ಅ.5ರಂದು ಮಹಿಷಾ ದಸರಾ ಆಚರಣೆ

Sep 14, 2021

ಮಹಿಷಾಸುರ ಉತ್ಸವ ಮೂರ್ತಿ ಅನಾ ವರಣ, ಪುಷ್ಪಾರ್ಚನೆ ಮತ್ತು ನುಡಿ ನಮನ ಸಲ್ಲಿಸಲಿದ್ದೇವೆ ಎಂದು ಮಹಿಷಾ ದಸರಾ ಅನುಷ್ಠಾನ ಸಮಿತಿ ತಿಳಿಸಿದೆ.

ಸಂವಿಧಾನ ವಿರೋಧಿಗಳು 2019 ರಿಂದಲೂ ಮಹಿಷಾ ದಸರಾ ಆಚರಣೆಗೆ ಅಡ್ಡಿಪಡಿಸುತ್ತಿದ್ದಾರೆ. ಆದರೆ ಕೋವಿಡ್ ಮಾರ್ಗಸೂಚಿ ಆಧರಿಸಿ, ಕಾನೂನು ಸುವ್ಯವಸ್ಥೆಗೆ ಧಕ್ಕೆಯಾಗದಂತೆ ನಮ್ಮ ಕರ್ತವ್ಯದ ಭಾಗವಾಗಿ ಆಚರಿಸುತ್ತಿದ್ದೇವೆ. ಇದು ಪರ್ಯಾಯ ದಸರಾ ಅಲ್ಲ. ಮೂಲ ನಿವಾಸಿಗಳ ದಸರಾ. ಹಾಗಾಗಿ ಸರ್ಕಾರದ ಅನುಮತಿ ಕೇಳುತ್ತೇವೆ. ಅನುಮತಿ ನೀಡಿದರೂ ಸರಿ, ನೀಡದಿದ್ದರೂ ನಾವು ಮಹಿಷಾ ದಸರಾ ಆಚರಿಸುತ್ತೇವೆ ಎಂದು ಸಮಿತಿಯ ಪ್ರೊ. ಮಹೇಶ್‍ಚಂದ್ರ ಗುರು ಪತ್ರಕರ್ತರ ಭವನ ದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಪುರಾಣವನ್ನು ನಂಬಿ ಕೆಟ್ಟವರೇ ಹೆಚ್ಚು. ಅದೇ ರೀತಿ ಇತಿಹಾಸವನ್ನು ನಂಬಿ ಉದ್ಧಾರ ವಾಗಿರುವವರೂ ಹೆಚ್ಚಾಗಿದ್ದಾರೆ. ಇತಿ ಹಾಸಕ್ಕೆ ಗೌರವ ಕೊಡುವ ಉದ್ದೇಶವೇ ಮಹಿಷಾ ದಸರಾ ಆಚರಣೆ. ಚಾಮುಂಡಿ ಎಷ್ಟು ಸತ್ಯವೋ, ಮಹಿಷಾನೂ ಅಷ್ಟೇ ಸತ್ಯ. ಮಾರ್ಕಂಡೇಯ ಪುರಾಣದಲ್ಲಿ ಚಾಮುಂ ಡೇಶ್ವರಿ ಮಹಿಷಾನನ್ನು ವಧಿಸಿದ ಎಂದು ಕಟ್ಟುಕತೆ ಸೃಷ್ಟಿಸಲಾಗಿದೆ. ಮೈಸೂರಿನಿಂದ ವಿಂದ್ಯಪರ್ವತದವರೆಗೂ ಮಹಿಷಾ ಮಂಡಲ ವ್ಯಾಪಿಸಿದ್ದ ಬಗ್ಗೆ ಇತಿಹಾಸಗಳು ಹೇಳುತ್ತಿವೆ. ಇಂದಿನ ಚಾಮುಂಡಿಬೆಟ್ಟ ಅಂದಿನ ಮಹಿಷಾಗಿರಿ, ಮಹಾಬಲಗಿರಿ. ಮಹಿಷಾ ಇತಿಹಾಸದ ಸಂಕೇತ ಎಂದರು.
ವಿಚಾರವಾದಿ ಪ್ರೊ.ಕೆ.ಎಸ್.ಭಗವಾನ್ ಮಾತನಾಡಿ, ಮಹಿಷಾ ಜನೋದ್ಧಾರಕ, ಜನರಕ್ಷಕ ರಾಜನಾಗಿದ್ದ ಬಗ್ಗೆ ಇತಿಹಾಸ ವಿದೆ. ಜನರನ್ನು ರಕ್ಷಿಸುವವರನ್ನು ರಾಕ್ಷ ಸರು ಎಂದು ಪುರಾಣಗಳಲ್ಲಿ ಬಿಂಬಿಸ ಲಾಗಿದೆ. ಕಂದಾಚಾರ, ಪುರಾಣ ಇವು ಗಳನ್ನು ತಿರುಚಿ ಬಲವಂತವಾಗಿ ಹೇರ ಲಾಗುತ್ತಿದೆ. ಮಹಿಷಾ ಕೆಟ್ಟ ವ್ಯಕ್ತಿಯಾಗಿದ್ದರೆ ಮೈಸೂರಿಗೆ ಆತನ ಹೆಸರು ಬರುತ್ತಿತ್ತೇ? ಎಂದು ಪ್ರಶ್ನಿಸಿದರು.

ಮಾಜಿ ಮೇಯರ್ ಪುರುಷೋತ್ತಮ್ ಮಾತನಾಡಿ, 20 ವರ್ಷದ ಸತತ ಸಂಶೋ ಧನೆ ಮೂಲಕ ಸಂಶೋಧಕರು ಭೂಪಟ ದಲ್ಲಿ ಮಹಿಷಾ ಮಂಡಲ ಇದ್ದ ಬಗ್ಗೆ ಮಾಹಿತಿ ಕಲೆ ಹಾಕಿದ್ದಾರೆ. ಮಹಿಷಾ ಮಂಡಲ ಇತ್ತು ಎಂಬುದು ಇತಿಹಾಸದ ಸಂಶೋ ಧನೆಗಳು ಹೇಳುತ್ತವೆ. ಹೀಗಿದ್ದೂ ಕೆಲ ವರು ಕಳೆದ ಎರಡು ವರ್ಷದಿಂದ ನಮ್ಮ ಮಹಿಷಾ ದಸರಾ ಆಚರಣೆಗೆ, ನಮ್ಮ ಭಾವನೆಗಳಿಗೆ ಅಡ್ಡಿಪಡಿಸುತ್ತಿದ್ದಾರೆ. ನಿಮ್ಮ ಧಾರ್ಮಿಕತೆಗೆ ಧಕ್ಕೆಯಾದರೆ ಪ್ರಶ್ನಿಸುವ ನೀವು, ನಮ್ಮ ಧಾರ್ಮಿಕ ಆಚರಣೆಗೆ ವಿರುದ್ಧವಾಗಿ ನಡೆದುಕೊಳ್ಳುವುದು ಎಷ್ಟು ಸರಿ ಎಂದು ಸಂಸದ ಪ್ರತಾಪ್‍ಸಿಂಹ ವಿರುದ್ಧ ಕಿಡಿಕಾರಿದರು.
ಸಮಾಜದಲ್ಲಿ ಸಾಮರಸ್ಯ, ಪ್ರೀತಿ, ಬಾಂಧವ್ಯ ಇರಬೇಕು. ಮಹಿಷಾ ಮಂಡ ಲದ ರಾಜನನ್ನು ಗೌರವಿಸುವುದು ನಮ್ಮ ಹಕ್ಕು. ಮತ್ತೇ ತಡೆದರೆ ನಾವು ಪ್ರತಿಭಟಿಸ ಬೇಕಾಗುತ್ತದೆ. ನಾವು ಶಾಂತಿಯ ಸಂಕೇತ ಭಗವಾನ್ ಬುದ್ಧನ ಅನುಯಾಯಿಗಳು. ನಮ್ಮ ಧಾರ್ಮಿಕತೆ ಮೇಲೆ ಗೂಂಡಾಗಿರಿ ಸಲ್ಲದು ಎಂದರು. ಸುದ್ದಿಗೋಷ್ಠಿಯಲ್ಲಿ ಹಿಂದುಳಿದ ವರ್ಗಗಳ ಜಾಗೃತ ವೇದಿಕೆ ರಾಜ್ಯಾಧ್ಯಕ್ಷ ಕೆ.ಎಸ್.ಶಿವರಾಮು, ಮಹಿಷಾ ದಸರಾ ಅನುಷ್ಠಾನ ಸಮಿತಿಯ ಸಿದ್ದ ಸ್ವಾಮಿ, ಚಿಕ್ಕಂದಾನಿ ಉಪಸ್ಥಿತರಿದ್ದರು.

Source:mysurumithra