಗಿದ್ದು, ಇದರಲ್ಲಿ 200ಕ್ಕೂ ಹೆಚ್ಚು ಜನರು ಪ್ರಾಣ ಕಳೆದುಕೊಂಡಿದ್ದಾರೆ. ಇದು ಮಿಗ್-21 ವಿಮಾನವನ್ನು ವೈಮಾನಿಕ ಇತಿಹಾಸದಲ್ಲೇ ಅತಿಹೆಚ್ಚು ಅಪಘಾತಕ್ಕೆ ಒಳಗಾದ ವಿಮಾನ ಎಂಬ ಅಪಕೀರ್ತಿ ಪಡೆಯುವಂತೆ ಮಾಡಿದೆ.
ಇಷ್ಟೊಂದು ಅಪಘಾತಗಳ ದಾಖಲೆಯ ಹೊರತಾಗಿಯೂ, ಮಿಗ್-21 ವಿಮಾನವನ್ನು ಇಂದಿಗೂ ಜಗತ್ತಿನಾದ್ಯಂತ ವಿವಿಧ ವಾಯುಪಡೆಗಳು ಬಳಸುತ್ತಿವೆ. ಇದು ಕಾರ್ಯಾಚರಿಸಲು ಮತ್ತು ನಿರ್ವಹಿಸಲು ಹೆಚ್ಚು ವೆಚ್ಚದಾಯಕವಲ್ಲದಿರುವುದೂ ಇದಕ್ಕೆ ಕಾರಣವಾಗಿದೆ. ಆದರೆ, ಮಿಗ್-21ರ ಅಪಾರ ಅಪಘಾತಗಳು ಕಳವಳಕಾರಿ ವಿಚಾರವಾಗಿದೆ. ಮುಂದಿನ ದಿನಗಳಲ್ಲಿ ಮಿಗ್-21 ಬದಲಿಗೆ ಹೆಚ್ಚು ಸುರಕ್ಷಿತವಾದ, ಆಧುನಿಕ ವಿಮಾನಗಳು ಬಳಕೆಗೆ ಬರುವ ಸಾಧ್ಯತೆಗಳು ಹೆಚ್ಚಿವೆ.