ಆನೆಗಳ ಕುರಿತ ರಮೇಶ್ ಉತ್ತಪ್ಪ ಅವರ 4 ಕೃತಿಗಳ ಬಿಡುಗಡೆ

Oct 5, 2021

ಮೈಸೂರು, ಅ.4(ಎಂಕೆ)- ವನ್ಯಜೀವಿ ಸಪ್ತಾಹ ಅಂಗವಾಗಿ ಆನೆಗಳ ಕುರಿತು ಪತ್ರ ಕರ್ತ ಐತಿಚಂಡ ರಮೇಶ್ ಉತ್ತಪ್ಪ ಅವರು ಬರೆದಿರುವ ‘ಆನೆ ಲೋಕದ ವಿಸ್ಮಯ’, ‘ಕುಶಾ ಕೀ ಕಹಾನಿ’, ‘ಅಭಿಮನ್ಯು-ದಿ ಗ್ರೇಟ್’, ‘ದಿ ಟಾಕಿಂಗ್ ಎಲಿಫೆಂಟ್’ ಕೃತಿಗಳನ್ನು ಸೋಮ ವಾರ ಲೋಕಾರ್ಪಣೆಗೊಳಿಸಲಾಯಿತು.

ಮೈಸೂರಿನ ಮುಕ್ತ ಗಂಗೋತ್ರಿಯ ಕಾವೇರಿ ಸಭಾಂಗಣದಲ್ಲಿ ಮುಕ್ತ ವಿವಿ, ಅರಣ್ಯ ಇಲಾಖೆ, ವೈಲ್ಡ್‍ಲೈಫ್ ಕನ್ಸರ್‍ವೇಷನ್ ಫೌಂಡೇಷನ್ ಹಾಗೂ ಅಕ್ಷರ ಮಂಟಪ ಪ್ರಕಾ ಶನ ಸಹಯೋಗದಲ್ಲಿ ಆಯೋಜಿಸಿದ್ದ ಕೃತಿ ಗಳ ಬಿಡುಗಡೆ ಸಮಾರಂಭದಲ್ಲಿ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಕಾರಿ (ವನ್ಯ ಜೀವಿ ವಿಭಾಗ) ವಿಜಯಕುಮಾರ್ ಗೋಗಿ ನಾಲ್ಕು ಕೃತಿಗಳನ್ನು ಬಿಡುಗಡೆ ಮಾಡಿದರು.

ಬಳಿಕ ಮಾತನಾಡಿದ ಅವರು, ಆನೆ ಭಾರತದ ಸಂಸ್ಕøತಿಯ ಒಂದು ಭಾಗ. ಆನೆ, ಹುಲಿಗಳು ನಮ್ಮ ಭವಿಷ್ಯದ ಬೇಡಿಕೆಗಳನ್ನು ಪೂರೈಸುವ ಜೈವಿಕ ಭಂಡಾರ. ಅವುಗಳ ರಕ್ಷಣೆಯು ನಮಗೆ ಆಪತ್ತಿನ ಕಾಲದ ವಿಮೆ ಯಾಗಿರಲಿದೆ. ನಮ್ಮ ಸಂಸ್ಕೃತಿ ಭಾಗವಾಗಿ ಆನೆ ಸೇರಿಕೊಂಡಿದೆ. ಆನೆ ಬಿಟ್ಟು ಇರುವು ದನ್ನು ಊಹಿಸಲೂ ಸಾಧ್ಯವಿಲ್ಲ ಎಂದರು.

ಸಾಹಿತ್ಯ, ಚಿತ್ರಕಲೆ, ಶಿಲ್ಪಕಲೆಯಲ್ಲಿ ವಸ್ತು ವಿಷಯವಾಗಿರುವ ಆನೆಗಳ ಕುರಿತು ಪುರಾಣಗಳಲ್ಲಿಯೂ ಉಲ್ಲೇಖವಿದೆ. ಆನೆ ಸಿರಿವಂತಿಕೆಯ ಮತ್ತು ಶಕ್ತಿಯ ಸಂಕೇ ತವೂ ಆಗಿತ್ತು. ಆದ್ದರಿಂದಲೇ ರಾಜರು ಗಜಪಡೆಯನ್ನು ಹೆಚ್ಚಾಗಿ ಹೊಂದಿರುತ್ತಿ ದ್ದರು. ಬಲಿಷ್ಟ ಗಜಪಡೆಯುಳ್ಳ ರಾಜರನ್ನು ಸೋಲಿಸುವುದು ಕಷ್ಟವಾಗುತ್ತಿತ್ತು ಎಂಬು ದಕ್ಕೆ ಇತಿಹಾಸದಲ್ಲಿ ನಡೆದಿರುವ ಯುದ್ಧ ಗಳು ಸಾಕ್ಷಿಯಾಗಿವೆ. ದಸರಾ ಉತ್ಸವ, ಕೆಲ ಧಾರ್ಮಿಕ ಕೈಂಕರ್ಯಗಳಿಗೂ ಆನೆ ಬೇಕು. ಹೀಗೆ ಬದುಕಿನ ಅವಿಭಾಜ್ಯವಾಗಿರುವ ಆನೆ ಗಳ ಇಂದಿನ ಸ್ಥಿತಿ ಏನಾಗಿದೆ ಎಂಬುದನ್ನು ಆಲೋಚಿಸಬೇಕಿದೆ ಎಂದು ಹೇಳಿದರು.

ಒಬ್ಬೊಬ್ಬ ರಾಜರ ಬಳಿ ಇದ್ದಂತಹ ಆನೆ ಗಳು ಇಂದಿಲ್ಲ. ಕಾಡಿನಲ್ಲಿ ಆಹಾರವಿಲ್ಲದೆ ಆನೆಗಳು ನಾಡಿಗೆ ಬರುತ್ತವೆ ಎಂಬುದು ಸರಿಯಲ್ಲ. ಆನೆಗಳು ಶೇ.1ರಷ್ಟು ಕೃಷಿ ಭೂಮಿ ಇದ್ದಾಗಿನಿಂದಲೂ ಕಾಡಿನಿಂದ ನಾಡಿಗೆ ಆನೆಗಳು ಬರುತ್ತಿದ್ದವು. ಜಿಂಕೆ ಹಸಿರು ಹುಲ್ಲನ್ನು ಅವಲಂಬಿಸಿದಂತೆ ಹುಲಿಗಳು ಜಿಂಕೆಯನ್ನು ಅವಲಂಬಿಸಿರುತ್ತವೆ. ಇದರಲ್ಲಿ ಯಾವುದೇ ಕೊರತೆಯಾದರೂ ಸ್ವಾಭಾ ವಿಕ ಅಸಮತೋಲನ ಉಂಟಾಗುತ್ತದೆ. ಸಮತೋಲನ ದೃಷ್ಟಿಯಿಂದ ಕಾಡಿನಲ್ಲಿ ಹೆಚ್ಚೆಚ್ಚು ಪ್ರಾಣಿಗಳ ಇರುವಿಕೆ ಬಹಳ ಮುಖ್ಯ. ಇಂದು ದೇಶದ ಶೇ.80 ಜಾಗವನ್ನು ನಾವು ಗಳೇ ಆವರಿಸಿದ್ದು, ಪ್ರಾಣಿಗಳಿಗಾಗಿರುವ ಶೇ. 20ರಷ್ಟು ಜಾಗದ ಮೇಲೂ ಕಣ್ಣಿಟ್ಟಿದ್ದೇವೆ. ಪ್ರಾಣಿಗಳಿರುವ ಜಾಗಕ್ಕೆ ನಾವುಗಳು ಹೋದರೆ ಅವುಗಳು ಮತ್ತೇಲ್ಲಿಗೆ ಹೋಗ ಬೇಕು. ಕಾಡಿನ ರಕ್ಷಣೆ ಜೊತೆಗೆ ಪ್ರಾಣಿಗಳ ಸಂರಕ್ಷಣೆ ನಮ್ಮೆಲ್ಲರ ಜವಾಬ್ದಾರಿಯಾಗಿದೆ ಎಂದು ತಿಳಿಸಿದರು.

ರಂಗಾಯಣ ನಿರ್ದೇಶಕ ಅಡ್ಡಂಡ ಸಿ. ಕಾರ್ಯಪ್ಪ ಮಾತನಾಡಿ, ಪ್ರಾಣಿಗಳ ಬಗ್ಗೆ ಮಾತನಾಡುತ್ತೇವೆ. ಅನುಕಂಪ ತೋರಿಸು ತ್ತೇವೆ. ಅದರ ಜೊತೆಗೆ ಕೊಂದು ತಿನ್ನುತ್ತೇವೆ. ಮನುಷ್ಯ ಮತ್ತು ಪ್ರಾಣಿಗಳ ನಡುವೆ ಸಂಘರ್ಷ ನಡೆಯುತ್ತಲೇ ಇದೆ. ಅರಣ್ಯ ನಾಶ ಮಾಡಿ ದರೆ, ಕಾಡು ಪ್ರಾಣಿಗಳು ಎಲ್ಲಿತಾನೇ ಹೋಗುತ್ತವೆ. ಬೇರೆ ದಾರಿ ಇಲ್ಲದೆ ನಮ್ಮ ಅಂಗಳಕ್ಕೆ ಬರುತ್ತವೆ. ಇತ್ತೀಚೆಗೆ ಕಾಡು ಪ್ರಾಣಿಗಳ ಬೇಟೆ ಕಡಿಮೆಯಾಗಿದೆ. ಕಾಡಿ ನಲ್ಲಿ ಪ್ರಾಣಿಗಳ ಜೊತೆಗೆ ಅಲ್ಲಿರುವವ ರಿಗೂ ಕಷ್ಟಗಳು ಎದುರಾಗುತ್ತವೆ. ದಸರಾ ವೇಳೆ ಮಾತ್ರವೇ ಆನೆಗಳಿಗೂ, ಮಾವುತರಿಗೂ ಒಳ್ಳೆಯ ಆರೈಕೆ. ಕಾಡಿಗೆ ಮರಳಿದ ಮೇಲೆ ಮತ್ತದೇ ಕಷ್ಟದ ದಿನಗಳನ್ನು ಎದುರಿಸ ಬೇಕು ಎಂದು ಬೇಸರ ವ್ಯಕ್ತಪಡಿಸಿದರು.

ಇದೇ ವೇಳೆ ದಸರಾ ಅಂಬಾರಿ ಹೊರುವ ಆನೆ ಅಭಿಮನ್ಯು ಮಾವುತ ವಸಂತ, ಪತ್ರಿಕಾ ಛಾಯಾಗ್ರಾಹಕ ನಾಗೇಶ್ ಪಾಣ ತ್ತಲೆ ಅವರನ್ನು ಸನ್ಮಾನಿಸಲಾಯಿತು. ಮುಕ್ತ ವಿವಿ ಕುಲಸಚಿವ ಪ್ರೊ.ಆರ್. ರಾಜಣ್ಣ ಸಮಾರಂಭವನ್ನು ಉದ್ಘಾಟಿಸಿದರು.

ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಹೀರಾಲಾಲ್, ಸಿಸಿಎಫ್ ಜಗತ್‍ರಾಮ್, ಡಬ್ಲ್ಯೂಸಿಎಫ್ ರಾಜ್‍ಕುಮಾರ್ ದೇವ ರಾಜೇ ಅರಸ್, ಕರ್ನಾಟಕ ವನ್ಯಜೀವಿ ಮಂಡಳಿ ಸದಸ್ಯ ವಿನೋದಕುಮಾರ್ ನಾಯ್ಕ್, ಮೃಗಾಲಯದ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಬಿ.ಪಿ.ರವಿ, ಅನು ವಾದಕಿ ಕೆ.ಆರ್.ಪ್ರೇಮಲತಾ, ಪ್ರಕಾಶಕ ಚೇತನ್ ಕಣಬೂರು ಸೇರಿದಂತೆ ಮತ್ತಿತ ರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

Source:mysurumithra