Yuvarathnaa Song: ಭಾರಿ ಬೇಸರದಲ್ಲಿ ಪುನೀತ್ ರಾಜ್ಕುಮಾರ್ ಫ್ಯಾನ್ಸ್; ಯುವರತ್ನ ಹಾಡು ಡಿಲೀಟ್ ಮಾಡುವಂತೆ ಅಭಿಮಾನಿಗಳ ಮೊರೆ
Puneet Rajkumar: ಬಹುನಿರೀಕ್ಷಿತ ಯುವರತ್ನ ಚಿತ್ರದ ಊರಿಗೊಬ್ಬ ರಾಜಾ ಆ ರಾಜಂಗೊಬ್ಬಳು ರಾಣಿ ಹಾಡು ಹೊಂಬಾಳೆ ಫಿಲ್ಮ್ಸ್ನ ಯೂಟ್ಯೂಬ್ ಚಾನೆಲ್ ಬಿಡುಗಡೆ ಮಾಡಿತ್ತು. ಹಾಡಿನಲ್ಲಿ ಪುನೀತ್ ರಾಜ್ಕುಮಾರ್ ಜೊತೆಗೆ ಚಿತ್ರ ನಾಯಕಿ ಸಹೇಷಾ ಸೆಹಗಲ್ ಸ್ಟೆಪ್ ಹಾಕಿದ್ದಾರೆ.
ಬೆಂಗಳೂರು: ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್ (Puneet Rajkumar) ನಟನೆಯ ಯುವರತ್ನ (Yuvarathnaa) ಸಿನಿಮಾದ ‘ಊರಿಗೊಬ್ಬ ರಾಜಾ ಆ ರಾಜಂಗೊಬ್ಬಳು ರಾಣಿ’ ಎನ್ನವ ಹಾಡು ಇದೇ ತಿಂಗಳ (ಫೆಬ್ರವರಿ) 25ಕ್ಕೆ ಬಿಡುಗಡೆಯಾಗಿತ್ತು. ಆದರೆ ಈ ಹಾಡಿಗೆ ಅಪ್ಪು ಅಭಿಮಾನಿಗಳು ಬೇಸರ ವ್ಯಕ್ತಪಡಿಸಿದ್ದಾರೆ. ಪವರ್ ಸ್ಟಾರ್ ರೇಂಜಿಗೆ ಈ ಸಾಂಗ್ ಅಲ್ಲ ಎಂದು ಹೇಳುತ್ತಿರುವ ಪುನೀತ್ ಫ್ಯಾನ್ಸ್ ತಮನ್.ಎಸ್ ಸಂಗೀತ ಮತ್ತು ಸಂತೋಷ್ ಆನಂದ್ ರಾಮ್ ಸಾಹಿತ್ಯದಿಂದ ನಿರಾಸೆಗೊಂಡಿದ್ದಾರೆ.
ಬಹುನಿರೀಕ್ಷಿತ ಯುವರತ್ನ ಚಿತ್ರದ ಊರಿಗೊಬ್ಬ ರಾಜಾ ಆ ರಾಜಂಗೊಬ್ಬಳು ರಾಣಿ ಹಾಡು ಹೊಂಬಾಳೆ ಫಿಲ್ಮ್ಸ್ನ ಯೂಟ್ಯೂಬ್ ಚಾನೆಲ್ ಬಿಡುಗಡೆ ಮಾಡಿತ್ತು. ಹಾಡಿನಲ್ಲಿ ಪುನೀತ್ ರಾಜ್ಕುಮಾರ್ ಜೊತೆಗೆ ಚಿತ್ರ ನಾಯಕಿ ಸಹೇಷಾ ಸೆಹಗಲ್ ಸ್ಟೆಪ್ಸ್ ಹಾಕಿದ್ದಾರೆ. ಹಾಡಿನಲ್ಲಿ ಪುನೀತ್ ರಾಜ್ಕುಮಾರ್ ಡಾನ್ಸ್ ಬಿಟ್ಟರೆ ಮತ್ತೇನೂ ಸಮಂಜಸವಾಗಿಲ್ಲ ಎಂದು ಹೇಳುತ್ತಿರುವ ಸಿನಿಪ್ರಿಯರು ಹಾಡನ್ನು ಡಿಲೀಟ್ ಮಾಡುವಂತೆ ಮನವಿ ಮಾಡಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ಬೇಸರ ವ್ಯಕ್ತಪಡಿಸಿರುವ ಅಪ್ಪು ಅಭಿಮಾನಿಗಳು ಈ ಊರಿಗೊಬ್ಬ ರಾಜಾ ಆ ರಾಜಂಗೊಬ್ಬಳು ರಾಣಿ ಹಾಡು ಪವರ್ ಸ್ಟಾರ್ ರೇಂಜಿಗೆ ಅಲ್ಲ ಎನ್ನುತ್ತಿದ್ದಾರೆ. ಹಾಡು ಬಿಡುಗಡೆಯಾದ ಕೆಲವೇ ಹೊತ್ತಿನಲ್ಲಿ ಹೆಚ್ಚು ವ್ಯೂಸ್ ಪಡೆದುಕೊಂಡಿದ್ದರೂ ಈ ಹಾಡಿಗೆ ಅದೆಷ್ಟೋ ಅಭಿಮಾನಿಗಳು ವಿರೋಧ ವ್ಯಕ್ತಪಡಿಸಿ ಸಾಂಗನ್ನ ಡಿಲೀಟ್ ಮಾಡುವಂತೆ ಬೇಡಿಕೆಯಿಟ್ಟಿದ್ದಾರೆ.
ಹಾಡನ್ನು ಡಿಲೀಟ್ ಮಾಡಿ ಎಂದು ಆಗ್ರಹಿಸುತ್ತಿರುವ ಅಪ್ಪು ಫ್ಯಾನ್ಸ್
ಹಾಯ್ ಪುನೀತ್ ಸರ್. ಏನಿದು ಮ್ಯೂಸಿಕ್ ಸರ್? ನಿಮ್ಮ ರೇಂಜಿಗೆ ಈ ಹಾಡು ಇಲ್ಲ. ಹಾಡು ಸ್ವಲ್ಪನೂ ಸರಿಯಿಲ್ಲ. ನಿಮ್ಮ ಮತ್ತು ಸಹೇಷಾ ಸೆಹಗಲ್ ಡ್ಯಾನ್ಸ್ ಬಿಟ್ಟರೆ ಮತ್ತೇನೂ ಇಷ್ಟವಾಗಲಿಲ್ಲ. ದಯವಿಟ್ಟು ಕನ್ನಡದ ಮ್ಯೂಸಿಕ್ ಡೈರೆಕ್ಟರ್ಗೆ ಚಾನ್ಸ್ ಕೊಡಿ. ಕನ್ನಡದ ಬಗ್ಗೆಗಂಧ ಗಾಳಿಯೂ ಗೊತ್ತಿಲ್ಲದವರಿಗೆ ಅವಕಾಶಗಳು ಕೊಟ್ಟರೆ ಹೀಗೆ ಆಗೋದು ಎಂದು ಕೆಲವರು ಹೇಳಿದರೆ, ಇನ್ನು ಕೆಲವರು ನಾನು ಪಕ್ಕಾ ಅಪ್ಪು ಫ್ಯಾನ್. ಈ ಹಾಡನ್ನು ಒಂದು ಸಾರಿನು ಕೇಳುವುದಕ್ಕೆ ಆಗುತಿಲ್ಲ. ದಯವಿಟ್ಟು ಈ ರೀತಿ ಬೇಜಾರು ಮಾಡಬೇಡಿ ಎಂದು ಹೇಳಿದ್ದಾರೆ. ಜೊತೆಗೆ ಸಂತೋಷ್ರವರು ಹಾಡು ಬರಿಯದೇ ಇದ್ದರೆ ಒಳ್ಳೆಯದು ಎಂದು ಪುನೀತ್ ಅಭಿಮಾನಿಗಳು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
Source: TV9Kannada