ಅವಿಶ್ವಾಸ ನಿರ್ಣಯ: ಇಂದು ಲೋಕಸಭೆಯಲ್ಲಿ ಉತ್ತರ ನೀಡಲಿದ್ದಾರೆ ಪ್ರಧಾನಿ ಮೋದಿ
ಮಣಿಪುರ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಪ್ರತಿಪಕ್ಷಗಳು ಕೇಂದ್ರ ಸರ್ಕಾರದ ವಿರುದ್ಧ ಸಂಸತ್ತಿನಲ್ಲಿ ತಂದಿರುವ ಅವಿಶ್ವಾಸ ನಿರ್ಣಯಕ್ಕೆ ಪ್ರಧಾನಿ ಮೋದಿ ಇಂದು ಉತ್ತರ ನೀಡಲಿದ್ದಾರೆ.
ಮಂಗಳವಾರದಂದು ಕಾಂಗ್ರೆಸ್ ಸಂಸದ ಗೌರವ್ ಗೊಗೊಯ್ ಅವರು ಮಸೂದೆಯ ಮೇಲಿನ ಚರ್ಚೆಯನ್ನು ಆರಂಭಿಸಿದರು. ಇದನ್ನು ಲೋಕಸಭೆ ಸ್ಪೀಕರ್ ಓಂ ಬಿರ್ಲಾ ಒಪ್ಪಿಕೊಂಡಿದ್ದಾರೆ.
ಅವಿಶ್ವಾಸ ನಿರ್ಣಯಕ್ಕೆ ಉತ್ತರ ನೀಡಲು ಪ್ರಧಾನಿ ಇಂದು ಸದನಕ್ಕೆ ಹಾಜರಾಗಲಿದ್ದು, ನಿರ್ಣಯದ ಕುರಿತು ಮಾತನಾಡಲಿದ್ದಾರೆ ಎಂದು ಕೇಂದ್ರ ಸಚಿವರು ಕೆಳಮನೆಗೆ ತಿಳಿಸಿದ್ದಾರೆ.

ಧಾನಿ ನರೇಂದ್ರ ಮೋದಿ ಅವರು ಅವಿಶ್ವಾಸ ನಿರ್ಣಯವನ್ನು ಎದುರಿಸುತ್ತಿರುವುದು ಇದು ಎರಡನೇ ಬಾರಿ. ಆಂಧ್ರಪ್ರದೇಶಕ್ಕೆ ವಿಶೇಷ ವರ್ಗದ ಸ್ಥಾನಮಾನ ನೀಡುವ ಕುರಿತು 2018 ರಲ್ಲಿ ಮೋದಿ ಸರ್ಕಾರದ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸಲಾಗಿತ್ತು.
ವಿಪಕ್ಷಗಳಿಂದ ಪ್ರಧಾನಿಗೆ ಮೂರು ಪ್ರಶ್ನೆ
ಮೋದಿ ಮಣಿಪುರಕ್ಕೆ ಏಕೆ ಹೋಗಿಲ್ಲ?” ರಾಹುಲ್ ಗಾಂಧಿ, ವಿವಿಧ ಪಕ್ಷಗಳ ಸಂಸದರು, ಅಲ್ಲಿಗೆ ಹೋದರು, ಕೇಂದ್ರ ಗೃಹ ಸಚಿವರು ಅಲ್ಲಿಗೆ ಹೋದರು, ರಾಜ್ಯ ಗೃಹ ಸಚಿವರೂ ಅಲ್ಲಿಗೆ ಹೋಗಿದ್ದರು, ಆದರೆ ದೇಶದ ಪ್ರಧಾನಿಯಾಗಿರುವ ಮೋದಿ ಏಕೆ ಮಣಿಪುರಕ್ಕೆ ಹೋಗಲಿಲ್ಲ.
ಎರಡನೆಯ ಪ್ರಶ್ನೆ: ಮಣಿಪುರದ ಬಗ್ಗೆ ಮಾತನಾಡಲು ಮೋದಿ ಅವರು 80 ದಿನಗಳನ್ನು ಏಕೆ ತೆಗೆದುಕೊಂಡರು?
ಮೂರನೇ ಪ್ರಶ್ನೆ: ಮಣಿಪುರದ ಮುಖ್ಯಮಂತ್ರಿಯನ್ನು ಏಕೆ ವಜಾ ಮಾಡಿಲ್ಲ?ಗುಜರಾತಿನಲ್ಲಿ ನೀವು ರಾಜಕೀಯ ಮಾಡಬೇಕಾದಾಗ ನೀವು ಎರಡು ಬಾರಿ ಸಿಎಂ ಬದಲಾಯಿಸಿದ್ದೀರಿ. ಉತ್ತರಾಖಂಡದಲ್ಲಿ ಚುನಾವಣೆ ನಡೆದಾಗ ಹಲವು ಬಾರಿ ಸಿಎಂ ಬದಲಾಯಿಸಿದ್ದೀರಿ. ತ್ರಿಪುರಾದಲ್ಲಿ ಚುನಾವಣೆ ಹತ್ತಿರವಾದಾಗ ಅಲ್ಲಿಯೂ ಸಿಎಂ ಬದಲಾಯಿಸಿದ್ದೀರಿ. ಮಣಿಪುರ ಸಿಎಂಗೆ ನೀವೇಕೆ ಆಶೀರ್ವಾದ ಮಾಡುತ್ತಿದ್ದೀರಿ ಎಂದು ಪ್ರಶ್ನಿಸಿದೆ.